ಮಾಹೆಯ ಜಿಸಿಪಿಎಎಸ್ ನಲ್ಲಿ ನೃತ್ಯ ಮತ್ತು ಸಂಗೀತದ ತರಗತಿಗಳು ಆರಂಭ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ(ಜಿಸಿಪಿಎಎಸ್) ಆಶ್ರಯದಲ್ಲಿ ಇದೇ ತಿಂಗಳ ದಿನಾಂಕ ೨೨ ರಂದು (ಮಾರ್ಚ್ 22, 2024) ನೃತ್ಯ ಮತ್ತು ಸಂಗೀತದ ತರಗತಿಗಳು ಆರಂಭಗೊಳ್ಳುತ್ತವೆ. ವಾರಕ್ಕೊಂದು ದಿವಸದಂತೆ ಮೇ 21 ರ ವರೆಗೆ ನಡೆಯುವ ಈ ಉಚಿತ ತರಗತಿಗಳು ಎಲ್ಲರಿಗೂ ಮುಕ್ತವಾಗಿವೆ. ನೃತ್ಯ ತರಗತಿಗಳು ಪ್ರತೀ ಸೋಮವಾರ ಸಂಜೆ 5 ಗಂಟೆಗೆ ನಡೆಯಲಿದ್ದು, ಖ್ಯಾತ ನೃತ್ಯ ಕಲಾವಿದೆ ಡಾ. ಭ್ರಮರಿ ಶಿವಪ್ರಕಾಶ್ ಇವರು ಭರತನಾಟ್ಯವನ್ನು ವಿವಿಧ ಹಂತಗಳಲ್ಲಿ ಕಲಿಸಿಕೊಡಲಿದ್ದಾರೆ. ಸಂಗೀತ ತರಗತಿಗಳು ಪ್ರತೀ ಗುರುವಾರ ಸಂಜೆ ೪ ಗಂಟೆಗೆ ನಡೆಯಲಿದ್ದು, ಪ್ರತಿಭಾನ್ವಿತ  ಯುವ ಸಂಗೀತ ಕಲಾವಿದೆ ಶ್ರಾವ್ಯ ಬಾಸ್ರಿ ಇವರು ಕರ್ನಾಟಕ  ಸಂಗೀತ, ಸುಗಮ ಸಂಗೀತ ಮತ್ತು ಸಿನಿಮಾ ಹಾಡುಗಳನ್ನು ಕಲಿಸಿಕೊಡಲಿದ್ದಾರೆ. ಮಾರ್ಚ್ 22 ರಂದು ಸಂಜೆ 4 ಗಂಟೆಗೆ ಜಿಸಿಪಿಎಎಸ್ ನ ಸರ್ವೋದಯ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಆಸಕ್ತರು   https://forms.gle/4hTgLyAwNkiJEQp67ಈ  ಮೂಲಕ ನೊಂದಾಯಿಸಿಕೊಳ್ಳಬಹುದು.

 
 
 
 
 
 
 
 
 
 
 

Leave a Reply