ಬನ್ನಂಜೆ ಸಂಜೇವ ಸುವರ್ಣರಿಗೆ ‘ಗೆಳೆಯರ ಬಳಗ – ಕಾರಂತ ಪುರಸ್ಕಾರ’

ಗೆಳೆಯರ ಬಳಗ(ರಿ.)ಕಾರ್ಕಡ ಸಾಲಿಗ್ರಾಮ ಇವರು ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ‘ಗೆಳೆಯರ ಬಳಗ – ಕಾರಂತ ಪುರಸ್ಕಾರ’ಕ್ಕೆ ಈ ಬಾರಿ ಕಾರಂತರ ಒಡನಾಡಿ, ಯಕ್ಷಗಾನ ಕಲಾವಿದ,ಹಾಗೂ ಗುರು ,ಸಾಹಿತಿ ನಾಡು ನುಡಿ ಏಳಿಗೆಗಾಗಿ ಅನನ್ಯವಾಗಿ ತೊಡಗಿಸಿಕೊಂಡಿರುವ ಹಾಗೂ ಕಾರಂತರ ನಿಷ್ಟಾವಂತ ಅಭಿಮಾನಿಯಾಗಿರುವ ಶ್ರೀ ಬನ್ನಂಜೆ ಸಂಜೇವ ಸುವರ್ಣ ಇವರು ಭಾಜನರಾಗಿದ್ದಾರೆ.ಮೂಲ ಬನ್ನಂಜೆಯವರಾದ ಇವರು ಯಕ್ಷಗಾನ ಕಲೆಯ ಅನೇಕ ಆಯಾಮಗಳನ್ನು ಡಾ ಕಾರಂತರೇ ಮೋದಲಾದ 21 ಕಲಾ ಗುರುಗಳಿಂದ ಕಲಿತು, ಪರಿಣಿತರಾಗಿ, ಗುರುವಾಗಿ ಬೆಳೆದು ದೇಶ ವಿದೇಶಗಳಲ್ಲಿ 5000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತರಬೇತು ನೀಡಿದ ಅಮೋಘ ಸಾಧಕರು ಇವರಾಗಿದ್ದಾರೆ. ಯಕ್ಷಗಾನವಲ್ಲದೇ, ಭರತನಾಟ್ಯ,ಕೋಡಿಯಾಟ್ಟಂ, ಕಥಕ್ , ನಾಟಕ ಕಲೆಯಲ್ಲೂ ಪರಿಣತಿ ಪಡೆದವರಾಗಿದ್ದಾರೆ.ಡಾ ಕೋಟ ಶಿವರಾಮ ಕಾರಂತರ ನಂತರ ಇವರ ನಿರ್ದೇಶನದಲ್ಲಿಯಕ್ಷಗಾನ ಬ್ಯಾಲೆ ದೇಶ ವಿದೇಶಕ್ಕೆ ಕೋಂಡೋಯ್ದು, ಪ್ರದರ್ಶನ ನೀಡಿ ಖ್ಯಾತಿ ಗಳಿಸಿದ ಹೆಗ್ಗಳಿಕೆ ಇವರದ್ದು.

ಈ ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಫಲಪುಷ್ಪ, ಶಾಲು ಇತ್ಯಾದಿಯಿಂದ ಕೂಡಿರುತ್ತದೆ.

ಗೆಳೆಯರ ಬಳಗ ಕಾರಂತ ಪುರಸ್ಕಾರ-2022 ನ್ನು ಅಕ್ಟೋಬರ್ ತಿಂಗಳ 15 ರ ಶನಿವಾರ ಸಂಜೆ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಹಾಗೂ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು ಎಂದು ಬಳಗದ ಅಧ್ಯಕ್ಷ ಶ್ರೀ ಕೆ. ತಾರಾನಾಥ ಹೊಳ್ಳ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply