ಆಚಾರ್ಯಾಸ್ ಏಸ್: ಸಿಯಿಟಿ, ನೀಟ್ ಕ್ರಾಶ್ ಕೋರ್ಸ್ ಏಪ್ರಿಲ್ 1ರಿಂದ ಆರಂಭ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ
ಆಚಾರ್ಯಾಸ್ ಏಸ್ ವತಿಯಿಂದ ಸಿ.ಇ.ಟಿ,ನೀಟ್ ಕ್ರಾಶ್ ಕೋರ್ಸ್ ಏಪ್ರಿಲ್ 1ರಿಂದ ಆರಂಭವಾಗಲಿದೆ.

ಸಿಯಿಟಿ ನೀಟ್ ಕ್ರಾಶ್ ಕೋರ್ಸ್:
ಇದೇ ಬರುವ ಜೂನ್ ತಿಂಗಳಲ್ಲಿ ಜರಗಲಿರುವ ನೀಟ್ ಸಿಯಿಟಿ-2023ರ ಪರೀಕ್ಷೆಗೆ ಪೂರ್ವಭಾವಿಯಾಗಿ ನಿರಂತರ 45 ದಿನಗಳ ಸಿಯಿಟಿ ಕ್ರಾಶ್ ಕೋರ್ಸ್ ತರಬೇತಿಯು ಏಪ್ರಿಲ್ 1 ನೇ ತಾರೀಖಿನಿಂದ ಆರಂಭವಾಗಿ ಮೇ 15 ರ ವರೆಗೆ 40 ದಿನಗಳ ಕಾಲ ಜರಗಲಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಈ ತರಬೇತಿಯನ್ನು ಆಯೋಜಿಸಲಾಗಿದೆ.

ಈ ತರಬೇತಿಯ ಜೊತೆಗೆ ಮಣಿಪಾಲದ ಮಾಹೆ ಪ್ರವೇಶ ಪರೀಕ್ಷೆ,ಕಾಮೆಡ್ ಕೆ ಪ್ರವೇಶ ಪರೀಕ್ಷೆಗೂ ತರಬೇತಿಯನ್ನು ಆಯೋಜಿಸಲಾಗುತ್ತಿದೆ.ಬಯಾಲಜಿಯ ತರಬೇತಿಗೆ ಸಂಬಂಧಿಸಿದಂತೆ ಮಾನವ ಶಾಸ್ತ್ರದ ಕುರಿತಾಗಿ ನಾಡಿನ ಪ್ರಸಿದ್ಧ ವೈದ್ಯರುಗಳು ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ ಸಹಿತ ತರಬೇತಿ ಆಯೋಜಿಸಲಾಗಿದೆ.

ಜೊತೆಗೆ ಮಾದರಿ ಪ್ರವೇಶ ಪರೀಕ್ಷೆಗಳನ್ನೂ ಕೂಡಾ ನಡೆಸಲಾಗುವುದು. ಸಂಸ್ಥೆಯ ಗ್ರಂಥಾಲಯದಲ್ಲಿರುವ ವಿವಿಧ ಪ್ರಕಾಶಕ ರುಗಳ ಕೃತಿಯು ವಿದ್ಯಾರ್ಥಿಗಳ ಅಧ್ಯಯನಕ್ಕೆ ಉಚಿತವಾಗಿ ಲಭಿಸಲಿದೆ.ಈ ಹಿಂದಿನ ವರ್ಷ ಜರಗಿದ ಕ್ರಾಶ ಕೋರ್ಸ್ ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಗರಿಷ್ಠ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿ ಪ್ರಸಿದ್ಧ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಕೃತ ಅಧ್ಯಯನ ನಡೆಸುತ್ತಿದ್ದಾರೆ.

10ನೇ ತರಗತಿ:
ವಿಜ್ಞಾನ ಹಾಗೂ ಗಣಿತ ಶಾಸ್ತ್ರದ ವಿಷಯವಾಗಿ ಏಪ್ರಿಲ್ ಮೊದಲ ವಾರದಿಂದ ಶಾಲೆ ಆರಂಭವಾಗುವರೆಗೆ ಹತ್ತನೇಯ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿದೆ.ಶಾಲೆ ಆರಂಭವಾದ ನಂತರ ಈ ತರಬೇತಿಯು 2024 ನೇ ಇಸವಿಯ ಮಾರ್ಚ್ ವರೆಗೆ ಪ್ರತೀ ಶನಿವಾರ ಸಂಜೆ ಹಾಗೂ ಭಾನುವಾರ ಮುಂಜಾನೆ ಜರಗಲಿದೆ. ಮಾದರಿ ಪರೀಕ್ಷೆ, ಉಪನ್ಯಾಸಗಳ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ವಿಶಿಷ್ಟ ಕಾರ್ಯಕ್ರಮ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಬಹುತೇಕ ತರಗತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾವಣಿಯಾಗಿದ್ದು ಕೆಲವೇ ಸೀಟುಗಳು ಉಳಿದಿವೆ.

ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟ್ರಮಣ ದೇವಾಲಯದ ಸಮೀಪದಲ್ಲಿರುವ ರಾಧೇಶಾಂ ಕಟ್ಟಡದ ಆಚಾರ್ಯಾಸ್ ಏಸ್ ಕಚೇರಿ, ಅಥವಾ ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸನ ಏಸ ಕಚೇರಿಯ ಮೊಬೈಲ್ ಸಂಖ್ಯೆ 99014 20714 ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಶ್ರೀ ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply