ಏಪ್ರಿಲ್ 9-18: ಶೀರೂರು ಮೂಲ ಮಠದಲ್ಲಿ ರಾಮ ನವಮಿ ಸಂಭ್ರಮೋತ್ಸವ 

~ಜನಾರ್ದನ್ ಕೊಡವೂರು
ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಆಶಯದಂತೆ ಹರಿಖಂಡಿಗೆ ಶೀರೂರು ಮೂಲ ಮಠದಲ್ಲಿ ಏಪ್ರಿಲ್ . 9ರಿಂದ 18ರ ವರೆಗೆ ಶ್ರೀರಾಮ ನವಮಿ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಠದ ದಿವಾನ ಡಾ| ಎಂ. ಉದಯಕುಮಾರ್ ಸರಳತ್ತಾಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 70 ವರ್ಷದ ಹಿಂದೆ ಶೀರೂರು ಮಠ ಪರಂಪರೆಯ ಶ್ರೀ ಲಕ್ಷ್ಮೀಂದ್ರತೀರ್ಥ ಶ್ರೀಪಾದರು ಶ್ರೀರಾಮ ನವಮಿ, ರಥೋತ್ಸವ ಆರಂಭಿಸಿದ್ದರು. ಏ. 11ರಂದು 4 ಗಂಟೆಗೆ ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು, 13ರಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, 14ರಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು, 17ರಂದು ನಡೆಯುವ ರಥೋತ್ಸವದಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಭಾಗವಹಿಸಲಿದ್ದಾರೆ ಎಂದರು.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ: 
ಏ. 10ರಿಂದ 18ರ ವರೆಗೆ ಹಯಗ್ರೀವ ಮಂತ್ರ ಹೋಮ, ಶಾಕಲ ಋಕ್ ಸಂಹಿತಾ ಯಾಗ, ವಿವಿಧ ಪಾರಾಯಣ, ಲಕ್ಷ್ಮೀ ಶೋಭಾನೆ ಗಾಯನ ನಡೆಯಲಿದ್ದು, ಏ. 13ರಂದು ಭೂತರಾಜರ ಪೂಜೆ, 17ರಂದು ಶ್ರೀಕ್ಷೇತ್ರದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ. ಏ. 18ರಂದು ಬೆಳಿಗ್ಗೆ 9ಕ್ಕೆ ಹಗಲು ರಥೋತ್ಸವ, ಅವಭೃತ ಸ್ನಾನ ಹಾಗೂ ರಾತ್ರಿ 9ಕ್ಕೆ ಬೊಬ್ಬರ್ಯ ನೇಮೋತ್ಸವ ನಡೆಯಲಿದೆ.
9ರಂದು ಕುಣಿತ ಭಜನೆ ಮತ್ತು ಭಕ್ತಿ ರಸಮಂಜರಿ, 10ರಂದು ಕುಂಜಾರುಗಿರಿ ಬಳಗದಿಂದ ಛತ್ರಪತಿ ಶಿವಾಜಿ ಐತಿಹಾಸಿಕ ನಾಟಕ, 11ಕ್ಕೆ ಗಂಗಾ ಶಶಿಧರನ್ ವಯಲಿನ್ ವಾದನ, 12ರಂದು ಮಾರ್ಪಳ್ಳಿ ಚೆಂಡೆ ಬಳಗದವರಿಂದ ಊರ ಪರ್ಬ ನಾಟಕ, 13ರಂದು ಸುಧೀರ್ ಕೊಡವೂರು  ತಂಡದಿಂದ ಶ್ರೀ ನರಸಿಂಹ ನೃತ್ಯರೂಪಕ, 14ರಂದು ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ, 15ರಂದು ಮೈಸೂರು ರಾಮಚಂದ್ರ ಆಚಾರ್ ಅವರಿಂದ ಭಕ್ತಿ ಸಂಗೀತ, 16ರಂದು ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಹಿಂದೂಸ್ಥಾನಿ ಗಾಯನ, 17ರಂದು ಕಾಂತಾರ ಚಲನಚಿತ್ರ ಖ್ಯಾತಿಯ ಸಾಯಿ ವಿಶ್ವೇಶ್ ಸಂಗೀತ ಹಾಗೂ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು, ಮ್ಯಾನೇಜರ್ ವಾಸುದೇವ ಆಚಾರ್ಯ, ಅಶ್ವತ್ಥ ಭಾರದ್ವಾಜ್, ವಾಮನ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply