ದಿಶಾ: 2022 – ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಉಚಿತ ಆನ್ ಲೈನ್ ವಿಚಾರ ಸಂಕಿರಣ

ಪುತ್ತೂರಿನ ಅನಿಕೇತನ ಎಜುಕೇಶನಲ್ ಟ್ರಸ್ಟ್(ರಿ) ಹಾಗೂ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ (ಉದಯವಾಣಿಯ ಅಂಗಸoಸ್ಥೆ) ಇವುಗಳ ಜಂಟಿ ಆಶ್ರಯದಲ್ಲಿ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿಶೇಷ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದ್ದು, ದಿನಾಂಕ 1 ಮೇ 2022ನೇ ಆದಿತ್ಯವಾರ ಸಂಜೆ ಗಂಟೆ 7.30ಕ್ಕೆ ಜರುಗಲಿದೆ. ರಾಜ್ಯ ಮಟ್ಟದ ಈ ವಿಚಾರ ಸಂಕಿರಣದಲ್ಲಿ, ಎನ್.ಐ.ಟಿ.ಕೆ.ಸುರತ್ಕಲ್ ನ ಪ್ರಾಧ್ಯಾಪಕರಾದ ಶ್ರೀ ಶ್ರುತಕೀರ್ತಿರಾಜ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ವಿಜ್ಞಾನ ವಿಭಾಗದ ಉನ್ನತ ಶಿಕ್ಷಣ, ಪ್ರಸಕ್ತ ಶೈಕ್ಷಣಿಕ ಮತ್ತು ಔದ್ಯೋಗಿಕ ಬದಲಾವಣೆಗಳು, ಅವಕಾಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಮಣಿಪಾಲ ಟೆಕ್ನಾಲಜೀಸ್ ಲಿ. ಸಂಸ್ಥೆಯು ತಯಾರಿಸಿದ ವಿದ್ಯಾರ್ಥಿಸ್ನೇಹಿ ವೆಬ್ ಪೋರ್ಟಲ್ GetmiClass ಮೂಲಕ ಕಾರ್ಯಾಗಾರ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು https://forms.gle/Mi3rLPgvPQwcJcJv6
ಮೂಲಕ ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: 8277300111, 8277300222

 
 
 
 
 
 
 
 
 
 
 

Leave a Reply