90 ಗಜಗಳ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯ ಕೂಟ ಮಹಾನಾಯಕ ಟ್ರೋಫಿ

ಡಾ. ಬಿ ಆರ್ ಅಂಬೇಡ್ಕರ್ ಯುವಕ ಮಂಡಲ ರಿ. ಮೂಡುಬೆಟ್ಟು ಕೊಡವೂರು​ ​ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಮತ್ತು ಯುವಕ ಮಂಡಲದ ಅಭಿವೃದ್ಧಿಗಾಗಿ 90 ಗಜಗಳ ಅಂತರ್ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯ ಕೂಟ ಮಹಾನಾಯಕ ಟ್ರೋಫಿ ಶನಿವಾರ ಬೀಡಿನಗುಡ್ಡೆಯ ಮೈದಾನದಲ್ಲಿ ಲಯನ್ ಗೋಪಾಲ ಬಂಗೇರ ಪಂದುಬೆಟ್ಟು ಇವರು ಉದ್ಘಾಟಿಸಿದರು. ಬಲಿಷ್ಠ ತಂಡ ಮೂಡಬೆಟ್ಟು ಸಹರ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ ಟ್ರೋಫಿ ಜೊತೆಗೆ ರೂ 30,000/- ನಗದನ್ನು ಉಡುಪಿಯ ಪ್ರತಿಷ್ಠ ತಂಡ ಕೌಸ್ತುಭ ಫೈಟರ್ಸ್ ಮುಡಿಗೇರಿಸಿ ಕೊಂಡಿತು. ದ್ವಿತೀಯ ಬಹುಮಾನ ಪಡೆದ ಸಹಾರ ಮೂಡಬೆಟ್ಟು ಟ್ರೋಫಿ ಜೊತೆಗೆ ರೂ 15000/- ನಗದು ಪಡೆದುಕೊಂಡಿತು. 

 
ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ  ದೇಹದಾರ್ಡ್ಯ ಪಟು S R S M N G F ಕಾಲೇಜಿನ ಉಪನ್ಯಾಸಕರಾದ ಶ್ರೀ ಎಚ್ ಆರ್ ಅರುಣ್ ಕುಮಾರ್ ಮತ್ತು ಆದಿಉಡುಪಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀ ಡೇವಿಡ್ ಆಲ್ಬರ್ಟ್ ಇವರನ್ನು ಸನ್ಮಾನಿಸಲಾಯಿತು. 
 
ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರು ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆಯ ಸುಂದರ್ ಮಾಸ್ಟರ್, ಫಾದರ್ ವಿಲಿಯಂ ಮಾರ್ಟಿಸ್, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಪ್ರೊ. ಫಣಿರಾಜ್, ಶಾಮ್ ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರ್, ಸುಂದರ್ ಗುಜ್ಜರಬೆಟ್ಟು, ರಾಜು ಕುಂಜಿಬೆಟ್ಟು, ಭಾಸ್ಕರ್ ಮಾಸ್ತರ್, ಅಕ್ಕಣಿ ಟೀಚರ್, ವಾಸುದೇವ್ ಪುತ್ತೂರು, ಕ್ರೈಮ್ ಇನ್ಸಪೆಕ್ಟರ್ ವಾಸಪ್ಪ ನಾಯ್ಕ್,ಯುವರಾಜ್ ಪುತ್ತೂರು,ಎಸ್ ಎಸ್ ಪ್ರಸಾದ್, ಶಿವಾನಂದ ಮೂಡುಬೆಟ್ಟು, ಯುವಕ ಮಂಡಲದ ಅಧ್ಯಕ್ಷರು ಸುರೇಶ್ ಕೋಟ್ಯಾನ್, ಶಂಕರ್ ದಾಸ್, ಉಪಸ್ಥಿತರಿದ್ದರು. 
 
​​ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ನಿರೂಪಿಸಿದರು. ಸುರೇಂದ್ರ ಕೋಟ್ಯಾನ್ ಧನ್ಯವಾದ ನೀಡಿದರು.​​
 
 
 
 
 
 
 
 
 
 
 

Leave a Reply