ಮಂಗಳೂರಿನಲ್ಲಿ ತ್ಯಾಜ್ಯ ವಿಂಗಡಿಸದ ಅಪಾರ್ಟ್ ಮೆಂಟ್ – ಪಾಲಿಕೆಯಿಂದ ಬರೋಬ್ಬರಿ 53 ಸಾವಿರ ದಂಡ

ಮಂಗಳೂರು: ಮಹಾನಗರಪಾಲಿಕೆಯ ತ್ಯಾಜ್ಯ ವಿಂಗಡಣೆ ಆದೇಶ ಉಲ್ಲಂಘನೆ ಆರೋಪದಡಿ ನಗರದ ವಸತಿ ಸಂಕೀರ್ಣವೊಂದಕ್ಕೆ ಬರೋಬ್ಬರಿ 53 ಸಾವಿರ ರೂ. ದಂಡ ಹಾಕಲಾಗಿದೆ.

ಮಂಗಳೂರಿನ ಚಿಲಿಂಬಿಯ ಮಲರಾಯ ದೇವಸ್ಥಾನ ಸಮೀಪದ ಮಾರ್ಸ್ ಆ್ಯಂಡ್ ವೀನಸ್ ಅಪಾರ್ಟ್ ಮೆಂಟ್ ಗೆ 53 ಸಾವಿರ ರೂ. ದಂಡ ವಿಧಿಸಲಾಗಿದೆ.ಅಪಾರ್ಟ್ ಮೆಂಟ್ ನ 106 ಫ್ಲ್ಯಾಟ್ ಗಳಿಗೆ ತಲಾ 500 ರೂಪಾಯಿಯಂತೆ 53 ಸಾವಿರ ರೂ. ದಂಡ ಹಾಕಲಾಗಿದೆ. ಜೂನ್ 5ರಂದು ಪಾಲಿಕೆಯ ಅಧಿಕಾರಿಗಳು ದಂಡ ವಿಧಿಸಿ ರಶೀದಿ ನೀಡಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ ನೀರು ಸರಬರಾಜು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ.

ಮಹಾನಗರಪಾಲಿಕೆ ತನ್ನ ವ್ಯಾಪ್ತಿಯಲ್ಲಿ ಬರುವ 60 ವಾರ್ಡ್ ಗಳಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ನೀಡುವಂತೆ ಸೂಚನೆ ನೀಡಿತ್ತು. ಇದು ಪಾಲಿಕೆ ವ್ಯಾಪ್ತಿಯ ಮನೆ, ಅಪಾರ್ಟ್ ಮೆಂಟ್, ವಾಣಿಜ್ಯ ಕಟ್ಟಡಗಳಿಗೆ ಅನ್ವಯವಾಗುತ್ತದೆ. ವಾರದ ಎಲ್ಲಾ ದಿನಗಳಲ್ಲಿ ಹಸಿ ಕಸ ಮತ್ತು ಶುಕ್ರವಾರ ಒಣ ಕಸ ನೀಡಲು ಅವಕಾಶ ಕಲ್ಪಿಸಲಾಗಿದೆ.

 
 
 
 
 
 
 
 
 
 
 

Leave a Reply