ಕೆ.ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಇವರಿಗೆ “ಕಥಾಬಿಂದು ಸಾಹಿತ್ಯ ಸಿರಿ – ರಾಜ್ಯ ಪ್ರಶಸ್ತಿಯ ಗರಿ

ಅಕ್ಟೋಬರ್ 29 ರಂದು ಮಂಗಳೂರು ಪುರಭವನದಲ್ಲಿ ಕಥಾಬಿಂದು ಪ್ರಕಾಶನದ 16 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕರಾದ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯೊತ್ಸವ – 2023, ಕಥಾ ಸಾಹಿತ್ಯ ಮಾಲೆ – 50 ಕೃತಿಗಳ ಲೋಕಾರ್ಪಣೆ ಹಾಗೂ ಕೃತಿಗಳ ಪ್ರದರ್ಶನ, ನಾಡಿನ ವಿವಿಧ ಸಾಧಕರಿಗೆ ಸಾಹಿತ್ಯ ಸಿರಿ, ಸಮಾಜ ಸೇವಾ ರತ್ನ, ಚೈತನ್ಯ ಶ್ರೀ ರಾಜ್ಯ ಪ್ರಶಸ್ತಿ ಪ್ರಧಾನ, ಕವಿ ಗೋಷ್ಠಿ ,ಕಥಾಬಿಂದು ಪ್ರಕಾಶನದಿಂದ ಪ್ರಕಟಗೊಂಡ ಕೃತಿಗಳ ಕೃತಿಕಾರರಿಗೆ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ಪುಂಡಲೀಕ ನಾಯಕ್ ನಾಯ್ಕನಕಟ್ಟೆ ಇವರಿಗೆ ಸಾಹಿತ್ಯ ಮತ್ತು ಸಂಘಟನೆ ವಿಭಾಗದಲ್ಲಿ ” ಕಥಾಬಿಂದು ಸಾಹಿತ್ಯ ಸಿರಿ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಹಾಗೂ ಕಥಾಬಿಂದು ಪ್ರಕಾಶನದಿಂದ ಪ್ರಕಟಗೊಂಡ ಇವರ ಸಂಪಾದಿತ ಕೃತಿ “ಸಾಹಿತ್ಯ ಕುಸುಮ” ಕವನ ಸಂಕಲನಕ್ಕಾಗಿ ವೇದಿಕೆಯಲ್ಲಿ ಗುರುತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಭಾದ್ಯಕ್ಷತೆ ವಹಿಸಿದ ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ,ಶ್ರೀಧರ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮಂಗಳೂರು ಉಪವಿಭಾಗ, ದ.ಕ ಜಿಲ್ಲಾ ಜಾನಪದ ಪರಷತ್ ಅಧ್ಯಕ್ಷ ಪ್ರವೀಣ್ ಕುಮಾರ್,ಹಿರಿಯ ಸಾಹಿತಿ ಕೊಳ್ಚಪ್ಪೆ ಡಾ.ಗೋವಿಂದ ಭಟ್,ವಾಮನ ರಾವ್ ಬೇಕಲ್ ಕಾಸರಗೋಡು ಕನ್ನಡ ಭವನ, ನ್ಯಾಯವಾದಿಗಳಾದ ಅನಿಲ್ ಬೇಕಲ್,ಸಾಹಿತಿ ಸುಂದರ ಶೆಟ್ಟಿ,ಪಿ.ವಿ ಪ್ರದೀಪ್ ಕುಮಾರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು.

 
 
 
 
 
 
 
 
 
 
 

Leave a Reply