ನಿಮ್ಮ ಸೌoದರ್ಯ~ ಡಾ. ಶಶಿಕಿರಣ್ ಶೆಟ್ಟಿ

ಆಕೆಗೆ ಆಕೆಯ ಸೌoದರ್ಯದ ಮೇಲೆ  ತುಂಬಾ ಹೆಮ್ಮೆ ಇತ್ತು ಯವ್ವನದ ಚೆಲುವು, ಈಗೀಗ ಕಮ್ಮಿಯಾಗುತಿತ್ತು ವಯಸ್ಸು 40 ದಾಟಿ 50 ಸಮೀಪಿಸುತಿತ್ತು.. ಇತ್ತೀಚಿಗೆ ಕನ್ನಡಿ ನೋಡುತಿದ್ದರೆ ಅಲ್ಲಲ್ಲಿ ನೆರಿಗೆ ಕಟ್ಟಿದ ಚರ್ಮ, ಇಣುಕುವ ಬೆಳ್ಳಿ ಕೂದಲು, ಹೆಚ್ಚುತಿದ್ದ ಕೊಬ್ಬು ಆಕೆಗೆ ತುಂಬಾ ರಗಳೆ ಕೊಡುತಿದ್ದವು.
ತಿಂಗಳಲ್ಲಿ 5,6 ಕನ್ನಡಿ ಹೊಸತು ತರುತಿದ್ದಳು, ಸ್ಟೋರ್ ರೂಮಲ್ಲಿ ಬದಲಾಯಿಸಿದ್ದ ಒಟ್ಟು 60 ಕನ್ನಡಿಗಳು ಸಂಗ್ರಹವಾಗಿದ್ದವು. ಆದರೂ ಮುಖದಲ್ಲಿ ನಿರಾಸೆ, ದುಃಖ ದಿನದಿಂದ ದಿನಕ್ಕೆ ಹೆಚ್ಚಾಗುತಿತ್ತು. ಆಕೆಯ ಪತಿ ನಿತ್ಯ ಆಕೆಯನ್ನು ಒಬ್ಸರ್ವ್ ಮಾಡುತಿದ್ದ. ಅಂದು ಆಕೆ ಎಂದಿನಂತೆ ಕನ್ನಡಿ ಮುಂದೆ ಬಂದರೆ ಅಲ್ಲೊಂದು ಅಚ್ಚರಿ ಕಾದಿತ್ತು.. ಕನ್ನಡಿ ಮೇಲೆ ಲಿಪ್ಸ್ಟಿಕ್ ನಿಂದ ಬರೆದ ಸುಂದರವಾದ ಬರಹವೊಂದಿತ್ತು.

 ಗಂಡ ಹೀಗೆ ಬರೆದಿದ್ದ. “ನಾನು ಇಷ್ಟ ಪಟ್ಟಿದ್ದು, ಈ ಕನ್ನಡಿಯನ್ನಲ್ಲ, ಅದರ ಹಿಂದಿರುವ ಎಂದೂ ಬದಲಾಗದ ಸ್ವಭಾವವನ್ನು, ಎಂದೂ ಮಾಸದ ಆ ಹೃದಯವನ್ನು, ಅದು ಬಿಟ್ಟು ವಯಸ್ಸಾದಂತೆ ಬದಲಾಗುವ ರೂಪ, ದೇಹ, ವ್ಯಕ್ತಿಯನ್ನಲ್ಲ “. ಓದಿದ ಆಕೆಯ ಕಣ್ಣಲ್ಲಿ ನೀರಿತ್ತು. ಆ ಕನ್ನಡಿಯನ್ನೂ ಸ್ಟೋರ್ ರೂಮ್ಗೆ ಎಸೆದು ಬಂದು ಗಂಡನ ತೋಳ ತೆಕ್ಕೆಯಲ್ಲಿ ಮರೆಯಾದಳು.

ನಿಜ ಅಲ್ಲವೇ ಒಂದಾನೊಂದು ಕಾಲದಲ್ಲಿ ವಿಶ್ವಸುಂದರಿ ಯಾಗಿದ್ದವಳೂ ಕೂಡ ಮುದುಕಿ ಯಾಗಲೇ ಬೇಕು. ಚರ್ಮ, ಕಣ್ಣು, ಬಣ್ಣ, ಸೌದರ್ಯ ಒಂದಲ್ಲ ಒಂದು ದಿನ ಮಾಸಲೇ ಬೇಕು ಹಾಗಿದ್ದ ಮೇಲೆ. ನೀವು ಗೌರವಿಸ ಬೇಕಾದ್ದು  ಎಂದೂ ಮಾಸದ ಹೃದಯವಂತ ಹೃದಯವನ್ನು, ಪ್ರೀತಿ ತುಂಬಿದ, ನಿರ್ಮಲ, ಕಪಟ ರಹಿತ ಮನಸ್ಸನ್ನಷ್ಟೇ, ನೆನಪಿರಲಿ ಇವಷ್ಟೇ ನಿಮ್ಮಲ್ಲಿರುವ ಅದ್ಭುತವಾದ ಎಂದೂ ಬದಲಾಗದೇ ಇರುವ ಆಸ್ತಿ.

 
 
 
 
 
 
 
 
 
 
 

Leave a Reply