ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ :- ವರದೇಶ ಹಿರೇಗಂಗೆ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಆಶ್ರಯದಲ್ಲಿ ಕನ್ನಡದ ಹಿರಿಯ ಸಾಹಿತಿಗಳಾದ

ಶಿರಸಿಯ ಸುಬ್ರಾಯ ಮತ್ತಿಹಳ್ಳಿ ( ವಿಮರ್ಶನ ಸಾಹಿತ್ಯ), ಉಡುಪಿಯ ಅಂಶುಮಾಲಿ (ಬಹುಭಾಷಾ ಸಾಹಿತ್ಯ), ಕೋಟಾದ ನೀಲಾವರ ಸುರೇಂದ್ರ ಅಡಿಗ (ಸಮಗ್ರ ಸಾಹಿತ್ಯ ) ಇವರಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನವೆಂಬರ್ ಒಂದರಂದು ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2023’ನ್ನು ಮಣಿಪಾಲದ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್ ಇದರ ಮುಖ್ಯಸ್ಥರಾದ ಪ್ರೊ. ವರದೇಶ್ ಹಿರೇಗಂಗೆ ಅವರು ಪ್ರದಾನ ಮಾಡಿದರು.

ವರದೇಶ ಹಿರೇಗಂಗೆ ಯವರು ಸನ್ಮಾನಿಸಿ ಮಾತನಾಡುತ್ತಾ “ನಾನು ಇಂಗ್ಲಿಷ್ ವಿರೋಧಿಯಲ್ಲ , ಆದರೆ ಎಲ್ಲ ಭಾಷೆಗಳನ್ನು ಇಂಗ್ಲಿಷ್ ನುಂಗಿ ನೀರು ಕುಡಿಯಬಾರದು. ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತ ಅಧಿಕಾರಿಯಾದ ಡಾ. ಬಿ. ಜಗದೀಶ್ ಶೆಟ್ಟಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಐಎಂಎ ಕರಾವಳಿಯ ಅಧ್ಯಕ್ಷರಾಗಿರುವ ಡಾ. ರಾಜಲಕ್ಷ್ಮೀಯವರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ರಾದ ವಿಶ್ವನಾಥ್ ಶೆಣೆೈ, ಅಧ್ಯಕ್ಷರಾದ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಇದರ ವ್ಯವಸ್ಥಾಪಕರಾದ ಹಫೀಸ್ ರೆಹಮಾನ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ಸ್ವಾಗತಿಸಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್ ಪಿ ಪ್ರಸ್ತಾವನೆ ಗೈದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ , ವಿದ್ಯಾ ರಮೇಶ್ , ರಾಘವೇಂದ್ರ ಪ್ರಭು ಕರ್ವಾಲು ಸನ್ಮಾನಿತರನ್ನು ಪರಿಚಯಿಸಿದರು. ಉಪಾಧ್ಯಕ್ಷೆ ಸಂಧ್ಯಾ ಶೆಣೈ ಧನ್ಯವಾದ ನೀಡಿ, ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾದ೯ನ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply