ಯುವ ಬಂಟರ ಸಂಘ (ರಿ.) ಕಂಬಳಕಟ್ಟ-ಕೊಡವೂರು ಇದರ ದಶಮ ಸಂಭ್ರಮ

ಯುವ ಬಂಟರ ಸಂಘ (ರಿ.) ಕಂಬಳಕಟ್ಟ-ಕೊಡವೂರು ಇದರ ದಶಮ ಸಂಭ್ರಮವು ದಿನಾಂಕ 30.04.2023 ರವಿವಾರ ಕಂಬಳಕಟ್ಟ ಕಂಬಳಮನೆ ವಠಾರದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡಿತು.ದಶಮಾನೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭವು ಮಜಲುಮನೆ ಶ್ರೀಮತಿ ವನಜ ನಾರಾಯಣ ಶೆಟ್ಟಿ ವೇದಿಕೆಯಲ್ಲಿ ಸಮಾರಂಭದ ಅತಿಥಿ ಅಭ್ಯಾಗತರೊಡಗೂಡಿ ದೀಪ ಪ್ರಜ್ವಲನೆ ಮಾಡವುದರ ಮೂಲಕ ನೆರವೇರಿಸಿದರು.
ಸಮಾರಂಭದ ಮುಖ್ಯ ಅತಿಥಿ ತುಳುನಾಡಿನ ಸಂಸೃತಿಯ ವಿಮರ್ಶಕರು,ನಟ -ನಿರ್ಮಾಪಕ ಶ್ರೀ ತಮ್ಮಣ್ಣ ಶೆಟ್ಟಿ ಮಾತನಾಡಿ ದೈವಾರಾಧನೆಯು ಮೂಲ ಸ್ವರೂಪ ಕಳಕೊಂಡಿದೆ, ತುಳುನಾಡ ಆಚಾರ ವಿಚಾರಗಳು ಈಗ ಶೋಕಿ ಹಾಗೂ ಶೋಪೀಸ್ ವಸ್ತುಗಳಾಗಿ ಬಿಟ್ಟಿವೆ. ಇವುಗಳನ್ನು ಸುವ್ಯವಸ್ಥಿತಗೊಳಿಸಲು ಬಂಟಸಮಾಜದ ಪ್ರತಿಯೋರ್ವನು ಚಿಂತಿಸುವಂತಾಗಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ ನಮ್ಮ ಕುಡ್ಲ ವಾಹಿನಿಯ ವಾರ್ತಾವಾಚಕಿ ಡಾl ಪ್ರಿಯಾ ಹರೀಶ್ ಶೆಟ್ಟಿ ಮಾತಾನಾಡಿ ವೈವಿದ್ಯತೆಯಿಂದ ಕೂಡಿದ ಬಂಟರು ಎಲ್ಲಾ ಕ್ಷೇತ್ರಗಳಲ್ಲಿನ ಸಾಧಕರು. ನಮ್ಮ ಸಮಾಜದ ಅಭಿಮಾನ,ಆಚಾರವಿಚಾರ ಗಳನ್ನು ಇಂದಿನ ಮಕ್ಕಳಲ್ಲಿ  ತಿಳಿಯಪಡಿಸಬೇಕಾಗಿದೆ ಎಂದರು.
ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.) ಇದರ ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ದಶಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡಗೊಳಿಸಿದರು.ಈ ಸಂದರ್ಭದಲ್ಲಿ ಮಾತಾಡಿದ ಅವರು ಕಂಬಳಕಟ್ಟ -ಕೊಡವೂರು ಬಂಟರ ಸಂಘ ಉದಯದ ಹಿಂದಿನ ಉದ್ದೇಶ ಹಾಗೂ ಈ ಹತ್ತು ವರ್ಷಗಳಲ್ಲಿ ಪ್ರತಿಯೋರ್ವ ಸದಸ್ಯರುಗಳ  ಪಾತ್ರ ಹಾಗೂ ಶ್ರಮದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಶುಭಹಾರೈಸಿದರು.
 ಈ ಶುಭ ಸಂದರ್ಭದಲ್ಲಿ ಬಂಟ ಸಮಾಜದ ಹಿರಿಯರಾದ ತೋನ್ಸೆ ಬಡಾಮನೆ ಶ್ರೀ ನಾರಾಯಣ ಶೆಟ್ಟಿ , ಆದಿವುಡುಪಿ ದೊಡ್ಡಮನೆ ಜಗನ್ನಾಥ ಶೆಟ್ಟಿ, ಜನ್ನಿಬೆಟ್ಟು ರಾಜು ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು.ಅಲ್ಲದೇ ಭಾರತದ ಸೇನೆಯಲ್ಲಿ  ಸೇವೆ ಸಲ್ಲಿಸಿದ ಶ್ರೀ ಮಹೇಶ್ ಶೆಟ್ಟಿ ಕಾರ್ಕಳ,ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ  ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಮಲ್ಪೆ ನರ್ಸಿಂಗ್ ಹೋಮ್ ನ ವೈದ್ಯರಾದ ಡಾl ಸುರೇಂದ್ರ ಶೆಟ್ಟಿ , ಉಡುಪಿಯ ಜನಸೇವಾ ಸಂಸ್ಥೆ ಹೋಮ್ ಡಾಕ್ಟರ್ ಫೌಂಡೇಶನ್  , ಸಾಧಕ ವಿದ್ಯಾರ್ಥಿಗಳಾದ ಅಂಶುಲ್ ಶೆಟ್ಟಿ ಪುತ್ತೂರು, ಶ್ರದ್ಧಾ ಎನ್ ಶೆಟ್ಟಿ ಪಡುತೋನ್ಸೆ, ತ್ರಿಷಾ ಯು ಶೆಟ್ಟಿ ಕಾಪು ಇವರುಗಳನ್ನು ಅವರವರ ಕ್ಷೇತ್ರದಲ್ಲಿನ ಸಾಧನೆಗೆ ಗುರುತಿಸಿ ಗೌರವಿಸಲಾಯಿತು.
