ಬ್ರಹ್ಮಾವರ- 21 ನೇ ವಷ೯ದ ವೈದ್ಯರ ದಿನಾಚರಣೆ ಮತ್ತು ವೈದ್ಯರ ಅಭಿನಂದನಾ ಸಮಾರಂಭ

ಉಡುಪಿ :- ಕನಾ೯ಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ ಉಡುಪಿ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಬ್ರಹ್ಮಾವರ ರೋಯಲ್ ಇನ್ ಸಭಾಂಗಣದಲ್ಲಿ ಜುಲೈ – 8 ಶನಿವಾರ 21 ನೇ ವಷ೯ದ ವೈದ್ಯರ ದಿನಾಚರಣೆ ಮತ್ತು ವೈದ್ಯರ ಅಭಿನಂದನಾ ಸಮಾರಂಭ ನಡೆಯಿತು.

ಮುಖ್ಯ ಅತಿಥಿ ಕೆ.ಎಂ.ಸಿ ಮಣಿಪಾಲದ ಡೀನ್ ಯುರಾಲಜಿ ವಿಭಾಗದ ಪ್ರಾಧ್ಯಾಪಕ ಡಾII ಪದ್ಮರಾಜ್ ಹೆಗ್ಡೆ ಮಾತನಾಡಿ, ವೈದ್ಯರು ತಮ್ಮ ಹೆಚ್ಚಿನ ಸಮಯವನ್ನು ರೋಗಿಗಳ ಸೇವೆಯಲ್ಲಿ ಕಳೆಯುತ್ತಾರೆ. ಆದರೆ ರೋಗಿಗಳಿಗೆ ತೊಂದರೆಯಾದಾಗ ವೈದ್ಯರಿಗೆ ತೊಂದರೆ ಕೊಡುವುದು ಸರಿಯಲ್ಲ, ಇವರ ಸೇವೆಯನ್ನು ಸಮಾಜ ಗುರುತಿಸಿ ಅವರಿಗೆ ಗೌರವ ನೀಡುತ್ತಿರುವುದು ಅಭಿನಂದನೀಯ ಎಂದರು.
ಐ.ಎಂ.ಎ ಉಡುಪಿ ಕರಾವಳಿ ಅಧ್ಯಕ್ಷ ಮತ್ತು ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳ ನಿದೇ೯ಶಕ ಡಾ| ಪಿ.ವಿ ಭಂಡಾರಿ, ವೈದ್ಯರನ್ನು ವಿನಾ ಕಾರಣ ಹಲ್ಲೆ ಮಾಡುವುದು ಅವರ ಮೇಲೆ ಮಾನಸಿಕ ಕಿರುಕುಳ ನಡೆಯುತ್ತಿರುವುದು ಖಂಡನೀಯ. ವೈದ್ಯರ ಸಂಘದಿಂದ ಮಾತ್ರ ಈ ಹಿಂದೆ ವೈದ್ಯರನ್ನು ಗುರುತಿಸಲಾಗುತ್ತಿತ್ತು ಆದರೆ ಇಂದು ಸಮಾಜದ ವಿವಿಧ ಸಂಘ- ಸಂಸ್ಥೆಗಳು ಈ ಕಾಯ೯ ಮಾಡುತ್ತಿರುವುದು ಅಭಿನಂದನೀಯ ಎಂದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ವಿವೇಕಾನಂದ ಕಾಮತ್ ವಹಿಸಿದ್ದರು. ವೇದಿಕೆಯಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ, ಕಾಯ೯ದಶಿ೯ ಪ್ರಸನ್ನ ಕಾರಂತ್, ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಸುಂದರ ಪೂಜಾರಿ ಮೂಡುಕುಕ್ಕುಡೆ ಮುಂತಾದವರು ಉಪಸ್ಥಿತರಿದ್ದರು.
ಖ್ಯಾತ ವೈದ್ಯರುಗಳಾದ ಮಣಿಪಾಲ ಕೆ.ಎಂ.ಸಿ ಯ ಚಮ೯ ರೋಗ ವಿಭಾಗದ ಪ್ರಾಧ್ಯಾಪಕ ಡಾII ಸತೀಶ್ ಪೈ, ಹೈಟೆಕ್ ಆಸ್ಪತ್ರೆಯ ಮೂಳೆ ರೋಗ ತಜ್ಞ ಡಾII ಉಮೇಶ್ ಪ್ರಭು ಯು, ಪ್ರಾಥಮಿಕ ಆರೋಗ್ಯ ಕೇಂದ್ರ ದೊoಡೆ ರಂಗಡಿಯ ವೈದ್ಯಾಧಿಕಾರಿ ಡಾIIಚoದ್ರಿಕಾ ಕಿಣಿ, ಕೋಟ ಪಿ.ಹೆಚ್.ಸಿ ಆರೋಗ್ಯಾಧಿಕಾರಿ ಡಾ| ವಿಶ್ವನಾಥ್ ಬಿ ಯವರನ್ನು ಗೌರವಿಸಲಾಯಿತು.

ಈ ಸಂದಭ೯ದಲ್ಲಿ ಸನ್ಮಾನಿತರು ಮಾತನಾಡಿದರು.ಹಿರಿಯ ಸಾಧಕ ವೈದ್ಯಕೀಯ ಪ್ರತಿನಿಧಿಗಳನ್ನು ಗುರುತಿಸಲಾಯಿತು.ಜಯಂಟ್ಸ್ ಕಾಯ೯ದಶಿ೯ ಮಿಲ್ಟನ್ ಒಲಿವೇರಾ ವರದಿ ವಾಚಿಸಿದರು. ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು.
ಅಂಬಿಕಾ, ಡೊರಿಸ್, ಸುಬ್ರಮಣ್ಯ ಆಚಾಯ೯, ರಾಘವೇಂದ್ರ ಪ್ರಭು, ಕವಾ೯ಲು ಪರಿಚಯಿಸಿದರು. ಅನಂತ್ ಹೊಳ್ಳ ನಿರೂಪಿಸಿದರು.ಪ್ರಸನ್ನ ಕಾರಂತ್ ವಂದಿಸಿದರು.

 
 
 
 
 
 
 
 
 
 
 

Leave a Reply