ಕಾರ್ಕಳ ಶಾಸ್ತ್ರೀಯ ಸಂಗೀತ ಸಭಾದ ಕಾರ್ಯ ಶ್ಲಾಘನೀಯ: ಉಮಾ ಉದಯ ಶಂಕರಿ

ಕಾರ್ಕಳ : ಕಾರ್ಕಳದ ಶಾಸ್ತ್ರೀಯ ಸಂಗೀತ ಸಭಾ ಕರಾವಳಿ ಜಿಲ್ಲೆಗೆ ಸಲ್ಲಿಸಿರುವ ಸೇವೆ ಶ್ಲಾಘನೀಯವೆಂದು ಉಡುಪಿ ರಾಗಧನದ ಕಾರ್ಯದರ್ಶಿ ಉಮಾ ಉದಯಶಂಕರಿ 32ನೆಯ ಕಾರ್ಕಳ ಸಂಗೀತ ಮಹೋತ್ಸವವನ್ನು ಉದ್ಘಾಟಿಸಿ ಹೇಳಿದರು.
ಶಾಸ್ತ್ರೀಯ ಸಂಗೀತ ಸಭಾ ಮತ್ತು  ಬಿ ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ 32ನೆಯ ಎರಡು ದಿನದ ಸಂಗೀತ ಮಹೋತ್ಸವ ಉದ್ಘಾಟಿಸಿದರು. ಕಳೆದ 32 ವರ್ಷಗಳಿಂದ ದೇಶದ ಅನೇಕ ಸಂಗೀತ ಕಲಾವಿದರನ್ನು ಸಭೆಗೆ ಆಹ್ವಾನಿಸಿ ಸಂಗೀತವನ್ನು ಸಭೆ ಪ್ರೋತ್ಸಾಹಿಸುತ್ತಾ ಬಂದಿದೆ.
ವಿಶೇಷವಾಗಿ ಯುವ ಕಲಾವಿದರನ್ನ ಕರಾವಳಿಗೆ ಪರಿಚಯಿಸಿದ್ದಾರೆ ಎಂದರು. ಸಭಾದ ಅಧ್ಯಕ್ಷ  ಎಸ್ ನಿತ್ಯಾನಂದ ಪೈ ಅಧ್ಯಕ್ಷತೆಯನ್ನು ವಹಿಸಿದ್ದರು. ಭಾರತಿ ಕೃಷ್ಣ ಪ್ರಭು., ಕಾರ್ಯದರ್ಶಿ ಡಾ. ಪ್ರಕಾಶ ಶೆಣೈ , ಕನ್ನಡ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್,ಕೋಶಾಧಿಕಾರಿ ಪ್ರಭಾಕರ್ ಪಂಡಿತ್ ಉಪಸ್ಥಿತರಿದ್ದರು.
ಪ್ರಥಮ ದಿನ ಸಂಗೀತ ಗುರು ವೆಂಕಟೇಶ್ ಚಿಪ್ಳೂಂಕರ್, ಮಾಳ ಇವರ ಶಿಷ್ಯಂದಿರಿಂದ ಕರ್ನಾಟಕ ಸಂಗೀತ, ಬೆಂಗಳೂರಿನ ವಿದ್ವಾನ್ ವಿಷ್ಣು ವೆಂಕಟೇಶ್ ರವರ ತಂಡದವರಿಂದ ಮ್ಯಾಂಡೊಲಿನ್ ವಾದನ ನಡೆಯಿತು.
ಕೊನೆಯಲ್ಲಿ ಪುಣೆಯ ಖ್ಯಾತ ಗಾಯಕ ರವಿಕಿರಣ್ ಜಿ. ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಿತು. ಮದನ ಮೋಹನ್ (ಪಿಟೀಲು), ಮನ್ನಾರ್ ಕೋವಿಲ್ ಜೆ. ಬಾಲಾಜಿ ಹಾಗೂ ಪವನ್ (ಮೃದಂಗ), ಕಾರ್ತಿಕ್ ಭಟ್ (ಕಂಜೀರ),  ಮಾನ್ಯೂರ್ ಉನ್ನಿಕೃಷ್ಣನ್ ಹಾಗೂ ಫಣೀಂದ್ರ (ಘಟಂ) ನಲ್ಲಿ ಸಹಕರಿಸಿದರು.
 
 
 
 
 
 
 
 
 
 
 

Leave a Reply