ಸಮಾಜದಲ್ಲಿ ಹಾಸು ಹೊಕ್ಕಾಗಿದ್ದ ಜಾತಿ ಪದ್ದತಿ, ಶೋಷಣೆಯ ಬದಲಾವಣೆಯ ಗಟ್ಟ “ಕಾಪ”

ತುಳು ಕೂಟ ಉಡುಪಿ ಯವರು ಏರ್ಪಡಿಸಿದ ನಾಟಕ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರು (ರಿ.)ಉಡುಪಿ ಯವರು ಅಭಿನಯಿಸಿದ ನಾಟಕ ಕಾಪ ಒಂದು ಕಾಲದಲ್ಲಿ ಸಮಾಜದಲ್ಲಿ ಹಾಸು ಹೊಕ್ಕಾಗಿದ್ದ ಜಾತಿ ಪದ್ದತಿ, ಶೋಷಣೆಯ ಬದಲಾವಣೆಯ ಗಟ್ಟ.

ಕೆಳಜಾತಿಯವನೊಬ್ಬ ಕೊಡಬೇಕಾದ ಮರ್ಯಾದೆ ತಾನು ಅಪೇಕ್ಷಿಸಿದ ರೀತಿಯಲ್ಲಿ ಇಲ್ಲದಿದ್ದರೆ ಅವನನ್ನು ಹೊಸಕಿಹಾಕುವ ರೀತಿ. ಇದರ ಸುತ್ತು ಇರುವ ಕಥೆ “ಕಾಪ” 

ತಮ್ಮ ಅನುಕೂಲಕ್ಕಾಗಿ ಜಾತಿಯ ಪದ್ದತಿಯ ದುರ್ಬಳಕೆ. ಇಂತಹ ಅನಿಷ್ಟ ಪದ್ದತಿಗಳಿಗೆ ಮೂಲ ಕಾರಣ ಮೂಡನಂಬಿಕೆ ಹಾಗೂ ತಿಳುವಳಿಕೆಯ ಕೊರತೆ. ಆಧುನಿಕ ಹಾಗೂ ಹಳೆಯ ಕಾನ್ಸೆಪ್ಟ್ಗಳನ್ನು ಮಿಶ್ರಮಾಡಿದ ನಾಟಕ. ಬದಲಾವಣೆಯನ್ನು ರಂಗ ಹಾಗೆಯೆ ಒಪ್ಪಿಕೊಳ್ಳುತ್ತದೆ.

ಹಾಗಾಗಿ ಬಂಡಾಯದ ಹಾಡುಗಳು ನಾಟಕದ ಗತಿಯೊಂದಿಗೇ ಸಾಗಿತು, ಕೆಳವರ್ಗದ ಜನ ತಮ್ಮ ಮೇಲೆ ನಡೆಯುವುದು ಶೋಷಣೆ ಎಂದರಿವಿದ್ದರೂ ಅದನ್ನು ಒಪ್ಪಿಕೊಳ್ಳಲಾರದ ಅಂಧ ಶ್ರದ್ದೆ. ಧ್ವನಿ ಎತ್ತಲಾಗದ ಅಸಹಾಯಕತೆ. ಬಡವ ನೀ ಮಡಗಿದಂಗಿರು ಎಂಬಂತೆ. ಬಾಯಿಮುಚ್ಚಿ ಸಮಾಜ ತೋರಿಸಿದ ರೀತಿಯಲ್ಲಿ ಕಟ್ಟುಪಾಡಿನಲ್ಲಿ ಬದುಕು.

ಊರಿನಲ್ಲಿ ಶುಭಕಾರ್ಯವಾಗುವಾಗ ಮೊದಲ ಹೇಳಿಕೆ ಅಥವಾ ಕೆಲಸದ ಗೌರವದ ವೀಳ್ಯ ಕೆಳವರ್ಗದ ಜನಾಂಗಕ್ಕೆ . ಅದನ್ನು ಆದಿ ಕಾಲದಿಂದಲೂ ತಮಗೆ ಸಂದುವ ಗೌರವ. ತಾವು ಮೊದಲು ಕೆಲಸ ಆರಂಭಿಸಿದರೆ ಮಾತ್ರಾ ಶುಭಕಾರ್ಯ ನಡೆಯುವುದು.

ತಾವು ಮುನ್ನಡೆದಂತೆ ತಮ್ಮ ಹಿಂದೆ ಹಿಂದೆ ಊರ ಜನರು ಎಂದು ನಂಬಿದ ಮುಗ್ದತೆ. ಕಾಲಕ್ರಮೇಣ ಅವರಲ್ಲಿಯೇ ವಿದ್ಯಾರ್ಜನೆ ಮಾಡಿದ ಹುಡುಗ ಅದು ಗೌರವ ವಲ್ಲ. ಅದು ತಮ್ಮ ಸ್ಥಾನವನ್ನು ತಮ್ಮಿಂದ ಕೆಲಸ ಮಾಡಿಸುವ ರೀತಿಯನ್ನು ತೋರಿಸುತ್ತದೆ. ತಾವು ಅಸಮಾನರು, ತಮ್ಮ ಮೇಲೆ ನಡೆಯುತ್ತಿರುವುದು ಶೋಷಣೆ ಎಂಬ ಅರಿವು ಉಂಟು ಮಾಡಿಸಲು ಹೆಣಗುವುದು.

ಜೀತ ಪದ್ದತಿ . ಸೂಕ್ಷ್ಮ ವಾಗಿ ತಾರತಮ್ಯ. ಮೇಲು, ಕೆಳ ಮಧ್ಯಮ ವರ್ಗದವರ ಜೀವನಶೈಲಿ ಯಲ್ಲಿ ಹಾಸುಹೊಕ್ಕಾದ ಭೇಧಭಾವ. ಕೆಳವರ್ಗವರ ಉನ್ನತಿ ಸಹಿಸದವರ ಹುನ್ನಾರ. ಅವರ ನಂಬಿಕೆಯನ್ನು ಮುಗ್ಧತೆಯನ್ನೇ ಬಂಡವಾಳವಾಗಿರಿಸಿ ಅವರನ್ನು ಕೈಗೊಂಬೆಯಂತೆ ಬಳಸುವುದು.

ಮನಮುಟ್ಟುವಂತೆ ಮೂಡಿದೆ. ತಮಗೆ ಸಲ್ಲಬೇಕಾದ ಮರ್ಯಾದೆಗೆ ಕುತ್ತು ಬರುವ ಸಂದರ್ಭದಲ್ಲಿ ಮೇಲ್ವರ್ಗದ ಜನ ಕೆಳ ವರ್ಗದ ಜನರ ಶಿಕ್ಷಣ ಕ್ಕೆ ಪ್ರೋತ್ಸಾಹ ಕೊಡದೆ ಪರಂಪರೆಯ ಸಂಕೋಲೆಯಲ್ಲಿ ಬಂಧಿಸಿ ಕಾಪನಾದ ಕರಿಯನ ಮಗನನ್ನು ಕಾಪ ಮಾಡಲು ಬೀಸುವ ಬಲೆ, ಬಲೆಯಲ್ಲಿ ಸಿಕ್ಕಿ ಒದ್ದಾಡುವ ಕರಿಯನ ಮಗ ಗಿರಿ.

ಕಾಪ ಕರಿಯನ ಪಾತ್ರದಾರಿ ಜೀವನ್ ಕುಮಾರ್ ತನ್ನ ಅಸಹಾಯಕತೆಯನ್ನು ತಾನು ಅನುಭವಿಸುವ ವೇದನೆ ತನ್ನ ಅಭಿಪ್ರಾಯವನ್ನು ದುಡಿಯನ್ನು ತಟ್ಟುತ್ತಾ ಪಾರ್ದನದ ಮೂಲಕ ವ್ಯಕ್ತಪಡಿಸುವುದು. ಬ್ರಾಹ್ಮಣ ಪಾತ್ರ ಧಾರಿಯ ಶೋಷಣೆಗೆ ಮರುಮಾತಿಲ್ಲದೆ ಬಾಯಿಮುಚ್ಚಿಕೊಂಡಿದ್ದು ಸಂಜೆ ಮದ್ಯ ಪಾನದ ನಂತರ ತನ್ನ ಆಕ್ರೋಶ ಪಾಡ್ದನ ಮೂಲಕ ಅವನ ಮನೆ ದಾರಿಯಾಗಿ ಹೋಗುವಾಗ ಹಾಡುವುದು ಪರಿಣಾಮಕಾರಿಯಾಗಿದೆ.

ಕರಿಯನ ಪಾತ್ರದಾರಿ ಜೀವನ್ ಕುಮಾರ್, ಬಾಣೇರ್ ಪಾತ್ರದಲ್ಲಿ ಪ್ರವೀಣ್ ಚಂದ್ರ ತೋನ್ಸೆ, ಗಿರಿ ಯಾಗಿ ಅಕ್ಷತ್ ಅಮೀನ್, ನೀಲು – ರಾಧಿಕಾ ದಿವಾಕರ್ ಆ ಕಾಲದ ಶೋಷಣೆಯ ಚಿತ್ರಣವನ್ನು ಸಮರ್ಥವಾಗಿ ಕಣ್ಣೆದುರು ತಂದರು. ಮೇಳವಾಗಿದ್ದ ಹಾಡುಗಾರರು ಉತ್ತಮವಾಗಿ ಧ್ವನಿ ಕೂಡಿಸಿ ನಾಟಕ ಕುತೂಹಲ ಹಿಡಿದಿಟ್ಟುಕೊಳ್ಳುವಲ್ಲಿ ಸಹಕಾರಿಯಾದರು.

ಬಳಸಿದ ಫ್ಲೆಕ್ಸ್ ಹಾಗೂ ನಾಟಕದ ವಿಷಯ ಗೊಂದಲ ತರಿಸುತಿತ್ತು.ಪೂರಕವಾದ ಸಂಗೀತ. ಉತ್ತಮ ನಿರ್ದೇಶನ. ಕಥಾವಸ್ತು. ಅಭಿನಯ .
– ಶುಭಾಶಯ – ಶಿಲ್ಪಾ ಜೋಶಿ .

 
 
 
 
 
 
 
 
 
 
 

Leave a Reply