ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉಡುಪಿ ಘಟಕದಿಂದ 8ನೇ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು (ರಿ)
ಇವರ ಅಂತರ್ಜಾಲ ಉಪನ್ಯಾಸ ಸರಣಿ ಮಾಲಿಕೆಯಲ್ಲಿ ಈ ವಾರ ಉಡುಪಿ ಜಿಲ್ಲಾ ಘಟಕದಿಂದ ‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಆತ್ಮಕಥನಗಳು’ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನಾಡಿನ ಪ್ರಸಿದ್ಧ ವೈದ್ಯ ಸಾಹಿತಿಗಳಾದ ಡಾ. ವಸುಂಧರ ಭೂಪತಿಯವರು ನಡೆಸಿಕೊಟ್ಡರು.

ಡಾ ವಸುಂಧರ ಭೂಪತಿಯವರು ವೈದ್ಯಕೀಯ ಸಾಹಿತ್ಯಮಾಲೆಯಲ್ಲಿ ಹಲವು ಲೇಖನಗಳು ,ಮಹಿಳಾಪರ ಚಿಂತನೆಗಳ ಕುರಿತು ಲೇಖನಗಳು, ಉಪನ್ಯಾಸಗಳು ನಮಗೆ ಆಕಾಶವಾಣಿ, ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳ ಮೂಲಕ ದಿನನಿತ್ಯ ಕಾಣಸಿಗುತ್ತವೆ. ಹಾಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಡಾ .ವಸುಂಧರ ಭೂಪತಿಯವರು .

ಕಾರ್ಯಕ್ರಮದ ಉದ್ದಕ್ಕೂ ಮಹಿಳಾ ಆತ್ಮಕಥನಗಳ ಒಳ ಹೊರಗನ್ನ ಬಿಚ್ಚಿಟ್ಟರು. ಪ್ರತಿ ಮಹಿಳೆಗೂ ತನ್ನದಲ್ಲದ ಒಂದು ಅಂತರ್ಜಗತ್ತು ಒಂದಿದೆ. ಅಲ್ಲಿನ ತುಡಿತಗಳು , ಸಂವೇದನಶೀಲ ಪ್ರಜ್ಞೆಯೊಳಗೆ ಹೇಗೊ ನುಸುಳಿಕೊಂಡು ಆಕೆಯನ್ನ ಕಾಡ್ತಿರತ್ತೆ. ಅದರ ಪರಿಣಾಮವಾಗಿ ಸೃಜನಶೀಲತೆ ಎಚ್ಚೆತ್ತುಕೊಂಡ ಹಿನ್ನೋಟದಲ್ಲಿ ಬರವಣಿಗೆಯ ಬದುಕು ಅಧ್ಬುತವಾಗಿ ರೂಪುಗೊಳ್ಳತ್ತೆ.

ಆತ್ಮಕಥೆಯ ಮೂಲಕ ಬದುಕು ಸಾಹಿತ್ಯ ಅರಳಿದ ಬೆರಗನ್ನ ಓದುವುದು ನಮಗೆ ಹಿತ ಅನ್ಸತ್ತೆ. ಹಲವರಿಗೆ ಇದು ಪ್ರೇರಣೆ, ಸ್ಪೂರ್ತಿಯು ಆಗಬಹುದು,ಆತ್ಮ ಸ್ಥೈರ್ಯಕ್ಕೆ ನಾಂದಿಯಾಗಬಹುದು. ಇದು ಹುಸಿ ಕಥೆಯಲ್ಲ ಕೋಲ್ಮಿಂಚಿನಂತೆ ಅದು ಹೇಗೆ ಒಂದು ಕ್ಷಣದ ಮಿಂಚು ಸುತ್ತೆಲ್ಲ ಬೆಳಕು ಹರಡಿದ ಹಾಗೆ ಸಂವೇದನೆ ಮೂರ್ತಗೊಳ್ಳುವ ಕ್ಷಣಗಳು ಕೈ ದೀಪದಂತೆ ಹಿಡಿದವರಿಗಷ್ಟೇ ಬೆಳಕು ನೀಡದೆ ಎಲ್ಲರಿಗೂ ದಾರಿ ದೀಪವಾಗತ್ತೆ.

ಅನುಭವದ ಕೆನೆಗಟ್ಟಿದ ರೀತಿಗೆ ರುಚಿ ಹಲವರನ್ನ ತಲುಪುತ್ತದೆ.ಆತ್ಮಕಥೆಗಳು ಬರಿ ತನ್ನತನವನ್ನ ಬಿಂಬಿಸದೆ ಆ ಕಾಲಮಾನದ ಸಾಮಾಜಿಕ ಸಾಂಸ್ಕೃತಿಕ ಹಿನ್ನಲೆಗಳನ್ನ ಕೂಡ ದಾಖಲಿಸಿ ಸಾಮಾಜಿಕ ಹೊಣೆಗೆ ಪ್ರೇರೇಪಿಸತ್ತೆ. ಮಹಿಳಾ ಆತ್ಮಕಥನಗಳ ವಿಮರ್ಶೆ ಗಂಭೀರವಾಗಿ ಆಗಲೆಬೇಕು ಎಂದು ಒತ್ತಾಯಿಸಿದರು. ಹತ್ತು ಹಲವು ಚೌಕಟ್ಟಿನೊಳಗೆ ಇತಿಮಿತಿಯೊಳಗಿದ್ದರು ಓದುಗರು ಉಳಿದ ಭಾಗಗಳನ್ನ ಸಂಶೋಧನಾ ದೃಷ್ಟಿಯಿಂದ ತೆರೆದು ನೋಡಬೇಕು.

ಪ್ರತಿಯೊಬ್ಬ ಮಹಿಳೆ, ಯಾವುದೇ ಕ್ಷೇತ್ರದಲ್ಲಿ ಇದ್ದರು ಸರಿಯೇ ಪೌರಕಾರ್ಮಿಕರಿಂದ ವಿಜ್ಞಾನಿಗಳವರೆಗೆ ಅತ್ಮಕಥನಗಳು ಬರಬೇಕು. ಕಟ್ಟಿಕೊಂಡ ಬದುಕು ಬಿಚ್ಚಿಡುವುದು ಸುಲಭವಲ್ಲ. ಬಿಚ್ಚಿಟ್ಟ ಬಗೆ ಹಲವು ಸವಾಲುಗಳನ್ನ ಎದುರಿಸುತ್ತವೆ.ಆದರೂ ಅದು ಒಂದು ಸಾಮಾಜಿಕ ಜವಾಬ್ದಾರಿಯನ್ನು ಸಮಾಜಕ್ಕೆ ಕೊಡತ್ತೆ , ಹಾಗಾಗಿ ಮಹಿಳಾ ಆತ್ಮಕಥೆಗಳು ಬರಲೆಬೇಕು ಎಂಬ ಆಶಾದಾಯಕವನ್ನ ವ್ಯಕ್ತಪಡಿಸಿದರು.

ಆಯಾ ಕ್ಷೇತ್ರದಲ್ಲಿನ ಆಗು ಹೋಗುಗಳನ್ನ ಮಹಿಳೆ ಎದುರಿಸಿ ದಿಟ್ಟವಾಗಿ ನಿಂತ ಬಗೆಯನ್ನ ಆತ್ಮಶೊಧನೆಯ ಮುಖೇನಾ ಆತ್ಮಕಥನಗಳು ಪ್ರೇರಣೆಯನ್ನ ನೀಡುತ್ತವೆ ಎಂದು ಮನದಟ್ಟಿಸಿದರು.ಮಹಿಳಾ ಆತ್ಮಕಥೆಗಳು ಸ್ತ್ರೀ ಪರ ಚಿಂತನೆಗಳ ಹೊಸ ಸ್ವರೂಪವನ್ನ, ಚಿಂತನೆಗಳನ್ನ ತೆರೆದಿಡತ್ತದೆ. ಸ್ತ್ರೀ ವಾದ ಬೇರೆಯಲ್ಲ ಮಾನವತೆಯೇ. ಮಾನವತಾವಾದವನ್ನ ಗಾಂಧೀಜಿ, ಬಸವಣ್ಣ , ಬುದ್ದ ಹೇಳಿರುವಂತಹುದೆ.

ಎಲ್ಲರೂ ತೆರದ ಮನಸ್ಸಿನಿಂದ ಮಹಿಳಾ ಆತ್ಮಕಥನಗಳನ್ನ ಯಾವುದೇ ತಾರತಮ್ಯವಿಲ್ಲದಂತೆ ಸ್ವಾಗತಿಸಬೇಕು. ಪಂಜಾಬಿನ ಅಜಿತ್ ಕೌರ,ಅಮೃತ್ ಪ್ರೀತಂ, ಮಲೆಯಾಳಂನ ಕಮಲದಾಸ್, ಮರಾಠಿ ರಂಗಭೂಮಿಕೆಯಂದ ಬಂದಂತಹ ಅನೇಕ ಆತ್ಮಕಥನಗಳು, ದಲಿತ ಭೂಮಿಕೆಯಿಂದ ಬಂದಂತಹ ಮಹಿಳಾ ಆತ್ಮಕಥನಗಳು, ಮತ್ತು ನಮ್ಮವರೇ ಆದಂತಹ , ಪ್ರತಿಭಾ ನಂದಕುಮಾರು , ವಿಜಯಮ್ಮ , ಪ್ರೇಮಕಾರಂತ, ರಜನಿ ನರಹಳ್ಳಿ, ಭಾರ್ಗವಿ ನಾರಾಯಣ, ರಾಜೇಶ್ವರಿ ಪೂರ್ಣ ಚಂದ್ರ ತೇಜಸ್ವಿ, ವೈದ್ಯೆ ಡಾ ಹೆಚ್ ಗಿರಿಜಮ್ಮ, ಇನ್ನೂ ಅನೇಕರ ಆತ್ಮಕಥನಗಳು ಸಾಹಿತ್ಯಕವಾಗಿ ಸಾಂಸ್ಕೃತಿಕವಾಗಿ , ಮಹಿಳೆ ಎದುರಿಸುವ ಸವಾಲುಗಳಿಗೆ ಸಮಾಜವನ್ನ ಪ್ರಶ್ನಿಸುತ್ತಾ ಹೊಗುವಂತಹವುದೇ ಆಗಿವೆ.

ತಮ್ಮ ಅಸ್ಮಿತೆಯ ಜೊತೆಗೆ ನಮಗೆ ಇಂದಿಗೂ ಸಾಮಾಜದಲ್ಲಿ ಕುಟುಂಬದಲ್ಲಿ ಇರುವ ತಾರತಾಮ್ಯಗಳನ್ನ ಎತ್ತಿ ತೋರಿಸಿ. ಒಂದು ಸಾಮಾಜಿಕ ಹೊಣೆಗೆ ಪ್ರೇರೇಪಿಸುತ್ತದೆ ಎಂದು ಹಲವು ಆತ್ಮಕಥನಗಳನ್ನ ಉದಾಹರಿಸುವ ಮೂಲಕ ಸಂವಾದದಲ್ಲೂ ಉತ್ತರಿಸಿದರು. ಹೆಚ್ಚು ಹೆಚ್ಚು ಆತ್ಮಕಥನಗಳನ್ನ ಓದಬೇಕು. ಇದು ಚಿಂತನೆ ಆಲೋಚನೆ ಭಾವನೆಗಳ ಆಯಾಮವನ್ನ ವಿಸ್ತರಿಸುತ್ತಾ ಹೋಗುತ್ತೆ ಎಂದು ನುಡಿದರು.

ಆತ್ಮಕಥನಾ ಒಂದು ಕಲಾಕೃತಿಯ ಮಾದರಿಯಾಗಿರುವಂತಹದು ತನ್ನೊಳಗಿನ ಸತ್ಯಕ್ಕೆ ಅದು ಮುಖಾಮುಖಿಯಾಗಿ ಬರುವಂತಹದು ಆತ್ಮಕಥೆಯೆಂಬುದು ಮಹಿಳಾ ಪರ ಚಿಂತನೆಗಳ ಸಮಾಗಮ ಎಂದು ಉಪನ್ಯಾಸದುದ್ದಕ್ಕೂ ವಿಚಾರವನ್ನು ಅತ್ಯಂತ ಸಮಂಜಸವಾಗಿ ಪ್ರೇರಣದಾಯಕ ಮಾತುಗಳಲ್ಲಿ ಉಪನ್ಯಾಸವನ್ನು ಕೊಟ್ಟರು.

ಸಂವಾದಿಯಾಗಿ ಮುಂಬಯಿ ಘಟಕದ ಅಧ್ಯಕ್ಷರಾದ ಶ್ರೀ ವಿಶ್ವೇಶ್ವರ ಮೇಟಿ ಮತ್ತು ಕಲ್ಬುರ್ಗಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ. ಎಂ ಸಂಗೀತಾ ಪಾಟೀಲ್ ಹಿರೆಮಠ ಸಾಥ ನೀಡಿದರು.
ಪ್ರಾಸ್ತಾವಿಕ ನುಡಿಯನ್ನು ಶ್ರೀ ಎಚ್.ಎಸ್. ಬಸವರಾಜ್ ,ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಕೋಶಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮಂಡಿಸಿದರು.

ಉದ್ಘಾಟನೆಯನ್ನು ಶ್ರೀ ಕೊಟ್ರೇಶ್ ಎಸ್. ಉಪ್ಪಾರ್ ಸಂಸ್ಥಾಪಕ ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು ಇವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀಮತಿ ವಾಸಂತಿ ಅಂಬಲಪಾಡಿ ಜಿಲ್ಲಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉಡುಪಿ ಅಲಂಕರಿಸಿದ್ದರು.

ಕಾರ್ಯಕ್ರಮ ನಿರ್ವಹಣೆ ,ಶ್ರೀಮತಿ ಶಾಲಿನಿ ರುದ್ರಮುನಿ, ರಾಜ್ಯ ಉಪಾಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ವಹಿಸಿಕೊಂಡಿದ್ದರು. ನಿರೂಪಣೆ ,ಸುಮಾ ಕಿರಣ್. ತಾಲ್ಲೂಕು ಕಾರ್ಯದರ್ಶಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉಡುಪಿ ಮತ್ತು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟವರು , ಶ್ರೀ ಮೊಗೇರಿ ಶೇಖರ್ ದೇವಾಡಿಗ, ಬೈಂದೂರುರವರು. ಸ್ವಾಗತ ಭಾಷಣವನ್ನು ಅಮೃತಾ ಸಂದೀಪ್, ತಾಲ್ಲೂಕು ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉಡುಪಿ.ಮತ್ತು ವಂದನಾರ್ಪಣೆ ಅನಿತಾ ಸಿಕ್ವೆರಾ ಜಿಲ್ಲಾ ಕಾರ್ಯದರ್ಶಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಉಡುಪಿ ವಹಿಸಿದ್ದರು. 

ಅಂತರ್ಜಾಲ ಆಧಾರಿತ ಎಂಟನೇ ಉಪನ್ಯಾಸ ಮಾಲಿಕೆಯ ಸರಣಿಯಲ್ಲಿ ರಾಜ್ಯದ ,ಜಿಲ್ಲಾ ಮತ್ತು ತಾಲ್ಲೋಕು ಪದಾಧಿಕಾರಿಗಳು,ಮಹಾರಾಷ್ಟ್ರ, ಕೇರಳದಿಂದ ಪದಾಧಿಕಾರಿಗಳು ಪಾಲ್ಗೊಂಡು ಕಾರ್ಯಕ್ರಮ ವನ್ನ ಯಶಸ್ಸುಗೊಳಿಸಿದರು.

ವರದಿ : ಶ್ರೀಮತಿ ಶಾಲಿನಿ ರುದ್ರಮುನಿ ಹುಬ್ಬಳ್ಳಿ, ರಾಜ್ಯ ಉಪಾಧ್ಯಕ್ಷರು
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.), ಬೆಂಗಳೂರು.

 
 
 
 
 
 
 
 
 
 
 

Leave a Reply