ಸ್ವಾತಂತ್ರ ವೀರ ಸಾವರ್ಕರ್~ಶ್ರೀಕಾಂತ್ ಶೆಟ್ಟಿ ಕಾರ್ಕಳ

ಅಂಡಮಾನಿನ ರಣ ಬಿಸಿಲು.. ಆ ಬಿಸಿಲಿನ ಒಂದು ಕಿರಣವೂ ಒಳತೂರದಷ್ಟು ವ್ಯವಸ್ತಿತವಾಗಿ ಕಟ್ಟಲಾದ ಸೆಲ್ಯೂಲರ್ ಜೈಲು.. ಆ ಸುಡುಗಾಡು ದ್ವೀಪದ ಮಣ್ಣಿನ ಮಕ್ಕಳೆಂದರೆ ಕೇವಲ ವಿಷಜಂತುಗಳು ಮಾತ್ರ… ಎಲ್ಲೆಂದರಲ್ಲಿ ಬಾಲದ ತುದಿಯ ಸೂಚಿ ಯನ್ನು ಅಲ್ಲಡಿಸುತ್ತಾ ಅತ್ತಿಂದಿತ್ತ ಓಡಾಡುವ ಭಾರೀ ಗಾತ್ರದ ರಣಚೇಳುಗಳು.. ಗೋಡೆಯ ಸಂದುಗೊಂದುಗಳಲ್ಲಿ ದುತ್ತೆಂದು ಪ್ರತ್ಯಕ್ಷವಾಗುವ ಕರ್ಮಟ ವಿಷದ ನಡು ಗಾತ್ರದ ಹಾವುಗಳು… ನಮ್ಮ ಕ್ರಾಂತಿಕಾರಿಗಳ ಮೇಲೆ ನರಹಂತಕ ಬ್ರಿಟೀಷ್ ಜೈಲರ್ ಗಳ ಬಗೆ ಬಗೆಯ ವಿಕೃತ ಪ್ರಯೋಗಗಳು ಇಲ್ಲಿ ನಡೆಯುತ್ತಿದ್ದವು…

ಭಾರತದ ಜೈಲಿನಲ್ಲಿ ಪಳಗಿಸಲಾಗದ ಕಡು ಕ್ರಾಂತಿಕಾರಿಗಳನ್ನೆಲ್ಲಾ ಅಂಡಮಾನಿಗೆ ಅಟ್ಟುತ್ತಿದ್ದರು.ಅಲ್ಲಿನ ಕರಿನೀರ ಶಿಕ್ಷೆ ಎಂದರೆ ಸಾಕು ಎಂಥಾ ಗಂಡೆದೆಯವನೂ ಬೆಚ್ಚಿ ಬೀಳುತ್ತಾನೆ.ಕೈಕಾಲುಗಳಿಗೆ ಕಬ್ಬಿಣ ಜಡಿದು ತಿಂಗಳುಗಟ್ಟಲೆ ಒಂದೇ ಬಂಗಿಯಲ್ಲಿ ಕೂಡಿಹಾಕಲಾಗುತ್ತಿತ್ತು. ಮಲಮೂತ್ರ ಎಲ್ಲವೂ ಅಲ್ಲೇ. ಹುಳಹುಪ್ಪಡಿಗಳನ್ನೂ ಸೇರಿಸಿ ಬೇಯಿಸಿ ಹಾಕಿದ ಅನ್ನವನ್ನು ಅಡ್ಡಬಿದ್ದು ಮುಕ್ಕಬೇಕು. ಬಿಗಿದ ಕೋಳದಿಂದಾಗಿ ರಕ್ತ ಸಂಚಾರವಿಲ್ಲದೆ ಕೆಲವು ಕೈದಿಗಳ ಅಂಗಾಂಗಗಳು ಕೊಳೆತೇ ಹೋಗುತ್ತಿದ್ದವು.

ಈ ಅಂಡಮಾನಿನ ಸೆಲ್ಯುಲರ್ ಜೈಲು ಭಾರತ ಕ್ರಾಂತಿಕಾರಿಗಳಿಗೆ ಒಂದು ಯೂನಿವರ್ಸಿಟಿ ಇದ್ದಂತೆ. ಈ ಜೈಲಿಗೆ ಬಂದುಹೋದನೆಂದರೆ ಸಾಕು ಆತನಿಗೆ ಭಾರತದ ಸ್ವಾತಂತ್ರ ಹೋರಾಟಗಾರರ ವಲಯದಲ್ಲಿ ವಿಶೇಷ ಮಾನ್ಯತೆ ದೊರೆಯುತ್ತಿತ್ತು. ಅದೋ ಆ ಕೊಠಡಿಯಿಂದ ಏನೋ ಸದ್ದು ಕೇಳುತ್ತಿದೆ… ಗಾಣದ ಸದ್ದು ಅಂಡಮಾನಿನ ತೆಂಗಿನ ತೋಟಗಳ ಕಾಯಿ ಸುಲಿದು ಎಣ್ಣೆ ತೆಗೆಯುವುದು ಇದೇ ಜೈಲಿನ ಕೈದಿಗಳು.. ಇಲ್ಲಿ ಗಾಣಕ್ಕೆ ಎತ್ತುಗಳನ್ನು ಕಟ್ಟುವುದಿಲ್ಲ ಬದಲಾಗಿ ಕೈದಿಗಳನ್ನೇ ಕಟ್ಟಿ ಗಾಣ ಹೊಡೆಯುತ್ತಾರೆ.

ಆ ಗಾಣಗಳಿಂದ ಕೇವಲ ಎಣ್ಣೆಯಷ್ಟೇ ಅಲ್ಲ ಕೆಲವೊಮ್ಮೆ ರಕ್ತವೂ ಒಸರುತ್ತಿತ್ತು.ಅಲ್ಲೊಬ್ಬ ಕೈದಿ ಎಣ್ಣೆ ಗಾಣ ಸುತ್ತುತ್ತಿದ್ದಾನೆ ನೋಡಿ.. ನೊಗದ ಭಾರಕ್ಕೆ ಬೆನ್ನು ಬೆಂಡಾಗಿದೆ ಅಂಗಿ ಸವೆದು ಭುಜದ ಸಿಪ್ಪೆಯೂ ಜಾರಿದೆ.. ಆತನ ಕಾಲು ಕುಸಿಯುತ್ತಿದೆ..ಆ ಸುಡುಗಾಡು ದ್ವೀಪದಲ್ಲಿ ಸೂರ್ಯನದ್ದೂ ವಿಪರೀತ ದಬ್ಬಾಳಿಕೆ.. ಕರುಣೆ ಇಲ್ಲದ ಸೂರ್ಯನ ಉರಿಗೆ ನೆತ್ತಿ ಸುಟ್ಟು ಗಂಟಲಿನ ಪಸೆಯೂ ಆರಿ ಹೋಗಿದೆ. ನೋವು ಹೇಳಿಕೊಳ್ಳೋಣವೆಂದರೆ ಅಲ್ಲಿ ಯಾರೂ ತನ್ನವರು ಇಲ್ಲ.

ದೇಶದ ಯಾವುದೋ ಮೂಲೆಯಲ್ಲಿ ಆ ಕೈದಿಯ ಮನೆ ಇದ್ದಿರಬಹುದು. ಅಲ್ಲಿ ಆತನ ಪರಿಸ್ಥಿತಿಯನ್ನು ನೆನೆದು ಮನೆಯವರೂ ಕಣ್ಣೀರಾಗಿರಬಹುದು. ಆದರೆ ಅವರು ಏನೂ ಮಾಡಲಾರರು ಆತನೂ ಏನೂ ಮಾಡಲಾರ ಏಕೆಂದರೆ ಆತನಿಗೆ ಸಿಕ್ಕಿರುವುದು ಅಂಡಮಾನಿನ ಕಾಲಾಪಾನಿ ಸಜೆ… ಸ್ವಾತಂತ್ರವೀರರ ವಿರುದ್ಧ ಬ್ರಿಟೀಷರು ಹೂಡಿದ್ದ ಬ್ರಹ್ಮಾಸ್ತ್ರ ಅದು. ದುರ್ಬಲ ಹೃದಯದವರು ಈ ಸಜೆಯನ್ನು ಕೇಳಿ ಕಟಕಟೆಯಲ್ಲೇ ಮೂರ್ಚೆ ಹೋಗುತ್ತಿದ್ದರು. ದಿಟ್ಟಿಸಿದಷ್ಟು ದೂರಕ್ಕೆ ಹಬ್ಬಿರುವ ಕೆಂಡದಂತ ಮರಳು ರಾಶಿ ಅದರಾಚೆಗೆ ಸಾಗರದ ಚೂಪು ಎಲ್ಲೆ…ಅದೋ ಗಾಣದ ಕೈದಿ ಬಿದ್ದೇ ಬಿಟ್ಟ…ಅದೆಲ್ಲಿಂದ ಬಂದನೋ ಗೊತ್ತಿಲ್ಲ. ಆಂಗ್ಲ ಅಧಿಕಾರಿಯೊಬ್ಬ ಬಿದ್ದ ಕೈದಿಯ ಬೆನ್ನಿಗೆ ತನ್ನ ಬೂಟುಗಾಲಿನಿಂದ ಝಾಡಿಸಿ ಒದ್ದ.

.ಅಯ್ಯೋ ರಾಮಾ…. ಬಿದ್ದ ಪೆಟ್ಟಿಗೆ ಕೀರಲು ಸ್ವರದಲ್ಲಿ ನರಳಿದ ಆ ಬಡಪಾಯಿ ತನ್ನ ಮೈ ಕೈಗಳಲ್ಲಿ ಸೀದು ಹೋದ ಅಷ್ಟೂ ಶಕ್ತಿಯನ್ನು ಒಗ್ಗೂಡಿಸಿ ಮತ್ತೆ ಗಾಣಕ್ಕೆ ಹೆಗಲು ಕೊಟ್ಟ. ಬೆನ್ನಿನ ಗಾಯ ಬೆವರಿನ ಉಪ್ಪಿಗೆ ಜುಮ್ಮನೆ ಉರಿಯ ಹತ್ತಿತು..ದುರ್ಬಲನಾದವನನ್ನು ಯಾವ ರಾಮನೂ ಕಾಪಾಡೋದಿಲ್ಲ ಛಲ, ಶಕ್ತಿಯೇ ನಿನ್ನ ಯಶಸ್ಸನ್ನು ನಿರ್ಧರಿಸುತ್ತದೆ…. ಪಕ್ಕದಿಂದ ಮೊಳಗಿತು ಸಿಂಹವಾಣಿ. ಯಾರಾತ..? ಪಕ್ಕದ ಗಾಣದಲ್ಲಿ ಸತತವಾಗಿ ೧೪ ಗಂಟೆಗಳಿಂದ ಒಂದೇ ಸಮನೇ ಆ ವ್ಯಕ್ತಿ ಗಾಣ ತಿರುಗಿಸುತ್ತಿದ್ದ.

ಜೈಲರ್ ಡೇವಿಡ್ ಬಾರಿ ಕೊಟ್ಟ ಹೆಚ್ಚುವರಿ ಶಿಕ್ಷೆ ಆತನಿಗೆ..ಆದರೂ ಮುಖದಲ್ಲಿ ಸುಸ್ತು ಕಾಣುತ್ತಿಲ್ಲ. ನಿನ್ನೆ ತಾನೆ ತೆಂಗಿನ ನಾರು ಸುಲಿದು ಎರಡೂ ಕೈಯ ಸಿಪ್ಪೆ ಎದ್ದಿತ್ತು.ಇಂದು ನೋಡಿದರೆ ಈತನನ್ನು ಗಾಣಕ್ಕೆ ಕಟ್ಟಿದ್ದಾರೆ..ಈತ ಮನುಷ್ಯನೋ ಅಥವಾ ಯಾವುದಾದರೂ ಜಾನುವಾರೋ..ಅಷ್ಟಕ್ಕೂ ಈತನಿಗೆ ಕೊಡಲಾದ ಶಿಕ್ಷೆಯಾದರೂ ಎಷ್ಟು..? 52ವರ್ಷ..!!! ಕೇಳುವಾಗಲೇ ಮೈ ಜುಮ್ಮೆನ್ನುತ್ತದೆ.

ಎರಡೆರಡು ಜೀವಾವಧಿ ಶಿಕ್ಷೆ ಪಡೆದು ಈ ನರಕದಲ್ಲಿ ದಿನನಿತ್ಯ ಚಿತ್ರಹಿಂಸೆ ತಿನ್ನುತ್ತಿರುವ ಈ ವ್ಯಕ್ತಿ ಮಾಡಿದ ತಪ್ಪಾದರೂ ಏನು..? ಸಾಮಾನ್ಯದ್ದಲ್ಲ ಇಡೀ ಅಂಗ್ರೇಜಿ ಸರಕಾರದ ರಕ್ತದಿಂದ ಹೋಳಿಯಾಡಲು ಈ ಹೆಬ್ಬುಲಿ ಹೊರಟಿತ್ತು. ಈ ಹೆಬ್ಬುಲಿಯ ಓಡಾಟ ಎಲ್ಲೆಲ್ಲಿ ನಡೆಯಿತೋ ಆ ಎಲ್ಲಾ ಪ್ರದೇಶ ಆಂಗ್ಲ ಶಾಸನಕ್ಕೆ ಬೆಂಕಿಯಲ್ಲಿಟ್ಟ ಬಾಣಾಲೆಯಾಗಿ ಬಿಡುತ್ತಿತ್ತು.ಯಾವ ಯುವಕ ಇವರ ಸಂಪರ್ಕಕ್ಕೆ ಬರುತ್ತಿದ್ದನೋ..ಆತ ಕ್ಷಣಮಾತ್ರದಲ್ಲಿ ತಾಯ್ನಾಡಿಗಾಗಿ ಜೀವ ತೆರಲು ಉತ್ಸುಕನಾಗಿ ಬಿಡುತ್ತಿದ್ದ.

ಬಾಯಿ ತೆರೆದರೆ ಸಾಕು ಬ್ರಿಟೀಷರನ್ನು ಹಿಡಿ ಬೂದಿ ಮಾಡುವಂತ ಕಿಡಿನುಡಿಗಳು..ಯಾವ ವೀರಪುರುಷನೂ ಖಡ್ಗದಲ್ಲಿ ಸಾಧಿಸಲಾಗದಿದ್ದನ್ನು ಈ ವ್ಯಕ್ತಿ ಕೇವಲ ತನ್ನ ಪೆನ್ನಿನಿಂದ ಸಾಧಿಸಿ ಬಿಟ್ಟಿದ್ದ. ಈತನನ್ನು ಹೆಡೆಮುರಿ ಕಟ್ಟುವವರೆಗೆ ಬ್ರಿಟೀಷರಿಗೆ ನಿದ್ದೆ ಹತ್ತಿರಲಿಲ್ಲ. ಯಾಕೆಂದರೆ ಈತ ಬ್ರಿಟೀಷರ ಮರ್ಮಾಂಗಕ್ಕೆ ಜಾಡಿಸಿ ಒದ್ದಿದ್ದ. 

ಅಂದರೆ ಬ್ರಿಟೀಷರ ಶಕ್ತಿಕೇಂದ್ರವಾದ ಲಂಡನ್ನಿನ್ನಲ್ಲೇ ಭಾರತದ ಕ್ರಾಂತಿಯ ಹೋರಾಟಕ್ಕೆ ಸಂಚು ಹೂಡಿದ್ದ.. ಯಾರಾತ.. ಸಾವರ್ಕರ್… ವೀರ ಸಾವರ್ಕರ್.. ಸ್ವಾತಂತ್ರ ವೀರ ಸಾವರ್ಕರ್.. ವಿನಾಯಕ್ ದಾಮೋದರ ಸಾವರ್ಕರ್… ಆತನ ಹೆಸರು ಕೇಳುತ್ತಲೆ ರಾಷ್ಟ್ರದ ಕ್ರಾಂತಿಕಾರಿಗಳ ಹೃದಯ ಅಭಿಮಾನದಿಂದ ಉಬ್ಬಿ ಹೋಗುತ್ತಿತ್ತು… ಪೆಟ್ಟು ತಿಂದ ಕೈದಿಯ ದುರ್ಬಲತೆಯನ್ನು ಅಣಕಿಸಿದ್ದು ಇದೇ ಹೆಬ್ಬುಲಿ. ಕೈದಿ ಮೆಲ್ಲನೆ ಮಾತಿಗೆ ಅಡಿ ಇಟ್ಟ ಭಾವೂ ನಿಮ್ಮ ಹೆಸರೇನು..? ವಿ ಡಿ ಸಾವರ್ಕರ್.

ಕೈದಿಯ ಕಣ್ಣುಗಳಲ್ಲಿ ಅಪರಿಮಿತ ಆನಂದ ಕತ್ತಲೆಯ ಗುಹೆಯಲ್ಲಿ ಸಿಂಹದ ಘರ್ಜನೆ ಕೇಳಿದಷ್ಟು ಭಯ. ಸಾಕ್ಷಾತ್ ಭಗವಂತನೇ ಪ್ರತ್ಯಕ್ಷನಾದನೋ ಎಂಬಂಥ ಆಶ್ಚರ್ಯ ಎಲ್ಲವೂ ಏಕಕಾಲದಲ್ಲಿ .. ಖುಶಿಯಲ್ಲಿ ಹುಚ್ಚೆದ್ದು ಬಿಟ್ಟ.. ದಿನಪೂರ್ತಿ ದುಡಿದ ದಣಿವು ಕ್ಷಣಮಾತ್ರದಲ್ಲಿ ಮಾಯ.

ಯಾರ ಪ್ರೇರಣೆಯಿಂದ ಆ ಯುವಕ ಬ್ರಿಟೀಷರ ವಿರುಧ್ಧ ತಲವಾರು ಝಳಪಿಸಿದ್ದನೋ ಅದೇ ಕ್ರಾಂತಿರತ್ನ ಕಣ್ಣ ಮುಂದೆಯೇ ಹೊಳೆಯುತ್ತಿತ್ತು. ಓಡಿ ಹೋಗಿ ಕಾಲಿ ಬಿದ್ದ.ತಾತ್ಯಾಜೀ… ನಿಮ್ಮ 1857ರ ಸಂಗ್ರಾಮ ಪುಸ್ತಕವೇ ನನಗೆ ಈ ಕ್ರಾಂತಿ ಪಥವನ್ನು ಪರಿಚಯಿಸಿತು. ಸ್ವಾತಂತ್ರ ಲಕ್ಷ್ಮಿಯ ಸಾಕ್ಷಾತ್ಕಾರಕ್ಕೆ ಇಡೀ ಜೀವನ ಅರ್ಪಿಸಲು ನಿಮ್ಮ ಆ ದಿವ್ಯದೀವಿಗೆಯೇ ನನಗೆ ಬೆಳಕು ನೀಡಿತು. ಇಂದಿಗೆ ನನ್ನ ಜೀವನ ಸಾರ್ಥಕವಾಯಿತು ಎಂದು ಏನೇನೋ ಬಡಬಡಿಸಿದ. ಉದುರಿ ಬಿದ್ದ ಆತನ ಕಣ್ಣಹನಿಗಳು ಸಾವರ್ಕರ್ ಅವರ ಕಾಲನ್ನು ಸ್ಪರ್ಷಿಸಿದವು.ಇಬ್ಬರೂ ತೆಂಗಿನ ನಾರಿನ ರಾಶಿಗೆ ಒರಗಿ ಲೋಕಾಭಿರಾಮಕ್ಕೆ ಜಾರಿದರು. ….

ತೆಂಗಿನ ನಾರಿನ ಜೊತೆಗೆ ಬ್ರಿಟಿಷ್ ಅರಸೊತ್ತಿಗೆಯ ಚರ್ಮ ಸುಲಿದು ಅವರ ನಿಜರೂಪದ ದರ್ಶನ ಮಾಡಿಸಿದ ಆ ಕ್ರಾಂತಿ ಶಿರೋಮಣಿ ಯ ವಿರುದ್ಧ ಇಂದು ನಮ್ಮ ಪುತ್ತೂರು ಸಮೀಪದ ಕಬಕದಲ್ಲಿ ಕೆಲವು ಅಡಿಕೆ ಸುಲಿಯಲೂ ಯೋಗ್ಯತೆಯಿಲ್ಲದ ಉಂಡಾಡಿ ಗೂಂಡಾಗಳು ಪುಂಡಾಟ ನಡೆಸಿದ್ದಾರೆ ಎಂದು ತಿಳಿಯಿತು.

1906ರಿಂದ 1947ರವರೆಗೆ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ಸೇರಿ ದೇಶದ ರಾಜಕೀಯ ವಲಯದಲ್ಲಿ ಅಧಿಕಾರಕ್ಕಾಗಿ ನಡೆಸಿದ ಹಗ್ಗಜಗ್ಗಾಟದಿಂದ ಒಸರಿದ ಇಸ್ಲಾಮಿಕ್ ಮತಾಂಧತೆಯ ನಂಜು 47ರಲ್ಲೇ ನಿರ್ಮಾಣವಾದ ಪ್ರತ್ಯೇಕ ಮುಸ್ಲಿಂ ರಾಜ್ಯಕ್ಕೆ ಸಂಪೂರ್ಣವಾಗಿ ಹರಿದು ಭಾರತ ಹಿಂದೂ ನಂಬಿಕೆ ನಡವಳಿಕೆ ಮತ್ತು ಸಂಸ್ಕೃತಿಯ ಭದ್ರನೆಲೆಯಾಗುತ್ತದೆ ಎಂದು ನಮ್ಮ ಹಿರಿಯರು ಕನಸುಕಂಡಿದ್ದರು. ಅದಕ್ಕಾಗಿ ಲಕ್ಷಾಂತರ ಜನರ ಬಲಿದಾನವೂ ನಡೆದುಹೋಯಿತು.

ಕೊನೆಗೂ ನಮ್ಮದೆನ್ನುವ ಒಂದು ತುಂಡು ಭೂಮಿಯಾದರೂ ಸಿಕ್ಕಿತಲ್ಲವೇ ಎನ್ನುವ ಆಶಾಭಾವನೆಯಿಂದ ನಮ್ಮವರು ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡರು. ಆದರೆ ಈಗ ಅದೇ ನಂಜು ಮತ್ತೆ ಭಾರತದ ವಾತಾವರಣವನ್ನು ವಿಷಮಯಗೊಳಿಸುತ್ತಿದೆ.ಅಲ್ಲಲ್ಲಿ ಗಡ್ಡೆ ಗುಳ್ಳೆ ಗಳು ಕಾಣಿಸುತ್ತಿವೆ. ಪರಿಸ್ಥಿತಿ ಕೈ ಮೀರಿದರೆ ಮತ್ತೆ ಕತ್ತರಿ ಪ್ರಯೋಗ.. ವಿಭಜನೆ ನರಮೇಧ.. ದಳ್ಳುರಿ.. ಸಾಮೂಹಿಕ ಅತ್ಯಾಚಾರ ಮತಾಂತರ.. ಹಿಂದು ಸಮಾಜ ಕೈ ಕಟ್ಟಿ ಕುಳಿತರೆ ಮತ್ತೊಂದು ವಿಭಜನೆಯ ಗೆರೆ ಭಾರತದ ದಕ್ಷಿಣದಲ್ಲಿ ಮೂಡುವುದು ಖಚಿತ. ಸಾವರ್ಕರ್ ವಿರೋಧದ ಹೆಸರಲ್ಲಿ ಹಿಂದೂಗಳನ್ನು ದ್ವೇಷಿಸುವ ಮತಾಂಧರನ್ನು ಬಗ್ಗುಬಡಿಯಲು ಸಮಾಜ ಸನ್ನದ್ಧವಾಗಬೇಕು. ಜಾಗೃತಿ… ಜಾಗರಣ.. ಒಂದೇ ಇದಕ್ಕಿರುವ ಉತ್ತರ

ಜೈ ಮಹಾಕಾಲ್ 📝ಶ್ರೀಕಾಂತ್ ಶೆಟ್ಟಿ ಕಾರ್ಕಳ

 
 
 
 
 
 
 
 
 
 
 

Leave a Reply