ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ವಾರ್ಷಿಕೋತ್ಸವ 

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ವಾರ್ಷಿಕೋತ್ಸವವು ಇದೆ ಬರುವ ಡಿಸೆಂಬರ್ 17, ಆದಿತ್ಯವಾರ ಕರಂಬಳ್ಳಿ ವೆಂಕಟ್ರಮಣ ದೇವಸ್ಥಾನದ ಶ್ರೀನಿವಾಸ ಸಭಾ ಭವನದಲ್ಲಿ ನಡೆಯಲಿದೆ . ಬೆಳಿಗ್ಗೆ 10 ಗಂಟೆಗೆ ಶ್ರೀ ದೇವರಿಗೆ ವಿಷ್ಣುಸಹಸ್ರನಾಮಾವಳಿ ಸಹಿತ ತುಳಸಿ ಅರ್ಚನೆ , ಮಹಾಸಭೆ , ಮಧ್ಯಾಹ್ನ ಬ್ರಾಹ್ಮಣ ಸುಹಾಸಿನಿ ಆರಾಧನೆ , ಮೆಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ , ರಂಗೋಲಿ ಸ್ಪರ್ಧೆ , ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ , ಗಂಟೆ 3.30 ರಿಂದ ಸಮಿತಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸಂಜೆ 6.30 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಆರೋಗ್ಯ ನಿಧಿ ವಿತರಣೆ , ವಿದ್ಯಾ ನಿಧಿ ಅರ್ಪಣೆ ,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಪ್ರ ಸಮಾಜದ ಸಾಧಕರಿಗೆ ಸನ್ಮಾನ , ವಿಪ್ರ ಗೋಪಾಲಕರಿಗೆ ಸನ್ಮಾನ , ವಿವಾಹ ಸುವರ್ಣ ಮಹೋತ್ಸವ ಆಚರಿಸಿದ ದಂಪತಿಗಳಿಗೆ ಗೌರವ ಅರ್ಪಣೆ ,ಹಾಗು ವಿಶೇಷವಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಗಳವರ 60 ರ ಶುಭಾವಸರದಲ್ಲಿ ಶ್ರೀಪಾದಂಗಳವರಿಗೆ ಅಭಿವಂದನೆ ಮತ್ತು “ಗೋಗ್ರಾಸ ” ನಿಧಿಯನ್ನು ಸಮರ್ಪಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .

 
 
 
 
 
 
 
 
 
 
 

Leave a Reply