ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ) ಉಡುಪಿ ವತಿಯಿಂದ ಆಹಾರ, ಸಲೂನ್ ಸಾಮಾಗ್ರಿ ಕಿಟ್ ವಿತರಣೆಗೆ ಚಾಲನೆ

ಉಡುಪಿ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ(ನಿ ) ಉಡುಪಿ ವತಿಯಿಂದ ಸಹಕಾರಿಯಲ್ಲಿ ನಿರಂತರ ವ್ಯವಹರಿಸುವ ಜಿಲ್ಲೆಯ ಸುಮಾರು 600 ಕ್ಷೌರಿಕ ವೃತ್ತಿಬಾಂಧವರಿಗೆ ಕುಂದಾಪುರ ಕಾರ್ಕಳ ಶಾಖೆ ಸೇರಿಸಿ ಅಂದಾಜು ರೂಪಾಯಿ 6 ಲಕ್ಷ ವೆಚ್ಚದಲ್ಲಿ ಅಕ್ಕಿ ಆಹಾರ ಸಾಮಗ್ರಿ, ಸಲೂನ್ ಸಾಮಗ್ರಿ ಕಿಟ್ ಗಳನ್ನು ವಿತರಿಸಲು ಚಾಲನೆ ನೀಡಲಾಯಿತು.

ಸವಿತಾ ಸೊಸೈಟಿ ಯಲ್ಲಿ ವ್ಯವಹರಿಸುವ ಸದಸ್ಯರಿಗೆ ಈ ಸೌಲಭ್ಯವನ್ನು ನೀಡಲಾಗಿದ್ದು ಅಂಬಲಪಾಡಿಯ ಸವಿತಾ ಸಮುದಾಯಭವನದಲ್ಲಿ ಜರುಗಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾ ಆರೋಗ್ಯಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ ಕೊರೋನಾದ ಈ ಸಂದರ್ಭದಲ್ಲಿ ಸಮಾಜದ ಬಂಧುಗಳಿಗೆ ಆರ್ಥಿಕವಾಗಿ ಧೈರ್ಯ ತುಂಬುವ ಕೆಲಸ ಆಗುತ್ತಿದ್ದು ಸೊಸೈಟಿಯಿಂದ ಬಂದ ಲಾಭಾಂಶದಿಂದ ಸಂಕಷ್ಟದದಲ್ಲಿ ಇರುವ ಕ್ಷೌರಿಕ ಅಕ್ಕಿ ಆಹಾರ ಸಾಮಗ್ರಿ ವಸ್ತುಗಳು ಬಂಧುಗಳಿಗೆ ಮುಟ್ಟಿಸುವುದು ಅತ್ಯುತ್ತಮ ಕಾರ್ಯವೆಂದು ಹೇಳಿದರು.

ಮುಖ್ಯ ಅತಿಥಿ ಉಡುಪಿಯ ಖ್ಯಾತ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ ದಾನಿಗಳನ್ನು ಹುಡುಕಿ ಆಹಾರ ಕಿಟ್ ವಿತರಿಸುವ ಬದಲು ತಮ್ಮದೇ ಸೊಸೈಟಿಯ ಬಂದ ಲಾಭಾಂಶದಿಂದ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯ ಶ್ಲಾಘನೀಯ ಎಂದರಲ್ಲದೆ ಬಂಧುಗಳು ತಮ್ಮ ಸವಿತಾ ಸೊಸೈಟಿಯಲ್ಲಿ ವ್ಯವಹಾರ ಮಾಡಿ ತನ್ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಮಾತನಾಡುತ್ತಾ ನಿಮ್ಮದೇ ಸಹಕಾರಿ ಸಂಸ್ಥೆಯಲ್ಲಿ ನಿರಂತರ ವ್ಯವಹಾರ ಮಾಡುತ್ತಿದ್ದರೆ ಇಂತಹ ಸಂಕಷ್ಟದ ಸಮಯದಲ್ಲಿ ಸಂಸ್ಥೆ ಬಂಧುಗಳ ಜೊತೆಯಲ್ಲಿದ್ದು ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಕಳೆದ ಬಾರಿ ನೀಡಿದ್ದರಿಂದ ಸಹಕಾರಿಗೆ ಅತ್ಯುತ್ತಮ ಸಹಕಾರಿ ಪ್ರಶಸ್ತಿ ಬಂದಿದ್ದು ಅದು ಪ್ರೇರಣೆಯಾಗಿ ಈ ಬಾರಿಯೂ ಆಹಾರ ಕಿಟ್ ನೀಡುವುದರೊಂದಿಗೆ ಸೊಸೈಟಿಯಲ್ಲಿ 6ತಿಂಗಳ ನಿಬಡ್ಡಿ ಸಾಲ ಸೌಲಭ್ಯ ಕೊರೋನ ಪೀಡಿತರಿಗೆ ಸಹಾಯಧನ ಹಾಗೆ ಹಲವಾರು ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.

 ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರು,ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ,ಉಡುಪಿ ಜಿಲ್ಲಾ ಸವಿತಾ ಸಮಾಜದ ಕೋಶಾಧಿಕಾರಿ ಶೇಖರ್ ಸಾಲ್ಯಾನ್ ಆದಿ ಉಡುಪಿ,ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮೂಲ್ಕಿ, , ಸಹಕಾರಿಯ ನಿರ್ದೇಶಕ ಗಂಗಾಧರ ಭಂಡಾರಿ ಬಿರ್ತಿ ಮತ್ತು ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.ನಿರ್ದೇಶಕ ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply