ಶ್ರವಣ ದೋಷವುಳ್ಳ ವಿಕಲ ಚೇತನರಿಗೆ ಕಿವಿಯಚ್ಚು ವಿತರಣಾ ಕಾರ್ಯಕ್ರಮ

ಆದಿತ್ಯ ಟ್ರಸ್ಟ್ (ರಿ ), ನಕ್ರೆ ಕಾರ್ಕಳ, ರೋಟರಿ ಕ್ಲಬ್ ಕಲ್ಯಾಣ ಪುರ ಸಂತೆಕಟ್ಟೆ ಇವರ ಸಹಯೋಗದಲ್ಲಿ ಶ್ರವಣ ದೋಷವುಳ್ಳ ವಿಕಲ ಚೇತನರಿಗೆ ಕಿವಿಯಚ್ಚು (Ear Mould ) ವಿತರಣಾ ಕಾರ್ಯಕ್ರಮವು ಕಲ್ಯಾಣ ಪುರ ರೋಟರಿ ಸಭಾ ಭವನದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರೊ. ಚಾರ್ಲೆಟ್ ಲೂವಿಸ್ ಅಲಂಕರಿಸಿದ್ದರು. ಇವರು ಮಾತನಾಡುತ್ತ, ರೋಟರಿ ಕ್ಲಬ್ ಕಲ್ಯಾಣಪುರ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಈ ಹಿಂದೆ ವಾಕ್ ಶ್ರವಣ ದೋಷ ತಪಾಸಣ ಶಿಬಿರದ ಪ್ರಾಯೋಜಕತ್ವ ವಹಿಸಿಕೊಂಡು ಉತ್ತಮವಾಗಿ ನಡೆಸಿ ಕೊಟ್ಟಿರುತ್ತೇವೆ. ಅಲ್ಲಿ ಶ್ರವಣ ಸಾಧನ ಸಿಕ್ಕ ಫಲನುಭವಿಗಳಿಗೆ ಕಿವಿಯಚ್ಚು ಮಾಡಿ ಕೊಡುತ್ತಿರುವುದು ತುಂಬ ಸಂತೋಷವನ್ನು ನೀಡಿದೆ. ರೋಟರಿ ಕ್ಲಬ್ ಸದಾಕಾಲ ಸಹಕಾರವನ್ನು ಕೊಡುತ್ತದೆ ಎಂದರು.

ಅತಿಥಿಯಾಗಿ ಬಂದ ರೋಟರಿ ಅಸಿಸ್ಟೆಂಟ್ ಗವರ್ನರ್ ರೊ. ಆನಂದ ಶೆಟ್ಟಿ ಇವರು ಆದಿತ್ಯ ಟ್ರಸ್ಟಿನ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶ್ರೀಮತಿ ರೊ. ರೀನಾ ಆನಂದ ಶೆಟ್ಟಿ ಇವರು ಮಾತನಾಡುತ್ತ, ಆದಿತ್ಯ ಟ್ರಸ್ಟ್ ವಿಕಲ ಚೇತನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಾ ಇದೆ. ಅವರ ಜೊತೆಯಲ್ಲಿ ರೋಟರಿ ಕ್ಲಬ್ ಸೇರಿಕೊಂಡು ಕಾರ್ಯಕ್ರಮ ಮಾಡುವುದು ಹೆಮ್ಮೆಯ ವಿಚಾರ ಎಂದರು. ಸಕ್ಷಮಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಲತಾ ಇವರು ಸಕ್ಷಮದ ಕಾರ್ಯ ಯೋಜನೆಗಳನ್ನು ವಿವರಿಸಿದರು. ಆದಿತ್ಯ ಟ್ರಸ್ಟಿನ ಅಧ್ಯಕ್ಷ ಶ್ರೀ ಮಂಜುನಾಥ್ ತೆಂಕಿಲ್ಲಾಯ ಇವರು ಆದಿತ್ಯ ಟ್ರಸ್ಟಿನ ಧ್ಯೇಯ ಉದ್ದೇಶ ಗಳನ್ನು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ವಾಗಜ್ಯೋತಿ ವಾಕ್ ಶ್ರವಣ ವಿಶೇಷ ಶಾಲಾ ಮುಖ್ಯ್ಯೊಪಾದ್ಯಾಯ ಶ್ರೀ ರವೀಂದ್ರ ಇವರು ಶ್ರವಣ ಯಂತ್ರದ ರಕ್ಷಣೆ, ಉಪಯೋಗಿಸುವ ಕ್ರಮ, ಬ್ಯಾಟರಿ ಚಾರ್ಜ್ ಮೋಡ್, ಕಿವಿಯಚ್ಚಿನ ಉಪಯೋಗ, ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಕಿವಿಯಚ್ಚು ತಂತ್ರಜ್ಞ ಶ್ರೀ ಕರಣ್ ಇವರು ಶ್ರವಣ ಯಂತ್ರಗಳಿಗೆ ಕಿವಿಯಚ್ಚು ಜೋಡಿಸಿ ಕೊಟ್ಟರು. ರೊ. ಅಲೆನ್ ಲೂವಿಸ್ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶ್ರೀ ರಮೇಶ್ ಇವರು ಸಂಪೂರ್ಣ ಸಹಕಾರವನ್ನು ನೀಡಿದರು.

 
 
 
 
 
 
 
 
 
 
 

Leave a Reply