ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಾರ್ಷಿಕೋತ್ಸವ ಸಮಾರಂಭ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಾರ್ಷಿಕೋತ್ಸವ ಸಮಾರಂಭವು ಗುಂಡಿಬೈಲಿನ ಬ್ರಾಹ್ಮೀ ಸಭಾಭವನದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿದ್ವಾನ್ ಅಶೋಕ್ ಭಟ್ ಕಲ್ಯ ಇವರು ಮಾತನಾಡುತ್ತಾ ವಿಪ್ರರಾದವರಿಗೆ ನಿತ್ಯ ಕರ್ಮ ಅನುಷ್ಠಾನ ಮತ್ತು ವೇದ ಅಧ್ಯಯನ ಅತ್ಯಂತ ಮುಖ್ಯವಾದದ್ದು. ಈ ಅನುಸಂಧಾನದಿಂದ ಸಮಾಜದ ಇತರರಿಗೆ ಮಾರ್ಗದರ್ಶಿಗಳಾಗಿ ಹಿಂದೂರಾಷ್ಟ್ರದ ಉನ್ನತಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಇನ್ನೋರ್ವ ಮುಖ್ಯ ಅತಿಥಿ ಕರ್ನಾಟಕ ಬ್ಯಾಂಕ್ ನ ಎ.ಜಿ.ಎಂ. ಶ್ರೀ ರಾಜಗೋಪಾಲ ಬಿ. ಅವರು ಮಾತನಾಡುತ್ತಾ ಉಡುಪಿ ಜಿಲ್ಲಾ ಬ್ರಾಹ್ಮಣ ಪರಿಷತ್ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದು ಸಂತಸ ವ್ಯಕ್ತಪಡಿಸಿದರು.. ಉಪಸ್ಥಿತರಿದ್ದ ಮುಖ್ಯ ಅತಿಥಿ ಖ್ಯಾತ ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್. ಸಿ. ಮತ್ತು II ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿದ್ಯಾರ್ಥಿವೇತನ ಹಾಗೂ ಅಶಕ್ತರಿಗೆ ವೈದ್ಯಕೀಯ ಧನಸಹಾಯವಾಗಿ ರೂ. 40,000 ಹಸ್ತಾಂತರಿಸಲಾಯಿತು. ಐವತ್ತು ಸಂವತ್ಸರಗಳ ಸಾರ್ಥಕ ಅನ್ಯೋನ್ಯ ದಾಂಪತ್ಯ ಜೀವನ ಪೂರೈಸಿದ 10 ಹಿರಿಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ರಾಜ್ಯಪಾಲರಿಂದ ಪ್ರತಿಷ್ಠಿತ ಛಾಯಾ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿದ ಪರಿಷತ್ತಿನ ಸದಸ್ಯರಾದ ಶ್ರೀ ಜನಾರ್ದನ್ ಕೊಡವೂರು ಮತ್ತು ಮೋಹನ ಉಡುಪ ಇವರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಪರಿಷತ್ತಿಗೆ 20 ಜನ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ಬೆಳಗ್ಗೆ ನಡೆದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಬ್ಯಾಂಕಿನ ಎ.ಜಿ.ಎಂ.  ಕೆ. ವಾದಿರಾಜ ಭಟ್ ನೆರವೇರಿಸಿ ಶುಭ ಹಾರೈಸಿದರು. ಮೊದಲಿಗೆ ಸಹನಾ ಕೃಷ್ಣರಾಜ ಪ್ರಾರ್ಥಿಸಿದರು. ಜ್ಯೋತಿಲಕ್ಷ್ಮಿ, ಪದ್ಮಲತಾ ವಿಷ್ಣು, ಸುಮಿತ್ರ ಕೆರೆಮಠ, ಶಶಿಪ್ರಭ, ಕೆ.ರಘುಪತಿ ರಾವ್, ಸುನೀತಾ ಚೈತನ್ಯ, ಅನುಪಮಾ,ಗಾಯತ್ರಿ ಭಟ್, ಸುರೇಶ್ ಕಾರಂತ್, ಆಶಾ ರಘುಪತಿ ರಾವ್, ಸುಮನ ಆಚಾರ್ಯ, ಹರಿಪ್ರಸಾದ್, ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಸಹಕರಿಸಿದರು. ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ. ಪ್ರಸ್ತಾವನೆಗೈದು ಸ್ವಾಗತಿಸಿದರು, ಕಾರ್ಯದರ್ಶಿ ವಿವೇಕಾನಂದ ಎನ್. ವಾರ್ಷಿಕ ವರದಿ ಮಂಡಿಸಿದರು. ಅಮಿತಾ ಕ್ರಮದಾರಿ ಕಾರ್ಯಕ್ರಮ ನಿರ್ವಹಿಸಿ, ಜೊತೆ ಕಾರ್ಯದರ್ಶಿ ನಾರಾಯಣದಾಸ ಉಡುಪ ವಂದನಾರ್ಪಣೆಗೈದರು. ನಂತರ ಪರಿಷತ್ತಿನ ಸದಸ್ಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆಯನ್ನು ಪೂರ್ಣಿಮಾ ಜನಾರ್ದನ್ ಮತ್ತು ರವಿರಾಜ್ ರಾವ್ ನೆರವೇರಿಸಿದರು.
 
 
 
 
 
 
 
 
 
 
 

Leave a Reply