ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಚಾತುರ್ಮಾಸ ವ್ರತ ಸಂಕಲ್ಪಿತರಾದ ಶ್ರೀಪಾದರುಗಳಿಗೆ ಗುರುವಂದನೆ

ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಚಾತುರ್ಮಾಸ ವ್ರತ ಸಂಕಲ್ಪಿತರಾದ ಶ್ರೀಪಾದರುಗಳಿಗೆ ಗುರುವಂದನೆ ಸಲ್ಲಿಸ ಲಾಯಿತು. ಮೊದಲಿಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಲಾಯಿತು. ಅವರು ಆಶೀರ್ವಚನ ನೀಡಿ ಪರಿಷತ್ತಿನ ಸದಸ್ಯರು ಪ್ರತಿ ವರ್ಷ ತಪ್ಪದೇ ಚಾತುರ್ಮಾಸ ಕಾಲದಲ್ಲಿ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದು ಇತರ ಸಂಘಟನೆಗಳಿಗೂ ಮಾದರಿಯಾಗಲಿ ಎಂದು ಹರಸಿದರು.

ಅನಂತರ ಅದಮಾರು ಹಿರಿಯ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಗೆ, ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಮತ್ತು ಮಣಿಪುರ ಶಾಖಾಮಠದಲ್ಲಿ ಶ್ರೀ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಲಾಯಿತು. ಅವರು ಆಶೀರ್ವಚನ ನೀಡಿ ಮಾತನಾಡುತ್ತಾ ವಿಪ್ರ ಸಂಘಟನೆಗಳು ಇನ್ನಷ್ಟು ಒಟ್ಟಾಗಿ ಸದೃಢ ದೇಶ ಕಟ್ಟುವಂತಾಗಬೇಕು, ಆ ಮೂಲಕ ತಮ್ಮ ಶ್ರೇಯಸ್ಸಿಗೆ ಬೇಕಾದಂತ ಸಾಧನೆಗಳನ್ನು ಮಾಡಲು ಮತ್ತಷ್ಟು ಅನುಕೂಲ ಆಗುವಂತೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಸದಸ್ಯರಾದ ವಿಷ್ಣು ಪ್ರಸಾದ ಪಾಡಿಗಾರ್,ಎಂ .ಎಸ್. ವಿಷ್ಣು, ಕೆ.ರಘುಪತಿ ರಾವ್, ಜನಾರ್ಧನ ಭಟ್ ,ರವೀಂದ್ರ ಆಚಾರ್ಯ, ಕೇಶವರಾವ್, ಮಂಜುನಾಥ ರಾವ್, ಶ್ರೀಪತಿ ಉಪಾಧ್ಯ, ರಾಜಗೋಪಾಲ ಭಟ್, ಹರಿಪ್ರಸಾದ್, ಗುರುಪ್ರಸಾದ್ ಎ, ದಿನೇಶ್ ಕಲ್ಯಾಣಿ, ಪದ್ಮಲತಾ ವಿಷ್ಣು, ಸುಮಿತ್ರ ಕೆರೆಮಠ, ಸುಮನ ಆಚಾರ್ಯ, ಸಂಧ್ಯಾ ಟಿ. ಮೊದಲಾದವರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರನ್ನು ಮತ್ತು ಪುತ್ತಿಗೆ ಕಿರಿಯ ಮಠಾಧೀಶರಾದ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗುರುವಂದನೆ ಸಲ್ಲಿಸಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ. ತಿಳಿಸಿದರು.

 
 
 
 
 
 
 
 
 
 
 

Leave a Reply