ಭಾರ ಎತ್ತುವ ಸ್ಪರ್ಧೆಯಲ್ಲಿ ಕು.ರಕ್ಷಾ ಬೇಕಲ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ತೃತೀಯ ಬಿ.ಕಾಂ ವಿದ್ಯಾರ್ಥಿನಿ ಕು.ರಕ್ಷಾ ಬೇಕಲ್ ಇವರು ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ರವರು ಮಾರ್ಚ್ 3 ರಿಂದ 5 ರ ವರೆಗೆ ಕುಮಟಾದ ಟೌನ್ ಹಾಲ್ ನಲ್ಲಿ ನಡೆಸಿದ ರಾಜ್ಯ ಮಟ್ಟದ ಭಾರ ಎತ್ತುವ ಸ್ಪರ್ಧೆಯ ಮಹಿಳೆಯರ ಕಿರಿಯರ ವಿಭಾಗದಲ್ಲಿ +84 ಕೆಜಿ ಯಲ್ಲಿ ರಜತ ಪದಕಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಉಡುಪಿಯ ಟೆಕ್ನಿಶಿಯನ್ ಶ್ರೀ ರತಿಕಾಂತ್ ಬೇಕಲ್ ಹಾಗೂ ಪ್ರಮೀಳಾ ಇವರ ಪುತ್ರಿಯಾಗಿದ್ದು ಬಾಲಾಂಜೇಯ ಜಿಮ್ನಾಸಿಯಂ ಮಂಗಳೂರು ಇಲ್ಲಿಯ ಶ್ರೀ ಕಾರ್ತಿಕ್ ಪೂಜಾರಿಯವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂಧಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply