ಜೀವನ ನಿರ್ವಹಣೆಗಾಗಿ ಹೊಲಿಗೆ ಯಂತ್ರಗಳ ವಿತರಣೆ

ಕೋಟ : ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಈ ವರ್ಷದ ಜಿಲ್ಲಾ ಯೋಜನೆಯ ಅಂಗವಾಗಿ ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕ ದೃಡತೆಗಾಗಿ 3 ಮಂದಿ ಅತೀ ಅಗತ್ಯವಿರುವ ಮಹಿಳೆಯರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಹೊಲಿಗೆ ಯಂತ್ರಗಳನ್ನು ಕ್ಲಬ್‌ನ ಮಾಜಿ ಅಧ್ಯಕ್ಷ ರೊ. ನಿತ್ಯಾನಂದ ನಾಯರಿರವರ ನಿವಾಸದಲ್ಲಿ ರೋಟರಿ ಕ್ಲಬ್ ಕೋಟ ಸಿಟಿಯ ಅಧ್ಯಕ್ಷರಾದ ರೊ. ಶಿವಾನಂದ ನಾಯರಿರವರು ವಿತರಿಸಿದರು.

ಜೊತೆ ಕಾರ್ಯದರ್ಶಿ ರೊ. ಸತೀಶ್ ಪೂಜಾರಿ, ಆ್ಯನ್ ಜ್ಯೋತಿ ನಿತ್ಯಾನಂದ ನಾಯರಿ,ರೊ. ಸುಬ್ರಾಯ ಆಚಾರ್ ಹಾಗೂ ಫಲಾನುಭಾವಿಗಳ ಕುಟುಂಬ ಸದಸ್ಯರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply