ಕಾಪು : ಜೀವಂತ ನಾಗನಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದ ಉರಗ ಪ್ರೇಮಿ ಗೋವರ್ಧನ್ ಭಟ್

ಕಾಪು :  ನಾಗರಪಂಚಮಿಯು ಹಿಂದುಗಳ  ಪವಿತ್ರ ಹಬ್ಬಗಳಲ್ಲಿ ಒಂದು, ಇಂದಿನ ದಿನ ಎಲ್ಲೆಡೆ ನಾಗ ಕಲ್ಲಿಗೆ ಹಾಲೆರೆದು ಪೂಜಿಸಲಾಗುತ್ತದೆ. ಆದ್ರೆ ಕಾಪುವಿನ ಮಲ್ಲಾರು ನಿವಾಸಿ ಗೋವರ್ಧನ್ ಭಟ್ ಜೀವಂತ ಹಾವಿಗೆ   ದೀಪ ಬೆಳಗಿಸಿ ಪೂಜೆ ಸಲ್ಲಿಸುವ ಮೂಲಕ ಬಹಳ ವೈಶಿಷ್ಟ್ಯದಿಂದ ಆಚರಿಸಿದರು.

ಗೋವರ್ಧನ್ ಭಟ್ ಎಲೆಕ್ಟ್ರಿಕಲ್ ಉದ್ಯೋಗಿಯಾಗಿದ್ದು ಕಾಪು ಪರಿಸರದಲ್ಲಿ ಚಿರಪರಿಚಿತರು.  ಕಾಪು ಪರಿಸರದಲ್ಲಿ  ಎಲ್ಲೇ ಹಾವುಗಳು  ಸಂಕಷ್ಟದಲ್ಲಿದ್ದರೆ ಗೋವರ್ಧನ್ ಭಟ್ ನೆರವಿಗೆ ಧಾವಿಸುತ್ತಾರೆ. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡಿ ಗುಣಮುಖ ಗೊಂಡ ನಂತರ ಕಾಡಿಗೆ ಬಿಡುವ ಮೂಲಕ ಹಲವು ಬಾರಿ ಉರಗ ಪ್ರೇಮ ಮೆರೆದಿದ್ದಾರೆ. ಹಾವು ಸತ್ತು ಹೋದರು ಸಂಸ್ಕಾರ ಕಾರ್ಯಕೂಡ  ನಡೆಸುತ್ತಾರೆ.

ತಮ್ಮ ಅಜ್ಜ ಅನಂತಕೃಷ್ಣ ಭಟ್ ಎಲ್ಲಾ ಕೆಲಸಕ್ಕೆ ಪ್ರೇರಣೆ ಎನ್ನುತ್ತಾರೆ. ಅಜ್ಜ ಇದೆ ಕೆಲಸ ಮಾಡ್ತಾ ಇದ್ರು ಅದನ್ನೇ ಮುಂದುವರಿಸುತ್ತಿದ್ದಾರೆ.  ಸುಮಾರು 30 ವರ್ಷಗಳಿಂದ ಈ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು 1000ಕ್ಕೂ ಅಧಿಕ ಹಾವುಗಳ ಆರೈಕೆ ಮಾಡಿದ್ದಾರೆ. ಎಲ್ಲಾ ಕಾರ್ಯಕ್ಕೆ ಅವರ ಮನೆಯವರ ಪ್ರೋತ್ಸಾಹದಿಂದ ಈ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ.

ಇಂದು ಎಲ್ಲಾ ಕಡೆ ನಾಗನ ಕಲ್ಲಿಗೆ ಪೂಜೆಗಳು ನಡೆಯುತ್ತೆ,  ಆದ್ರೆ ನಮ್ಮ ಮನೆಯಲ್ಲಿ ನಮ್ಮ ಮನೆಯವರು ಒಟ್ಟಾಗಿ ಜೀವಂತ ನಾಗನಿಗೆ ತನಿ ಎರೆಯುವುದು ನಮ್ಮೆಲ್ಲರ ಭಾಗ್ಯ ಎಂದು ಸಂತೋಷದಿಂದ ಹೇಳುತ್ತಾರೆ.  ಪ್ರತಿವರ್ಷ ನಾವು ನಿಜವಾದ ಹಾವಿಗೆ ತನಿ ಎರೆವುದು ನಮ್ಮೆಲ್ಲರ ಭಾಗ್ಯ.  ಇದು ದೇವರ ದಯೆಯಿಂದಲೇ ಸಾಧ್ಯ ಎನ್ನುತ್ತಾರೆ ಗೋವರ್ಧನ್ ಭಟ್.

 
 
 
 
 
 
 
 
 
 
 

Leave a Reply