ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡದಿಂದ ಪಕ್ಷಿ ರಕ್ಷಿಸಿ ಅಭಿಯಾನ

ಉಡುಪಿ: ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಹಕ್ಕಿಗಳಿಗೆ ಕಾಳು ನೀರು ಒದಗಿಸುವ ಪಕ್ಷಿ ರಕ್ಷಿಸಿ ಅಭಿಯಾನ ಭಾನುವಾರದಂದು ಅಜ್ಜರಕಾಡು ಭುಜಂಗ ಪಾರ್ಕ್ ಪರಿಸರದಲ್ಲಿ ನಡೆಯಿತು. ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಅಭಿಯಾನಕ್ಕೆ ಚಾಲನೆ ನೀಡಿದರು. 

ಗಿರೀಶ್ ಅಂಚನ್ ಮಾತನಾಡಿ ಮನುಷ್ಯನ ರಕ್ಷಣೆಗೆ ಬೇರೆ ಬೇರೆ ಇಲಾಖೆಗಳಿವೆ. ಆದರೆ ನಿಸರ್ಗದಲ್ಲಿ ಅತ್ಯಂತ ಸುಂದರ ಜೀವಿಗಳಾದ ಪಕ್ಷಿ ಸಂಕುಲವನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ಬುದ್ಧಿವಂತ ಜೀವಿಗಳಾದ ನಮ್ಮೆಲ್ಲರ ಮೇಲಿದೆ. ಅವುಗಳ ರಕ್ಷಣೆ ಮತ್ತು ಸಂತತಿ ವೃದ್ಧಿಯಾಗುವಂತೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಿಸರ್ಗವನ್ನು ರಕ್ಷಿಸಿದರೆ ನಿಸರ್ಗವೇ ನಮ್ಮನ್ನು ರಕ್ಷಿಸುತ್ತದೆ ಎಂದರು.

ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಸ್ಥಾಪಕ ಅಧ್ಯಕ್ಷೆ ಡಾ. ಕೀರ್ತಿ ಪಾಲನ್ ಅಭಿಯಾನದ ಬಗ್ಗೆ ವಿಸ್ತ್ರತವಾಗಿ ಮಾಹಿತಿ ನೀಡಿದರು. ಸ್ವಯಂ ಸೇವಕರು ಗಿಡಮರಗಳಲ್ಲಿ ಹಕ್ಕಿಗಳಿಗೆ ಕಾಳು ಮತ್ತು ನೀರು ಇಡಲು ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಮ್ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ವಿಜಯ್ ನೆಗಳೂರು, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ನ್ಯಾಯವಾದಿ ರಫೀಕ್ ಖಾನ್, ಜಗದೀಶ್ ಶೆಟ್ಟಿ, ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಉದಯ ನಾಯ್ಕ್, ಕಾರ್ಯದರ್ಶಿ ವೀಕ್ಷಿತ್, ಮಾಜಿ ಸೈನಿಕ ವಾದಿರಾಜ ಹೆಗ್ಡೆ, ಜಗದೀಶ್ ಬಂಟಕಲ್, ಬೇಬಿ ಶೆಟ್ಟಿ, ಕಾರ್ತಿಕ್ ಆಚಾರ್ಯ, ಸಂಗೀತ, ಮೋಕ್ಷಾ, ಶ್ಲೋಕ ಮುಂತಾದವರು ಉಪಸ್ಥಿತರಿದ್ದರು.ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ನಿರೂಪಿಸಿದರು.

 
 
 
 
 
 
 
 
 

Leave a Reply