ಕಡಿಯಾಳಿ ವಲಯ ಸಮಿತಿ ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭ

ಉಡುಪಿ :  ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ, ಕಡಿಯಾಳಿ ವಲಯ ಸಮಿತಿಯ ಬೆಳ್ಳಿಹಬ್ಬದ ಉದ್ಘಾಟನಾ ಸಮಾರಂಭವು ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ನೆರವೇರಿತು.  ಉದ್ಘಾಟನಾ ಕಾರ‍್ಯಕ್ರಮವನ್ನು ಶೀರೂರು ಮಠದ ದಿವಾನರಾದ ಡಾ| ಉದಯಕುಮಾರ್‌ ಸರಳತ್ತಾಯರು ನೆರವೇರಿಸಿದರು.

ಬೆಳ್ಳಿಹಬ್ಬದ ಪ್ರಯುಕ್ತ ಜುಲೈ ಹಾಗೂ ಅಗೋಸ್ಟ್‌ ತಿಂಗಳಲ್ಲಿ ಹಮ್ಮಿಕೊಂಡಿರುವ ಋಕ್‌ ಸಂಹಿತಾ ಯಾಗ ಹಾಗೂ ಭಾಗವತ ಪ್ರವಚನ ಕಾರ‍್ಯಕ್ರಮದ ಕರ ಪತ್ರವನ್ನು ಮುಖ್ಯ ಅತಿಥಿ ಮುರಳಿಕೃಷ್ಣ ತಂತ್ರಿ, ಅಬುದಾಭಿ ಇವರು ಬಿಡುಗಡೆಗೊಳಿಸಿದರು.

ಸಭಾದ್ಯಕ್ಷತೆಯನ್ನು ಡಾ| ರವಿರಾಜ ಆಚಾರ್ಯ ವಹಿಸಿ, ಬ್ರಾಹ್ಮಣ ಸಮುದಾಯದ ಏಳಿಗೆಗೆ ಸಹಕಾರಿಯಾಗುವಂತೆ ವಿವಿಧ ರೀತಿಯ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಚಿಂತನೆಯನ್ನು ವ್ಯಕ್ತಪಡಿಸಿದರು. ಕುಂಜಿತ್ತಾಯ ಶ್ರೀನಿವಾಸ ಉಪಾಧ್ಯಾಯ ಕಡಿಯಾಳಿ ವಲಯ ಸಮಿತಿಯ ಅಧ್ಯಕ್ಷರು ಸ್ವಾಗತಿಸಿದರು. ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ನಾಗರಾಜ ತಂತ್ರಿಯವರು ಮುಂದಿನ ಒಂದು ವರ್ಷದಲ್ಲಿ ನಡೆಯುವ ವಿವಿಧ ಕಾರ‍್ಯಕ್ರಮಗಳ ಬಗ್ಗೆ ವಿವಿರವಾಗಿ ತಿಳಿಸಿದರು.

ವಲಯದ ಕಾರ್ಯದರ್ಶಿ ಸದಾನಂದ ಧನ್ಯವಾದವಿತ್ತರು. ಚೈತನ್ಯ ಎಂ.ಜಿ ಕಾರ‍್ಯಕ್ರಮವನ್ನು ನಿರೂಪಿಸಿದರು. ಬಳಿಕ  ಡಾ| ವಿದ್ವಾನ್‌ ಉದಯಕುಮಾರ ಸರಳತ್ತಾಯರಿಂದ, ಬೆಳ್ಳಿ ಹಬ್ಬದ ಮೊದಲ ಧಾರ್ಮಿಕ ಕಾರ‍್ಯಕ್ರಮದ ಪ್ರಯುಕ್ತ ಋಕ್‌ ಸಂಹಿತಾಯಾಗ ಹಾಗೂ ಭಾಗತವ ಪ್ರವಚನದ ಪ್ರಾಮುಖ್ಯತೆಯ ಬಗ್ಗೆ ಪ್ರವಚನ ಕಾರ‍್ಯಕ್ರಮವು ನಡೆಯಿತು.

 
 
 
 
 
 
 
 
 
 
 

Leave a Reply