ಪೂರ್ಣಿಮಾ ಜನಾರ್ದನ್ ಅವರು ಬರೆದ ರಾಶಿ ಪೂಜೆಯ ಮಹತ್ವ ಮತ್ತು `ಧಾರ್ಮಿಕ ವಿಷಯಗಳತ್ತ ನಮ್ಮ ಚಿತ್ತ ಕೃತಿ ಬಿಡುಗಡೆ 

ದೇವತಾ ಕಾರ್ಯಗಳ ಫಲಾನುಫಲಗಳ ಬಗ್ಗೆ ಚಿಂತನೆ ಅರಿತು ಮಾಡಿದಾಗ ಫಲಪ್ರಾಪ್ತಿ – ಪಲಿಮಾರು ಶ್ರೀ
ಪ್ರತಿಯೊಂದು ದೇವತಾ ಕಾರ್ಯಗಳನ್ನು ಮಾಡುವಾಗ ಅದರ ಫಲಾನುಫಲಗಳ ಬಗ್ಗೆ ಚಿಂತನೆ, ಮಾಡುವ ರೀತಿ ನೀತಿಗಳ ಬಗ್ಗೆ ಪ್ರತಿಯೊಂದು ವಿಷಯವನ್ನು ಅರಿತು ಮಾಡಿದಾಗ ಅದರ ಫಲ ದ್ವಿಗುಣಗೊಳ್ಳುತ್ತದೆ. ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.
ಅವರು ಗುರುವಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದದಲ್ಲಿ ನಡೆದ ರಾಶಿ ಪೂಜಾ ಮಹೋತ್ಸವದ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ಶ್ರೀಕಾಂತ್ ಬಾಯರಿ ಅವರ ರಾಶಿ ಪೂಜಾ ಪ್ರವಚನ ಆದರಿಸಿ ಸಾಹಿತಿ ಪೂರ್ಣಿಮಾ ಜನಾರ್ದನ್ ಅವರು ಬರೆದ ರಾಶಿ ಪೂಜೆಯ ಮಹತ್ವ ಮತ್ತು `ಧಾರ್ಮಿಕ ವಿಷಯಗಳತ್ತ ನಮ್ಮ ಚಿತ್ತ ಎಂಬ ಕೃತಿಯನ್ನು ಬಿಡುಗಡೆ ಗೊಳಿಸಿ ಆಶೀರ್ವಚನ ನೀಡಿದರು.
 
ರಾಶಿ ಪೂಜೆ ಮಹೋತ್ಸವ ಕೇವಲ ಕೊಡವೂರಿಗೆ ಮಾತ್ರವಲ್ಲ ಇಡೀ ಪ್ರಪಂಚಕ್ಕೆ ಸುಭೀಕ್ಷೆ ತರುವಂತದ್ದು, ಇಂತಹ ಉತ್ಸವಗಳಿಂದ  ಭಕ್ತರ ಅಭೀಷ್ಟಗಳು ಈಡೇರಿ, ಲೋಕದ ಅರಿಷ್ಟಗಳು ದೂರವಾಗಲಿ ಎಂದರು.
 ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸ ಡಾ. ಶ್ರೀಕಾಂತ್ ಬಾಯರಿ  ಆಚಾರ್ಯ ಅವರು ಮಾತನಾಡಿ, ರಾಶಿಯ ಮಹತ್ವ ನಮ್ಮ ಜೀವನದಲ್ಲಿ ಆಮೂಲ್ಯವಾದುದು. ಭಗವಂತನ ಒಂದೊಂದು ರೂಪಗಳು 12 ರಾಶಿಗಳಲ್ಲಿ ಇವೆ. ಹಾಗಾಗಿ 12 ರಾಶಿಗಳೇ ಮುಖ್ಯವಾಗಿ ನಮ್ಮ ಜೀವನವನ್ನು ನಿಯಂತ್ರಿಸುತ್ತವೆ. 
ರಾಶಿಗಳ ಅಧಿಪತಿಯಾಗಿರುವ ಸೂರ್ಯ ಹಾಗೂ ಇತರ ಗ್ರಹಗಳ ಅಂತರ್ಗತನಾಗಿರುವ ಭಗವಂತನ ವಿವಿಧ ರೂಪಗಳ ಚಿಂತನೆ ಮಾಡಿ ಅದನ್ನು ಉತ್ಸವ ಮಾಡುವುದೇ ರಾಶಿ ಪೂಜೆ ಯಾಗಿದೆ ಎಂದರು.
ದೇಗುಲದ ಪ್ರಧಾನ ತಂತ್ರಿ ವೇ. ಮೂ. ಹಯವದನ ತಂತ್ರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಶ  ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ , ಭಾಸ್ಕರ  ಪಾಲನ್ ಬಾಚನಬೈಲು, ರಾಜ ಎ. ಸೇರಿಗಾರ್, ಚಂದ್ರಕಾಂತ್ ಕಾನಂಗಿ, ಬಾಬ ಕೆ., ಸುಧಾ ಎನ್. ಶೆಟ್ಟಿ, ಬೇಬಿ ಎಸ್. ಮೆಂಡನ್ ಹಾಗೂ ರಾಶಿಪೂಜಾ ಮಹೋತ್ಸವ ಸೇವಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಗೌರವಾಧ್ಯಕ್ಷ ಆನಂದ ಪಿ. ಸುವರ್ಣ ಹಾಗೂ ನಾಗರಾಜ ಸುವರ್ಣ, ಗಣೇಶ್ ಅಮೀನ್ ಬಾಪುತೋಟ,  ಗುರುಪ್ರಸಾದ್ ರಾಯಸ ಮೊದಲಾದವರು ಉಪಸ್ಥಿತರಿದ್ದರು.  
ಜರ್ನಾದನ ಕೊಡವೂರು ಸ್ವಾಗತಿಸಿದರು. ಸಾಹಿತಿ ಪೂರ್ಣಿಮಾ ಜನಾರ್ದನ ವಂದಿಸಿದರು.
 
 
 
 
 
 
 
 
 
 
 

Leave a Reply