Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಸಾಮಾಜಿಕ ಪಿಡುಗುಗಳಿಂದ ಸೂಕ್ತ ಅಂತರ ಕಾಯ್ದುಕೊಳ್ಳಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಾಧ್ಯಾಪಕ ಪ್ರೋ | ಬಾಲಕೃಷ್ಣ ಮದ್ದೋಡಿ

ತಾಲೂಕು ಆಡಳಿತ , ಬೈಂದೂರು,‌ ಸರಕಾರಿ ಪದವಿ ಪೂರ್ವ ಕಾಲೇಜು, ಬೈಂದೂರು ಜಂಟಿ ಆಶ್ರಯದಲ್ಲಿ ಶ್ರೀ ಶ್ರೀ ಡಾ || ಮಹಾಂತ ಶಿವಯೋಗಿಗಳ ಜನ್ಮ  ದಿನಾಚರಣೆಯ ಪ್ರಯುಕ್ತ “ವ್ಯಸನ ಮುಕ್ತ ದಿನಾಚರಣೆ” ಬೈಂದೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿ ಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಂಜುನಾಥ್ ಪಿ ನಾಯಕ್  ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ಡಿ ವೈ ಎಸ್ ಪಿ ಶ್ರೀ ಶ್ರೀಕಾಂತ್ , ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆ ಯಿಂದಾಗುವ ದುಷ್ಪರಿಣಾಮಗಳು ಹಾಗೂ ಮಾದಕ ವಸ್ತು ತಡೆ ಕಾಯ್ದೆ, ಕೋಟ್ಪಾ ಕಾಯಿದೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಾಧ್ಯಾಪಕ  ಪ್ರೋ | ಬಾಲಕೃಷ್ಣ ಮದ್ದೋಡಿ ಮಾತನಾಡುತ್ತಾ, ಜೀವನವನ್ನು ರೂಪಿಸುವಾಗ ಸೂಕ್ತ ಮಾರ್ಗದರ್ಶಕರ ಆಯ್ಕೆ ಅತ್ಯಂತ ಅವಶ್ಯಕ, ಆಧುನಿಕ ಜಗತ್ತಿನ ಠಾಕು ಠೀಕುಗಳಿಗೆ ಮೈಮರೆಯದೆ ಸಾಮಾಜಿಕ ಪಿಡುಗುಗಳಿಂದ ಸೂಕ್ತ ಅಂತರ ಕಾಯ್ದುಕೊಂಡಲ್ಲಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.
ಮಾದಕ ವಸ್ತುಗಳು ಆರೋಗ್ಯದ ಮೇಲೆ ಉಂಟುಮಾಡುವ  ಪರಿಣಾಮಗಳು, ಬದುಕನ್ನು ದುಸ್ತರಗೊಳಿಸುವ ಪರಿಯನ್ನು ಸ್ಥೂಲ ವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ .ರಾಜೇಶ್ ತಿಳಿಸಿದರು..ಇನ್ನೋರ್ವ ಸಂಪನ್ಮೂಲ ವ್ಯಕ್ತಿ , ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀ ರಾಘವೇಂದ್ರ ಗುಡಿಗಾರ್ ಮಾತನಾಡುತ್ತಾ..ಡಾ| ಮಹಾಂತ ಶಿವಯೋಗಿಗಳು ಸಮಾಜವನ್ನು ವ್ಯಸನ ಮುಕ್ತವಾಗಿಸುವ ಸಂಕಲ್ಪದೊಂದಿಗೆ ನಡೆಸಿದ ‘ ಮಹಾಂತ ಜೋಳಿಗೆ ವ್ಯಸನ ಮುಕ್ತ ಆಂದೋಲನ’ ಸಹಸ್ರಾರು ಜನರನ್ನು ವ್ಯಸನ ಮುಕ್ತವಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದರು…ಇಂತಹ ಪ್ರಾತ:ಸ್ಮರಣೀಯರ ಜೀವನಾದರ್ಶಗಳೇ ನಮಗೆ ದಾರಿದೀಪವಾಗಲಿ  ಎಂದರು….
ಬೈಂದೂರಿನ ಉಪ ತಹಶೀಲ್ದಾರ್ ಶ್ರೀ  ಭೀಮಪ್ಪ,  ಶ್ರೀ ಸುರೇಶ್ ,ಸಹಾಯಕ ನಿರ್ದೇಶಕರು, ತಾಲೂಕು ಪಂಚಾಯತ್ ಬೈಂದೂರು,  ಸಪಪೂ ಕಾಲೇಜಿನ ಕಾರ್ಯಧ್ಯಕ್ಷರು ಶ್ರೀ  ಗಿರೀಶ್ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ನಾಗೇಶ್ ನಾಯ್ಕ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು ಶ್ರೀ ರಾಮಚಂದ್ರ .ಎಸ್. ಉಪಸ್ಥಿತರಿದ್ದರು…ಉಪನ್ಯಾಸಕ ಹರೀಶ್ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ಸುಧಾಕರ್ ಪಿ ವಂದಿಸಿದರು.ಉಪನ್ಯಾಸಕರಾದ ಉದಯ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಲಕ ಶಿಕ್ಷಕರಾದ ಶ್ರೀ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು..
ಕಾರ್ಯಕ್ರಮದ ಕೊನೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜು, ಬೈಂದೂರು ಇಲ್ಲಿನ ವಿದ್ಯಾರ್ಥಿಗಳಿಂದ ವ್ಯಸನಮುಕ್ತ ಭಾರತ ಬೀದಿ ನಾಟಕ ಪ್ರದರ್ಶನಗೊಂಡಿತು. .ಸುರಭಿ (ರಿ) ಬೈಂದೂರು ಸಹಕಾರದೊಂದಿಗೆ , ಶಿಕ್ಷಕ ಸದಾನಂದ ಬೈಂದೂರು ಹಾಗೂ ಉಪನ್ಯಾಸಕ ಯೋಗೀಶ್ ಬೈಂದೂರು ನಿರ್ದೇಶನ,ಶಿಕ್ಷಕ ಸುಧಾಕರ್ ಪಿ ನಿರ್ವಹಣೆಯಲ್ಲಿ ಬೀದಿನಾಟಕ ಅತ್ಯದ್ಬುತವಾಗಿ ಮೂಡಿ ಬಂದು ಪ್ರಶಂಸೆಗೆ ಪಾತ್ರವಾಯಿತು…
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!