ಸಾಲಿಡಾರಿಟಿ ಯೂತ್ ಮೂಮೆಂಟ್ ನ ಜಿಲ್ಲಾಧ್ಯಕ್ಷರಾಗಿ ಯಾಸೀನ್ ಕೋಡಿಬೆಂಗ್ರೆ ಪುನರಾಯ್ಕೆ

ಉಡುಪಿ: ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇಂದು ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ನೇತೃತ್ವದಲ್ಲಿ ಸಾಲಿಹಾತ್ ಸಭಾಂಗಣದಲ್ಲಿ ನೆರೆವೇರಿತು.

ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಯಾಸೀನ್ ಕೋಡಿಬೆಂಗ್ರೆಯವರನ್ನು ಚುನಾಯಿಸಲ್ಪಟ್ಟರು. ಜಿಲ್ಲಾ ಕಾರ್ಯದರ್ಶಿಯಾಗಿ ನಬೀಲ್ ಗುಜ್ಜರ್’ಬೆಟ್ಟು ಆಯ್ಕೆಯಾದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶುಐಬ್ ಮಲ್ಪೆ, ಜನ ಸಂಪರ್ಕ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ಇಬ್ರಾಹಿಮ್ ಸಯೀದ್ ಮತ್ತು ಜೊತೆ ಕಾರ್ಯದರ್ಶಿಯಾಗಿ ಅಕ್ರಮ್ ಹೂಡೆಯನ್ನು ನೇಮಿಸಲಾಯಿತು.

ಕುಂದಾಪುರ ಮತ್ತು ಬೈಂದೂರು ತಾಲೂಕಿನ ಮೇಲ್ವಿಚಾರಕಾಗಿ ಹಸನ್ ಮಾವಾಡ್ ಮತ್ತು ಕಾಪು ತಾಲೂಕಿನ ಮೇಲ್ವಿಚಾರಕರಾಗಿ ರಂಝಾನ್ ಕಾಪು ಆಯ್ಕೆಗೊಂಡಿದ್ದಾರೆ. 

ಹೂಡೆ ಘಟಕದ ಅಧ್ಯಕ್ಷರಾಗಿ ಜಾಬೀರ್ ಕಿದೆವರ್, ಮಲ್ಪೆ ಘಟಕದ ಅಧ್ಯಕ್ಷರಾಗಿ ಶುಐಬ್ ಮಲ್ಪೆ, ಉಡುಪಿ ಘಟಕಾಧ್ಯಕ್ಷರಾಗಿ ಇಫ್ತಿಕಾರ್ ಉಡುಪಿ, ಗುಜ್ಜರ್’ಬೆಟ್ಟು ಉಸ್ತುವಾರಿಯಾಗಿ ರೋಶನ್ ಝಮೀರ್, ಕಾಪು ಘಟಕಾಧ್ಯಕ್ಷರಾಗಿ ಸದಾಫ್ ಕಾಪು ಪುನರಾಯ್ಕೆಗೊಂಡರು. ಸಭೆಯಲ್ಲಿ ಇಪ್ಪತ್ತು ಮಂದಿ ಸದಸ್ಯರ ಜಿಲ್ಲಾ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು

ಪ್ರೊ.ಅಬ್ದುಲ್ ಅಝೀಝ್, ಅಬ್ದುಲ್ ಕಾದೀರ್ ಮೊಯ್ದಿನ್ ಮತ್ತು ಶಬ್ಬೀರ್ ಮಲ್ಪೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply