ಎಸ್.ಎಸ್.ಎಲ್.ಸಿ~ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ : ಶೇ 100

ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸ0ಸ್ಥೆಯಾದ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ೨೦೨೨-೨೩ ಶೈಕ್ಷಣಿಕ ವರ್ಷದ ೧೦ನೇ ತರಗತಿಯಲ್ಲಿ ೧೦೦% ಫಲಿತಾಂಶ ದಾಖಲಿಸಿದೆ. ಈ ಬಾರಿ ೭೦ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು ೧೯ ವಿದ್ಯಾರ್ಥಿಗಳು `ಎ+’ ಶ್ರೇಣಿಯಲ್ಲಿ, ೨೨ ವಿದ್ಯಾರ್ಥಿಗಳು `ಎ’ ಶ್ರೇಣಿಯಲ್ಲಿ, ೧೩ ವಿದ್ಯಾರ್ಥಿಗಳು `ಬಿ+’ ಶ್ರೇಣಿಯಲ್ಲಿ ೧೪ ವಿದ್ಯಾರ್ಥಿಗಳು `ಬಿ’ ಶ್ರೇಣಿ ಮತ್ತು ೨ ವಿದ್ಯಾರ್ಥಿಗಳು ‘ಸಿ+’ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಂಧ್ಯಾ ಕಾರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದರು.

ಕುಮಾರ್ ಶ್ರೇಯಸ್ ಎಸ್. ತೋನ್ಸೆ ಕನ್ನಡದಲ್ಲಿ ೧೨೫, ಇಂಗ್ಲೀಷ್ ೧೦೦, ತೃತೀಯ ಭಾಷೆ ಹಿಂದಿ ೯೮ ಮತ್ತು ಗಣಿತದಲ್ಲಿ ೯೬, ವಿಜ್ಞಾನ ೯೯ ಹಾಗೂ ಸಮಾಜಶಾಸ್ತçದಲ್ಲಿ ೯೮ ಹೀಗೆ ೬೧೬ ಅಂಕಗಳಿಸಿದ್ದಾರೆ.

ಟ್ರಸ್ಟ್ನ ಆಡಳಿತ ಮಂಡಳಿ ಮತ್ತು ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply