ಮಹಾತ್ಮಾ ಗಾಂಧಿ ಪ್ರೌಢಶಾಲೆ ಸಾಹೇಬರಕಟ್ಟೆ ಇದರ ವಾರ್ಷಿಕ ದಿನಾಚರಣೆ ಹಾಗು ಬಹುಮಾನ ವಿತರಣಾ ಸಮಾರಂಭ

ಮಹಾತ್ಮಾ ಗಾಂಧಿ ಪ್ರೌಢಶಾಲೆ ಸಾಹೇಬರಕಟ್ಟೆ  ಇದರ 2022-23ನೆಯ ಸಾಲಿನ ಬಹುಮಾನ ವಿತರಣಾ ಸಮಾರಂಭ ಹಾಗೂ ವಾರ್ಷಿಕ ದಿನಾಚರಣೆ ಇಂದು ಜರಗಿತು. ದೀಪ ಪ್ರಜ್ವಾಲನೆಯ ಮೂಲಕ  ಶಾಲಾಭಿವೃದ್ಧಿ ಸಮಿತಿಯ ಸದಸ್ಯ, ಉದ್ಯಮಿ ವೈ ಸಂಕಯ್ಯ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

 ಮುಖ್ಯ ಅಭ್ಯಾಗತರಾಗಿ   ಸಂಸ್ಥೆಯ ಸ್ಥಾಪಕ ಮುಖ್ಯ ಶಿಕ್ಷಕ ಶ್ರೀ ಎಂ ವೀರಣ್ಣ ಶೆಟ್ಟಿ ಯವರು ಮಾತನಾಡುತ್ತಾ “ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಕಲ್ಪನೆಯಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ರೀತಿಯಲ್ಲಿ ಗುರುತಿಸಿಕೊಂಡ ಈ ಸಂಸ್ಥೆ   ರಾಜ್ಯಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿ ಸಾಧನೆ ತೋರಲಿ. ಇಲ್ಲಿ ಎಲ್ಲರ ಸೇವೆ ಪರಿಶ್ರಮ ಅನೂಹ್ಯ ” ಎಂದರು. 

ಸಮಾರಂಭದ  ಅಬ್ಯಾಗತರಾಗಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಹಾಗೂ ಹಳೆ ವಿದ್ಯಾರ್ಥಿ ಶ್ರೀ ಅಶೋಕ್ ಪ್ರಭು  ದತ್ತಿನಿಧಿ ಬಹುಮಾನಗಳನ್ನೂ ,  ಉದ್ಯಮಿ ಶ್ರೀ ಸಂದೀಪ್ ಶೆಟ್ಟಿ ಶಿರಿಯಾರ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ಬಹುಮಾನಗಳನ್ನೂ ವಿತರಿಸಿ ಶುಭ ಹಾರೈಸಿದರು .  ಸಂಸ್ಥೆಯಲ್ಲಿ 9 ವರ್ಷಗಳ ಕಾಲ ಅಕ್ಷರ ದಾಸೋಹ ಕಾರ್ಯ ಕ್ರಮದಡಿ ಅಡುಗೆ ಸಹಾಯಕಿಯಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿಗೈದ ಕಾವೇರಿ ಅವರನ್ನು ಸಮ್ಮಾನಿಸಲಾಯಿತು. 

ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ,ಅಲ್ತಾರ್ ನಿರಂಜನ್ ಹೆಗ್ಡೆ ,ಸದಸ್ಯ ಶ್ರೀ ಪ್ರದೀಪ್ ಬಲ್ಲಾಳ್ , ಶ್ರೀ ದಿನೇಶ್ ನಾಯಕ್ ಶಿರಿಯಾರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಕಾರ್ಯದರ್ಶಿ ಎಂ ರವೀಂದ್ರನಾಥ್ ಕಿಣಿ, ಶ್ರೀ ಕೃಷ್ಣ ಅಡಿಗ, ಶೇಖರ ಸುವರ್ಣ, ಬಾಬಣ್ಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ  ಪ್ರಸಾದ್ ಶೆಟ್ಟಿ ಕೊಳ್ಕೆಬೈಲ್  ವಹಿಸಿದರು. 

ಮುಖ್ಯ ಶಿಕ್ಷಕ ಸತೀಶ್ ನಾಯ್ಕ್ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಸಹಶಿಕ್ಷಕಿ ಡೈಸಿ ಡಿಸಿಲ್ವ ವಂದಿಸಿದರು. ಬಹುಮಾನ ವಿಜೇತರ ಯಾದಿಯನ್ನು ಶಿಕ್ಷಕ ಶ್ರಿ ಸುಬ್ರಹ್ಮಣ್ಯ ಹಾಗೂ ಕುಮಾರಿ ಗೀತಾ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯ ಕುಮಾರ್ ಶೆಟ್ಟಿ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.

 
 
 
 
 
 
 
 
 
 
 

Leave a Reply