ಪೂರ್ಣಪ್ರಜ್ಞ ಕಾಲೇಜಿನಲ್ಲಿ ‘ಮುಕ್ತ ಪ್ರವೇಶ ದಿನ’

ಉಡುಪಿ : ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರವು, 26.11.2022ರ ಶನಿವಾರದಂದು ಪೂರ್ವಾಹ್ಣ 9.30ರಿಂದ ಅಪರಾಹ್ಣ 4.00 ಗಂಟೆಯವರೆಗೆ ‘ಮುಕ್ತ ಪ್ರವೇಶ ದಿನ’ (ಓಪನ್ ಹೌಸ್ ಡೇ) ಕಲ್ಪಿಸಿದೆ. 

ಈ ದಿನದಂದು ಇತಿಹಾಸ ವಿಭಾಗದ ಮ್ಯೂಸಿಯಂ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನ ಶಾಸ್ತ್ರ,  ಗಣಿತಶಾಸ್ತ್ರ, ಭೌತಶಾಸ್ತ್ರ, ಕಂಪ್ಯೂಟರ್ ವಿಭಾಗಗಳಿಂದ ಪ್ರಯೋಗಗಳ ಪ್ರಾತ್ಯಕ್ಷಿಕೆ, ಸಂಸ್ಕೃತ ವಿಭಾಗದಿಂದ ಭಾರತೀಯ ಪರಂಪರೆಯ ಪರಿಚಯ ಮಾಡಿಕೊಡಲಾಗುತ್ತದೆ. 

ಒಳಾಂಗಣ ಕ್ರೀಡಾಂಗಣ, ಎನ್.ಸಿ.ಸಿ, ಎನ್.ಎಸ್.ಎಸ್, ರೆಡ್‌ಕ್ರಾಸ್, ಲೇಡಿಸ್ ಫೋರಮ್,  ವಾಣಿಜ್ಯ ವ್ಯವಹಾರ ಶಾಸ್ತ್ರ, ಸಾಂಸ್ಕೃತಿಕ ಸಂಘ ಮೊದಲಾದವುಗಳ ಕಾರ‍್ಯಚಟುವಟಿಕೆ ಕುರಿತು ನೇರವಾಗಿ ತಿಳಿಯುವುದಕ್ಕೂ ಅವಕಾಶ ಒದಗಿಸಲಾಗಿದೆ.

ಪದವಿಪೂರ್ವ ಕಾಲೇಜುಗಳ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಾರ್ವಜನಿಕರ  ಜ್ಞಾನ ವಿಕಾಸಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿಶೇಷ ಆಕರ್ಷಣೆಯಾಗಿ ದ್ವಿತೀಯ ಪಿ.ಯು.ಸಿ ಕಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ., ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply