ಬೃಹತ್ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ರಕ್ತದಾನ ಶಿಬಿರ

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ) ಉಡುಪಿ, ಇದರ ರಜತ ಮಹೋತ್ಸವದ 22ನೇ ಕಾರ್ಯಕ್ರಮದ ಸಂಭ್ರಮಾಚರಣೆಯ ಪ್ರಯುಕ್ತ ಬೃಹತ್ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ರಕ್ತದಾನ ಶಿಬಿರ

ಸದಾ ತಪೋನಿರತರಾದ ಅಷ್ಟ ಮಠದ ಯತಿಗಳಿಂದ ನಿರಂತರ ಪೂಜೆಯನ್ನು ಕೈಗೊಳ್ಳುತ್ತಿರುವ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಹಾಗೂ ಪರಮಪೂಜ್ಯ ಶ್ರೀ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದಿಂದ ತಾ. 17-03-2024ನೇ ಆದಿತ್ಯವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.), ಉಡುಪಿ ಇದರ ರಜತ ಮಹೋತ್ಸವದ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಚಿಕಿತ್ಸೆ ಮತ್ತು ರಕ್ತದಾನ ಶಿಬಿರವು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.

ಅಂದು ಬೆಳಿಗ್ಗೆ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ದೀಪ ಬೆಳಗಿಸಿ, ಆಶೀರ್ವಚನದೊಂದಿಗೆ ಶಿಬಿರಕ್ಕೆ ಚಾಲನೆ ನೀಡುವುದು. ತಾಲೂಕು ಬ್ರಾಹ್ಮಣ ಮಹಾಸಭಾವು ತನ್ನ 27ನೇ ವರ್ಷದಲ್ಲಿ 25 ಕಾರ್ಯಕ್ರಮಗಳನ್ನು ಒಳಗೊಂಡರಜತ ಮಹೋತ್ಸವವನ್ನು ಆಚರಿಸುತ್ತಿದೆ. ನಮ್ಮ ಎಲ್ಲಾ ಕಾರ್ಯಕ್ರಮಗಳು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ, ಆರೋಗ್ಯ, ಕೃಷಿಗೆ ಸಂಬಂಧ ಪಟ್ಟದ್ದಾಗಿದೆ. ಆರೋಗ್ಯ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಅನಾರೋಗ್ಯದಿಂದ ಬಳಲುವ ವಿಪ್ರ ಬಾಂಧವರಿಗೆ ಆರ್ಥಿಕ ಸಹಾಯ ಒಳಗೊಂಡಿರುತ್ತದೆ.

ಈ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಮಹೇಶ್ ಆಸ್ಪತ್ರೆ, ಬ್ರಹ್ಮಾವರ, ಜಿಲ್ಲಾಸ್ಪತ್ರೆ, ಉಡುಪಿ, ಎ.ಜೆ.ಆಸ್ಪತ್ರೆ, ದಂತ ಚಿಕಿತ್ಸಾ ವಿಭಾಗ-ಮಂಗಳೂರು, ಗಾಂಧಿ ಹಾಸ್ಪಿಟಲ್, ಉಡುಪಿ, ಎಕ್ಸಲೆಂಟ್ ಸೂಪರ್ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್, ಕಡಿಯಾಳಿ- ಉಡುಪಿ, ಶ್ರೀಹರಿ ನೇತ್ರಾಲಯ, ಅಂಬಲಪಾಡಿ, ಅನಾಮಯ ಕ್ಲಿನಿಕ್, ಆಯುರ್ವೇದ ಮತ್ತು ಪಂಚಕರ್ಮ ಚಿಕಿತ್ಸೆ, ಉಡುಪಿ ಇವರ ಸಹಯೋಗದೊಂದಿಗೆ ನಡೆಯಲಿದೆ.

ಉಚಿತ ಆರೋಗ್ಯ ತಪಾಸಣೆ, ಶುಗರ್, ಬಿ.ಪಿ. ಈಸಿಜಿ, ದಂತ ತಪಾಸಣೆ ಮತ್ತು ಚಿಕಿತ್ಸೆ, ರೂಟೀನ್ ಶುಗರ್ ಮತ್ತು ಬ್ಲಡ್ ತಪಾಸಣೆ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆ, ಆಯುರ್ವೇದ ಪಂಚಕರ್ಮ ತಪಾಸಣೆ ಮತ್ತು ಚಿಕಿತ್ಸೆ, ಉಚಿತ ಔಷಧಿ ವಿತರಣೆ ನಡೆಯಲಿರುವುದು. ಸುಮಾರು 50 ಂಟ್ ಕ್ಕಿಂತಲೂ ಹೆಚ್ಚು ವೈದ್ಯರು ಮತ್ತು ಅವರ ಸಹಾಯಕರು ಭಾಗವಹಿಸಲಿರುವರು. ಸುಮಾರು 50ಕ್ಕಿಂತಲೂ ಹೆಚ್ಚು ರಕ್ತ ಸಂಗ್ರಹ ಮತ್ತು 500ಕ್ಕಿಂತಲೂ ಹೆಚ್ಚು ಜನ ಆರೋಗ್ಯ ತಪಾಸಣೆಯಲ್ಲಿ ಭಾಗವಹಿಸಲಿರುವರು.

ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಎಂ. ಮಂಜುನಾಥ ಉಪಾಧ್ಯಾಯ ಅಧ್ಯಕ್ಷರು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ (ರಿ.), ಶ್ರೀ ಶ್ರೀಕಾಂತ ಉಪಾಧ್ಯಾಯ ಸಂಚಾಲಕರು ರಜತ ಮಹೋತ್ಸವ ಸಮಿತಿ, ಶ್ರೀ ಜಯರಾಮ ಆಚಾರ್ಯಕಾರ್ಯದರ್ಶಿ ರಜತ ಮಹೋತ್ಸವ ಸಮಿತಿ, ಶ್ರೀ ಜನಾರ್ದನ ಭಟ್ ರಜತ ಮಹೋತ್ಸವ ಸಮಿತಿ, ಶ್ರೀ ಎಂ. ಶ್ರೀನಿವಾಸ ಬಲ್ಲಾಳ ಅಧ್ಯಕ್ಷರು ರಜತ ಮಹೋತ್ಸವ ಸಮಿತಿ, ಶ್ರೀ ಶ್ರೀನಿವಾಸ ಯು.ಬಿ.. ಕಾರ್ಯದರ್ಶಿ ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply