ಉಡುಪಿ ರೀಜನ್ನಿನ ಮಹಿಳಾ ತಂಡಕ್ಕೆ ಡಿ.ಜಿ.ಎಮ್. ಟ್ರೋಫಿ

ಇತ್ತೀಚೆಗೆ ಮಂಗಳೂರಿನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು ಆಡಳಿತ ಕಛೇರಿ – 6 ವತಿಯಿಂದ ಚಿಕ್ಕಮಗಳೂರು , ಹಾಸನ , ಶಿವಮೊಗ್ಗ , ಮಂಗಳೂರು , ಮಡಿಕೇರಿ , ಉಡುಪಿ ಯನ್ನೊಳಗೊಂಡ ಆರು ಪ್ರಾದೇಶಿಕ ಕಛೇರಿಗಳ ಎಂಟು ತಂಡಗಳ ನಡುವೆ ಡೆಪ್ಯುಟಿ ಜನರಲ್ ಮ್ಯಾನೇಜರ್ ಕಪ್ ತ್ರೋಬಾಲ್ ಪಂದ್ಯಾಕೂಟ ನಡೆಯಿತು.

ಪಂದ್ಯಾಕೂಟವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀ. ಜೋಬಿ ಜೋಸ್ ಉಧ್ಘಾಟಿಸಿದರು.

ಲೀಗ್ ಮಾದರಿಯಲ್ಲಿ ನಡೆದ ಪಂಧ್ಯಾಕೂಟದ ಪೈನಲ್ ಪಂದ್ಯದಲ್ಲಿ ಶ್ರೀಮತಿ ಅವಿನಾಕ್ಷಿ ನೇತೃತ್ವದ ಉಡುಪಿ ರೀಜನಲ್ ತಂಡವು ಗೆದ್ದು ಬೀಗಿತು.

ಫೈನಲ್ ಪಂಧ್ಯ ಗೆದ್ದ ಉಡುಪಿ ರೀಜನಲ್ ಆಫೀಸ್ ತಂಡಕ್ಕೆ ಡಿ.ಜಿ.ಎಮ್.ಜೋಬಿ ಜೋಸ್ ಟ್ರೋಫಿ ವಿತರಿಸಿದರು.

 
 
 
 
 
 
 
 
 
 
 

Leave a Reply