ರಾಷ್ಟ್ರ ಮಟ್ಟದ ಕರಾಟೆಯಲ್ಲಿ ಪ್ರಶಸ್ತಿ

ಕೊಬೊಡೊ ಬುಡೊಕಾನ್ ಕರಾಟೆ ಮತ್ತು ಡೊ ಅಸೋಸಿಯೇಷನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಶನಿವಾರ ಮತ್ತು ಭಾನುವಾರ ಉಡುಪಿಯ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಆಹ್ವಾನಿತ ಮುಕ್ತ 5
ನೇ ಕೆಬಿಕೆ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧಾವಳಿಯಲ್ಲಿ ಭಾಗವಹಿಸಿದ ಉಡುಪಿಯ ಕುಮಾರಿ ಅನವಿ ಪಿ ಶೆಟ್ಟಿ ಇವರು ಕಟಾ ವೈಯುಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗು ಕುಮಿಟ್ ವೈಯುಕ್ತಿಕ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರು ಬ್ರಹ್ಮಾವರ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿ ಮತ್ತು ಉಡುಪಿ
ಸಂತೆಕಟ್ಟೆಯ ಲಕ್ಷ್ಮಿ ಮತ್ತು ಪ್ರಕಾಶ್ ಶೆಟ್ಟಿ ದಂಪತಿಗಳ ಪುತ್ರಿಯಾಗಿದ್ದು ಪರ್ಕಳದ ಪ್ರವೀಣಾ ಕುಮಾರಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.

 
 
 
 
 
 
 
 
 
 
 

Leave a Reply