ಉಡುಪಿ ರೋಟರಿ ಕ್ಲಬ್ಬಿನ ಸಾರಥ್ಯ ದೀಪಾ ಭಂಡಾರಿ ಬಗಲಿಗೆ.

ರೋಟರಿ ಜಿಲ್ಲೆ 3182, ವಲಯ 4ರ ಪ್ರತಿಷ್ಠಿತ ರೋಟರಿ ಉಡುಪಿ ಕ್ಲಬ್ ಗೆ ಶಿಕ್ಷಕಿ ಹಾಗೂ ಸಮಾಜಸೇವಕಿ ರೊ. ದೀಪ ಭಂಡಾರಿ ಅವರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿ ಶುಭಾ ಎಸ್ ಬಾಸ್ರಿ, ನಿಕಟ ಪೂರ್ವ ಅಧ್ಯಕ್ಷ ಕೆ ಎಸ್. ಕಾರಂತ್, ಕೋಶಾಧಿಕಾರಿ ಜೆ.ಜಿ ಪ್ರಭು, ಕ್ಲಬ್ ಸರ್ವಿಸ್ ನಿರ್ದೇಶಕ ಸಾಧನಾ ಮುಂಡ್ಕೂರು, ವೃತ್ತಿಪರ ನಿರ್ದೇಶಕ ಕಲ್ಮಾಡಿ ಶೇಖರ ಪೂಜಾರಿ, ಸಮುದಾಯ ಸೇವಾ ನಿರ್ದೇಶಕ ಜಗದೀಶ ಕಾಮತ್, ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕ ಸುಬ್ರಮಣ್ಯ ಬಾಸ್ರಿ , ಯೂತ್ ಸರ್ವಿಸ್ ಹೇಮಂತ್ ಯು. ಕಾಂತ್ ಆಯ್ಕೆಯಾಗಿದ್ದಾರೆ.

ನಲವತ್ತೈದು ವರ್ಷಗಳ ಇತಿಹಾಸ ಇರುವ ಈ ರೋಟರಿ ಕ್ಲಬ್ಬಿಗೆ ದೀಪ ಭಂಡಾರಿಯವರು ದ್ವಿತೀಯ ಮಹಿಳಾ ಅಧ್ಯಕ್ಷರಾಗಿದ್ದಾರೆ.

 
 
 
 
 
 
 
 
 
 
 

Leave a Reply