ಮಣಿಪಾಲದ ಶ್ರೀ ಗೋಪಾಲ್ ಸಿ.ಎಂ. ಅವರಿಗೆ ಪಿಹೆಚ್ ಡಿ

ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ (MIT) ಸಂಶೋಧನಾ ವಿದ್ಯಾರ್ಥಿ ಶ್ರೀ ಗೋಪಾಲ ಸಿ. ಎಂ. ಅವರು ಬರೆದು ಮಂಡಿಸಿದ “ಪಶ್ಚಿಮ ಬೆಂಗಳೂರಿನ ಹೊಳೆ, ಸರೋವರಗಳಲ್ಲಿ ಕಂಡು ಬಂದ ಔಷಧೀಯ ರಾಸಾಯನಿಕಗಳು, ಸೌಂದರ್ಯವರ್ಧಕಗಳು ಹಾಗೂ ಭಾರ ಲೋಹಗಳು: ಪತ್ತೆ ಹಚ್ಚುವ ವಿಧಾನ ಅಭಿವೃದ್ಧಿ, ಅಪಾಯದ ಮೌಲ್ಯಮಾಪನ ಹಾಗೂ ಪರಿಹಾರ” ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ಕೊಡಮಾಡಿದೆ.

ಈ ಅಧ್ಯಯನವು ಬೆಂಗಳೂರಿನ ಸುತ್ತಮುತ್ತ ಹರಿಯುತ್ತಿರುವ ಅರ್ಕಾವತಿ, ವೃಷಭಾವತಿ ಹಾಗೂ ಸುವರ್ಣಮುಖಿ ನದಿಗಳು ಹಾಗೂ ಅದೇ ಪರಿಸರದಲ್ಲಿರುವ ಸರೋವರಗಳಲ್ಲಿ ಕೆಲ ಔಷಧಯುಕ್ತ ರಾಸಾಯನಿಕಗಳ ಇರುವರಿಕೆಯನ್ನು ಸಾಬೀತು ಪಡಿಸಿದೆ. ಸುತ್ತಮುತ್ತಲಿನ ಕಾರ್ಖಾನೆಗಳು ಹಾಗೂ ತ್ಯಾಜ್ಯ ಸಂಸ್ಕಾರ ಘಟಕಗಳಿಂದ ಈ ಹಾನಿಕಾರಕ ರಾಸಾಯನಿಕಗಳು ತಲುಪುತ್ತಿದೆ ಎಂದು ಈ ಅಧ್ಯಯನ ಊಹಿಸಿದೆ. ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳಿಂದ ಮಾಲಿನ್ಯಯುಕ್ತ ರಾಸಾಯನಿಕಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ನವೀನ ಸಂಸ್ಕರಣಾ ತಂತ್ರಗಳನ್ನು ಈ ಅಧ್ಯಯನ ಅಭಿವೃದ್ಧಿ ಪಡಿಸಿತು. ವಿಕಿರಣ ಕಸಿ ಮಾಡಲಾದ ಹತ್ತಿಯ ಮುಖಾಂತರ ತ್ಯಾಜ್ಯಹಾಯಿಸಿದಾಗ ರಾಸಾಯನಿಕಗಳ ನಿರ್ಮೂಲನೆ ಸಾಧ್ಯ ಎಂದು ಇವರ ಅಧ್ಯಯನದಿಂದ ಸಾಬೀತಾಗಿದೆ. ಇವರ ಫಲಿತಾಂಶಗಳು ಪ್ರಪಂಚದ ಪ್ರತಿಷ್ಠಿತ ಸಂಶೋಧನಾ ನಿಯಮಿತಕಾಲಿಗಳಲ್ಲಿ ಪ್ರಕಟವಾಗಿದೆ ಹಾಗೂ ಮಾಧ್ಯಮಗಳಲ್ಲಿ ಗಮನಿಸಲಾಗಿದೆ.

ಇವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಕೆ. ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಾಗೂ ಮಣಿಪಾಲ ಔಷಧಿಯ ಮಹಾವಿದ್ಯಾಲಯದ ಪ್ರಾಧ್ಯಪಕರಾದ ಡಾ||. ಕೃಷ್ಣಮೂರ್ತಿ ಭಟ್ಟರ ಸಹಮಾರ್ಗದರ್ಶನದಲ್ಲಿ ತಮ್ಮ ಪಿ.ಎಚ್.ಡಿ ಯನ್ನು ಕೈಗೊಂಡಿದ್ದರು. ಇವರು ಚಿಕ್ಕಮಗಳೂರಿನ ಶ್ರೀ ಎಸ್ ಮಲ್ಲಪ್ಪ ಹಾಗೂ ಶ್ರೀಮತಿ ಮಂಜುಳಾ ದಂಪತಿಗಳ ಪುತ್ರ ಹಾಗೂ ತೀರ್ಥಹಳ್ಳಿ ಶ್ರೀಮತಿ ಸ್ಮಿತಾ ಎನ್ ಅವರ ಪತಿ ಪ್ರಸ್ತುತ ಸುರತ್ಕಲ್ ಸಮೀಪವಿರುವ ಸೋಲಾರಾ ಆಕ್ಟಿವ್ ಫರ‍್ಮಾ ಸೈನ್ಸಸ್ ಕಂಪೆನಿಯಲ್ಲಿ ಗುಣಮಟ್ಟ ನಿಯಂತ್ರಣ ವಿಭಾಗದ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply