ಪೂರ್ಣಪ್ರಜ್ಞ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ.

ಮ೦ಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ  ಸೇವಾ ಯೋಜನೆ ಹಾಗೂ ಪೂರ್ಣಪ್ರಜ್ಞ ಕಾಲೇಜು  ರಾಷ್ಟ್ರೀಯ   ಸೇವಾ ಯೋಜನಾ ಘಟಕಗಳ ಸಹಯೋಗದಲ್ಲಿ ಉಡುಪಿ ತಾಲೂಕಿನ ಇನ್ನಂಜೆಯ ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಏಳನೇ ದಿನವಾದ 30.12.2022 ರಂದು ಸಮಾರೋಪ ಸಮಾರಂಭಕ್ಕಾಗಿ ಮುಖ್ಯ ಅತಿಥಿಗಳಾಗಿ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮಾನ್ಯ ಸಚಿವರು, ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಇವರು ಆಗಮಿಸಿದ್ದರು. 
ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಅವರು ವಹಿಸಿದ್ದರು. ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪುಂಡರೀಕಾಕ್ಷ ಕೊಡಂಚ, ಎಸ್.ವಿ.ಎಚ್. ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಅನಂತ ಮುಡಿತ್ತಾಯ, ಶ್ರೀಮತಿ ಮಾಲಿನಿ ಶೆಟ್ಟಿ ಅಧ್ಯಕ್ಷರು, ಜೆ.ಸಿ.ಐ., ಶಂಕರಪುರ ಜಾಸ್ಮಿನ್ ಅವರು ಉಪಸ್ಥಿತರಿದ್ದರು.
 
ಕೋಟ ಶ್ರೀನಿವಾಸ ಪೂಜಾರಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, “ಭಾರತಕ್ಕೆ ಸ್ವಾತಂತ್ರ್ಯ ದೊರೆತು 75ವರ್ಷಗಳಾದರೂ ಅಸ್ಪೃಶ್ಯತೆ ಎನ್ನುವುದು ಇಂದಿಗೂ ತಾಂಡವವಾಡುತ್ತಿದೆ. ಇದು ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ.
ದೇಶವನ್ನು ಜಾತಿ, ಧರ್ಮದ ಆಧಾರದಲ್ಲಿ ನೋಡುವುದೇ ಇದಕ್ಕೆ ಮುಖ್ಯ ಕಾರಣ. ದೇಶವೆಂದರೆ ಜನರೇ ಹೊರತು ಯಾವುದೇ ಒಂದು ಜಾತಿ, ಧರ್ಮವಲ್ಲ. ಈ ನಿಟ್ಟಿನಲ್ಲಿ ನಾವೆಲ್ಲ ಯೋಚಿಸಿದ್ದೆ ಆದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುತ್ತದೆ” ಎಂದು ತಿಳಿಸಿದರು.
 
ಕಾರ್ಯಕ್ರಮದಲ್ಲಿ ಶ್ರೀಮತಿ ಸುಪರ್ಣ,  ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳು ಘಟಕ- 1 ಇವರು ಶಿಬಿರದ ವರದಿಯನ್ನು ಓದಿದರು. ಸಂದೀಫ್ ಘಟಕ- 2 ರ ಯೋಜನಾಧಿಕಾರಿಗಳು ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು. ಸಹಯೋಜನಾಧಿಕಾರಿಗಳಾದ ಡಾ. ನಾಗರಾಜ ಜಿ.ಪಿ., ಕುಮಾರಿ ಸ್ವಾತಿ ಅವರು ಉಪಸ್ಥಿತರಿದ್ದರು. 
 
 
 
 
 
 
 
 
 
 
 

Leave a Reply