ಸಂಸ್ಥೇಯ ಪೂರ್ವ ಅಧ್ಯಕ್ಷರು  ಶ್ರೀ ಸುರೇಶ್ ಶೆಟ್ಟಿ, ಕಂಬಳಕಟ್ಟ ಹಾಗೂ ಪ್ರಸ್ತುತ ಅಧ್ಯಕ್ಷರಾದ   ಶ್ರೀ ಶಿವಪ್ರಸಾದ್ ಶೆಟ್ಟಿ, ಮಜಲುಮನೆ ಇವರುಗಳನ್ನು ದಶಮಾನೋತ್ಸವ ಸಮಿತಿಯ ಪರವಾಗಿ ಗೌರವಿಸಲಾಯಿತು. ಅರ್ಹ ಫಲಾನುಭವಗಳಿಗೆ  ಆರ್ಥಿಕ ಸಹಾಯಧನ , ವೈದ್ಯಕೀಯ ನೆರವು, ವಿದ್ಯಾರ್ಥಿಗಳಿಗೆ ವಿದ್ಯಾಾರ್ಥಿವೇತನ ವನ್ನು ಈ ಸಂಧರ್ಭದಲ್ಲಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘದ ಮಹಿಳಾ ಸದಾಸ್ಯರಿಂದ ಭಕ್ತಿ ಗಾಯನ , ಹಾಗೂ ಶೃಂಗೇರಿ ಶ್ರೀ ಶಾರದ ಅಂಧರ ಗೀತಗಾಯನ ಕಲಾತಂಡದವರಿಂದ ಸಂಗೀತ ರಸಮಂಜರೀ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಸಾಯಿರಾಧಾ ಗ್ರೂಪನ ಆಡಳಿತ ನಿರ್ದೇಶಕ ಶ್ರೀ ಮನೋಹರ ಶೆಟ್ಟಿ, ಪುಣೆ ಬಂಟರ ಸಂಘದ ಉಪಾಧ್ಯಕ್ಷ ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು,ಬಂಟರ ಸಂಘ ಪುತ್ತೂರು ಅಧ್ಯಕ್ಷ ಶ್ರೀ ಪಿ. ಶಂಕರ್ ಶೆಟ್ಟಿ , ಬಂಟರ ಸಂಘ ಪೆರ್ಡೂರು ಮಂಡಲದ ಅಧ್ಯಕ್ಷ ಶ್ರೀ ಶಾಂತಾರಾಂ ಸೂಡಾ, ತೋನ್ಸೆ ವಲಯ ಬಂಟರ ಯಾನೆ  ನಾಡವರ ಸಂಘದ ಅಧ್ಯಕ್ಷ ಶ್ರೀ ಮನೋಹರ ಶೆಟ್ಟಿ ತೋನ್ಸೆ,ವಿನೋದ ಶೆಟ್ಟಿ ಗರ್ಡೆ, ಕೃಷ್ಣ ಶೆಟ್ಟಿ ಬಾವಲಿಮನೆ, ಸಂಘದ ಗೌರವ ಅಧ್ಯಕ್ಷರುಗಳಾದ ಶ್ರೀ ಸಂತೋಷ್ ಶೆಟ್ಟಿ ಪಂಚರತ್ನ, ಸುರೇಶ್ ಶೆಟ್ಟಿ ಕಂಬಳಕಟ್ಟ , ಸ್ಮಿತಾ ವಿದ್ಯಾಧರ್ ಶೆಟ್ಟಿ ಗರ್ಡೆ,ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಆದಿವುಡುಪಿ, ಖಜಾಂಚಿ ರಮೇಶ್ ಶೆಟ್ಟಿ ಮೂಡುಬೆಟ್ಟು , ದಶಮಾನೋತ್ಸವ ಸಂಚಾಲಕ ಡಾl ವಿಜೇಶ್ ಶೆಟ್ಟಿ ಜನ್ನಿಬೆಟ್ಟು, ಹಾಗೂ ಕಾರ್ಯಕಾರಿ ಮತ್ತು ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.
ಸಂಘದ ಮಹಿಳಾ ಸದಸ್ಯರುಗಳಾದ ವಿನೋದ ಶೆಟ್ಟಿ ಗರ್ಡೆ,ಸೌಮ್ಯಾ ಶೆಟ್ಟಿ ಗರ್ಡೆ,ಸುಜಾತಾ ಶೆಟ್ಟಿ ಗರ್ಡೆ ಪ್ರಾರ್ಥನೆಗೈದರು, ಗೌರವಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಕಂಬಳಕಟ್ಟ ಸ್ವಾಗತಿಸಿ,ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಮಜಲುಮನೆ ಪ್ರಸ್ತಾವನೆಗೈದರು, ಗೌರವಾಧ್ಯಕ್ಷೆ ಸ್ಮಿತಾವಿದ್ಯಾಧರ್ ಶೆಟ್ಟಿ ಗರ್ಡೆ ವಂದಿಸಿದರು. ಅರ್ಪಿತಾ ಶೆಟ್ಟಿ, ಅಮೃತ್ ಶೆಟ್ಟಿ, ಸ್ವಾತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply