ತಮ್ಮ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಡಗಳನ್ನು ವಿತರಿಸಿ ಮಾದರಿಯಾದ ದಂಪತಿಗಳು

ಪಡುಬಿದ್ರಿ : ಗಂಗೂ ಹೊಸಮನೆಯ ಪಿ.ಎಚ್.ಪಾರ್ಥಸಾರಥಿ – ಶ್ರೀಮತಿ ಶಾಂತಾ ಪಾರ್ಥಸಾರಥಿ ಅವರು ತಮ್ಮ ‘ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ’ ಧಾರ್ಮಿಕ ಕಾರ್ಯಕ್ರಮ ನಡೆಯಿತು. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಮುನ್ನೂರು ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ತಮ್ಮ ಪರಿಸರ ಪ್ರೀತಿಯನ್ನು ಮೆರೆದರು .

ಈ ಹಿಂದೆ ಭಾರತೀಯ ಕಿಸಾನ್ ಸಂಘದ ಪಡುಬಿದ್ರಿ ವಿಭಾಗದ ಮಾಜಿ ಅಧ್ಯಕ್ಷರಾಗಿದ್ದ ಪಾರ್ಥಸಾರಥಿಯವರು ಸಹಜವಾಗಿ ಪರಿಸರ ರಕ್ಷಣೆ – ಪರಿಸರ ಬೆಳವಣಿಗೆಯ ಕಾಳಜಿವುಳ್ಳವರಾಗಿದ್ದಾರೆ. ತಮ್ಮ ಈ ಕಾರ್ಯಕ್ರಮದಲ್ಲಿ ಬಂಧು ಬಾಂಧವರು ,ಅಭಿಮಾನಿಗಳು ,ಸಮಾಜದ ಗಣ್ಯರು ಭಾಗವಹಿಸುವ ಸಂದರ್ಭ ಸೂಕ್ತವೆಂದು ಸಸಿಗಳ ವಿತರಿಸಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ ಅಭಿಯಾನದ ಅಳವಡಿಕೆಯ ಸಾಧ್ಯತೆಯನ್ನು ಸ್ವತಃ ತಾವೇ ಮಾಡಿ ಸಮಾಜಕ್ಕೆ ಮಾದರಿಯಾದರು.

ವೇ.ಮೂ. ಶ್ರೀನಿವಾಸ ಭಟ್ ಗೆ ಮೊದಲು ಪಾರಿಜಾತ ಹೂವಿನ ಗಿಡವನ್ನು ವಿತರಿಸಿ ಗಿಡಗಳನ್ನು ವಿತರಿಸುವ ಪ್ರಕ್ರಿಯೆ ಆರಂಭಿಸಿದರು .ಭಾರತ ಕಿಸಾನ್ ಸಂಘದ ಮಾಜಿ ಕಾರ್ಯದರ್ಶಿ ಸದಾಶಿವ ಆಚಾರ್ಯ ಅವರು ಉಪಸ್ಥಿತರಿದ್ದರು .ವಿಘ್ನೇಶ ಕುಮಾರ್ ,ಸಂಪತ್ ಕುಮಾರ್, ಮತ್ತು ಗಣೇಶ ಐತಾಳ್ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು.

 
 
 
 
 
 
 
 
 
 
 

Leave a Reply