‘ಮಧೂರು ಮಾಧುರ್ಯ~ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಅಭಿನಂದನೆ

ಶ್ರೀಕೃಷ್ಣ ಮಠದ ರಾಜಾಂಗಣದ ಶ್ರೀನರಹರಿ ತೀರ್ಥವೇದಿಕೆಯಲ್ಲಿ, ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಅಭಿವಂದನಾ ಸಮಿತಿಯವರು ಹಮ್ಮಿಕೊಂಡ ‘ಮಧೂರು ಮಾಧುರ್ಯ’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಅಭಿನಂದಿಸಿದರು.  
ಮಧೂರು ಅವರ ಸಪ್ತತಿಯ ಸಂದರ್ಭದಲ್ಲಿ ಅವರ ಹಿರಿತನ ಮತ್ತು ಸಂಗೀತದಲ್ಲಿ ಇರುವ ಬದ್ಧತೆಯನ್ನು ಗುರುತಿಸಿ ಗೌರವಿಸಿದ್ದು ಎಲ್ಲರಿಗೂ ಸಂತೋಷ ಮತ್ತು ಇದು ಮುಂದಿನ ಯುವಕರಿಗೆ ದಾರಿಯಾಗಲಿ ಎಂದು ಅನುಗ್ರಹಿಸಿದರು. 
ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಮನಸ್ಸನ್ನು ಅರಳಿಸುವ ಸಂಗೀತದಲ್ಲಿ ನಿಪುಣರಾದ ಮಧೂರು ಅವರಿಗೆ ಅದು ಕರಗತವಾದ್ದರಿಂದ ಎಲ್ಲರಿಗೂ ಹರುಷವನ್ನು ನೀಡಲಿ ಎಂದು ಅನುಗ್ರಹ ಸಂದೇಶ ನೀಡಿದರು.
ಕರ್ನಾಟಕ ರಾಜ್ಯ ಸಂಗೀತ -ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಆನೂರು ಅನಂತಕೃಷ್ಣ ಶರ್ಮ ಇವರು ಅಭಿವಂದಿಸಿದರು. ಮಂಗಳೂರಿನ ವೇಣುಗೋಪಾಲ ಶಾನುಭೋಗ್ ಇವರು ಶುಭಾಶಂಸನೆ ಗೈದರು. ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಳದ ಧರ್ಮದರ್ಶಿ ನೀ.ಬಿ. ವಿಜಯ ಬಲ್ಲಾಳ್, ಅರುಣ್ ಕುಮಾರ್ ಕಾರ್ಕಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ  ‘ಸುನಾದ ಮಾಧುರಿ’ ಗೌರವ ಗ್ರಂಥವನ್ನು ಪರ್ಯಾಯ ಶ್ರೀಪಾದರಿಂದ ಬಿಡುಗಡೆಗೊಳಿಸಿ ಮಧೂರು ಅವರಿಗೆ ಸಮರ್ಪಿಸಲಾಯಿತು.
 
 
 
 
 
 
 
 
 
 
 

Leave a Reply