ಕೋಟ- ಗಣಿತ ಕಲಿಕೋಪಕರಣ ಕೊಡುಗೆ

ಕೋಟ: ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಗಣಿತ ಕಲಿಕಾ ಉಪಕರಣವನ್ನು ಕೋಟ- ಬ್ರಹ್ಮವಾರ ವತಿಯಿಂದ ನೀಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ರೆಡ್ಡಿ ಹಸ್ತಾಂತರಿಸಿ ಮಾತನಾಡಿ ಕಲಿಕಾ ಉಪಕರಣಗಳ ವಿದ್ಯಾರ್ಥಿಗಳ ಜ್ಞಾನಶಕ್ತಿ ವೃದ್ಧಿಯಾಗಲು ಸಹಕಾರಿಯಾಗಲಿದೆ ಮತ್ತಷ್ಟು ಉಪಕರಣಗಳು ನಮ್ಮ ಸಂಸ್ಥೆಯಿoದ ಮುಂದಿನ ದಿನಗಳಲ್ಲಿ ನೀಡಲು ಶ್ರಮಿಸುವುದಾಗಿ ಹೇಳಿದರಲ್ಲದೆ ಕನ್ನಡ ಮಾಧ್ಯಮ ಶಾಲೆ ಉಳಿಸಿ-ಬೆಳೆಸಲು ತಮ್ಮ ಸಂಸ್ಥೆ ಸಹಕಾರ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕೋಶಾಧಿಕಾರಿ ವಿಜಯಕುಮಾರ್ ಶೆಟ್ಟಿ ಜಡ್ಡಾಡಿ, ಸದಸ್ಯರಾದ ಕರುಣಾಕರ ಶೆಟ್ಟಿ ರತ್ನಾಕರ ಶೆಟ್ಟಿ,ಡಾ. ಜಗದೀಶ ಹೊಳ್ಳ, ಸಿ.ಆರ್.ಪಿ ಸವಿತಾ, ವಾಹನ ಸಮಿತಿ ಅಧ್ಯಕ್ಷ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಹಾಗೂ ಪೋಷಕರು ,ಶಿಕ್ಷಕರ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮಹಾಲಕ್ಷ್ಮೀ ಸೋಮಯಜಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ರೂಬಿ ಪಿಂಟೋ ನಿರೂಪಿಸಿದರು. ಮುಖ್ಯಶಿಕ್ಷಕಿ ಪುಷ್ಪಾವತಿ ಎಚ್ ವಂದಿಸಿದರು.
ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಗಣಿತ ಕಲಿಕಾ ಉಪಕರಣವನ್ನು ಕೋಟ- ಬ್ರಹ್ಮವಾರ ವತಿಯಿಂದ ನೀಡಿದರು. ಕಾರ್ಯಕ್ರಮದಲ್ಲಿ ವಾಹನ ಸಮಿತಿ ಅಧ್ಯಕ್ಷ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಮಾತನಾಡಿದರು. ಲಯನ್ಸ್ ಕ್ಲಬ್ ಕೋಶಾಧಿಕಾರಿ ವಿಜಯಕುಮಾರ್ ಶೆಟ್ಟಿ ಜಡ್ಡಾಡಿ, ಸದಸ್ಯರಾದ ಕರುಣಾಕರ ಶೆಟ್ಟಿ ರತ್ನಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply