Janardhan Kodavoor/ Team KaravaliXpress
25.6 C
Udupi
Thursday, September 29, 2022
Sathyanatha Stores Brahmavara

ಕೋಟಿ ಗೀತಾ ಲೇಖನ ಯಜ್ಞ – ಬಾಳೆಕುದ್ರುಶ್ರೀ ಪ್ರಶಂಸೆ

ಉಡುಪಿ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪಂಚ ಪ್ರಧಾನ ಯೋಜನೆಗಳಲ್ಲಿ ಒಂದಾಗಿರುವ ಜಾಗತಿಕ ಮಟ್ಟದ ಕೋಟಿಗೀತಾ ಲೇಖನಯಜ್ಞ ಒಂದು ಅಪೂರ್ವವಾದ ಸಂಕಲ್ಪ ಇಂದಿನ ದಿನಮಾನಕ್ಕೆ ಅತ್ಯಂತ ಆವಶ್ಯವಾದ ಆತ್ಮೋದ್ಧಾರ ಮತ್ತು ಲೋಕ ಕಲ್ಯಾಣಗಳನ್ನು ಏಕಕಾಲದಲ್ಲಿ ಸಾಧಿಸಬಲ್ಲ ಧಾರ್ಮಿಕ ದಾಖಲೆ ಎಂದು ಬಾಳೆಕುದ್ರು ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಶ್ರೀಗಳು ಪ್ರಶಂಸಿದ್ದಾರೆ.

ಕೋಟಿ ಗೀತಾ ಲೇಖನ ಯಜ್ಞ ಸಮಿತಿಯ ನಾರಾಯಣ ಪ್ರಖಂಡದ ಗೀತಾ ಪ್ರಚಾರಕ ಮಹೀತೋಷ ಆಚಾರ್ಯ ಮತ್ತು ಬಳಗದವರು ಸಮರ್ಪಿಸಿದ ಗೀತಾಲೇಖನ ಹೊತ್ತಗೆಯನ್ನು ಸ್ವೀಕರಿಸಿ ಹರಸಿ ತಮ್ಮ ಮಠದ ಶಿಷ್ಯದರ್ಗ ಮತ್ತು ಭಕ್ತವೃಂದದವರೆಲ್ಲರೂ ಗೀತಾಲೇಖನ ದೀಕ್ಷಾಬದ್ಧರಾಗುವಂತೆ ಆದೇಶಿಸುವ ಅಭಿಪಾಯಪಟ್ಟರು.

ಶ್ರೀಪುತ್ತಿಗೆಶ್ರೀಗಳು ಹಾಗೂ ತಮಗೂ ಪೂರ್ವಾಶ್ರಮದಿಂದಲೂ ಇರುವ ಒಡನಾಟವನ್ನು ನೆನಪಿಸಿಕೊಂಡ ಸ್ವಾಮೀಜಿಯವರು ಕೊತಿಗೀತಲೇಖನ ಯಜ್ಞ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!