ಅಭಿಮಾನ್ ಸ್ಪೋಟ್ರ್ಸ್ ಕ್ಲಬ್ ಇದರ 17 ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ

ಉಡುಪಿ ಆ.19: ಅಭಿಮಾನ್ ಸ್ಪೋಟ್ರ್ಸ್ ಕ್ಲಬ್ ಇದರ 17 ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ಇಂದು ಅಲೆವೂರಿನ ರಾಮಪುರ ಬಳಿ ನಡೆಯಿತು. ಕಾರ್ಯಕ್ರಮವನ್ನು ಉಡುಪಿ ಶೀರೂರು ಮಠದ ದಿವಾನರಾದ ಡಾ. ಎಮ್. ಉದಯ ಕುಮಾರ್ ಸರಳತ್ತಾಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜೀವನದಲ್ಲಿ ಬರುವ ಕಷ್ಟಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಆಟಗಳನ್ನು ಆಡುವಾಗ ನಮಗೆ ಯಾವುದೇ ಮಳೆ, ಬಿಸಿಲು ಅಡ್ಡಿಯಾಗುವುದಿಲ್ಲ. ಆದ್ದರಿಂದ ಕಷ್ಟಗಳನ್ನು ಕೂಡಾ ನಾವು ಆಟದ ರೀತಿಯಲ್ಲಿ ಸ್ವೀಕಾರ ಮಾಡಬೇಕು ಆಗ ಅದು ಸಮಸ್ಯೆ ಎನಿಸುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕøತ ಮಹಾಬಲ ಶೆಟ್ಟಿ ನಿಟ್ಟೂರು ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿದ ಗಾಯತ್ರಿ ಶೇರಿಗಾರ್ ಕೆಮ್ತೂರು ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 7 ನೇ ರ್ಯಾಂಕ್ ಗಳಿಸಿದ ಪ್ರತೀಕ್ಷಾ ನಾಯಕ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುದ್ದು ಕೃಷ್ಣ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಎಲ್.ಐ.ಸಿ ಡೆವಲಪ್ಮೆಂಟ್ ಆಫೀಸರ್ ರಾಮ್ ದಾಸ್ ಶೆಟ್ಟಿಗಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಅಂಚನ್, ತೆಂಕು ಪೇಟೆ ಶ್ರೀ ರಾಮ ಭವನದ ಸಂಸ್ಕøತಿ ವಿಶ್ವ ಪ್ರತಿಷ್ಠಾನದ ವಿಶ್ವನಾಥ ಶೆಣೈ ಉಡುಪಿ, ಕೊರಂಗ್ರಪಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಶೇರಿಗಾರ , 80 ಬಡಗುಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ಶುಭಕರ ಶೆಟ್ಟಿ, ಅಭಿಮಾನ್ ಸ್ಪೋಟ್ರ್ಸ್ ಕ್ಲಬ್ ನ ಗೌರವಾಧ್ಯಕ್ಷ ಅಶೋಕ ಶೆಟ್ಟಿಗಾರ, ದಿನೇಶ್ ಶೆಟ್ಟಿ ಕೆಮ್ತೂರು, ಅಧ್ಯಕ್ಷ ಪ್ರಕಾಶ್ ಕುಮಾರ್, ಗೌರವ ಸಲಹೆಗಾರರಾದ ರಾಘವ ಶೇರಿಗಾರ ಉಪಸ್ಥಿತರಿದ್ದರು.

ಅಭಿಮಾನ್ ಸ್ಪೋಟ್ರ್ಸ್ ಕ್ಲಬ್‍ನ ಸಾಂಸ್ಕøತಿಕ ಕಾರ್ಯದರ್ಶಿ ವೆಂಕಟ್ ಶೆಟ್ಟಿಗಾರ್ ಸ್ವಾಗತಿಸಿದರು, ಕಾರ್ಯದರ್ಶಿ ಸುಧಾಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply