ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಈಗಾಗಲೇ ಹಲವು ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಪದಕಗಳನ್ನು ಬಾಚಿಕೊಂಡಿದ್ದಾರೆ.

ಇದೀಗ ಪುರುಷರ ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತೀಯ ಕ್ರೀಡಾಳುಗಳು ಸಾಧನೆ ಮಾಡಿದ್ದಾರೆ.

ಆಗಸ್ಟ್ 7 ರ ಭಾನುವಾರದಂದು ಕೇರಳದ 25 ವರ್ಷ ವಯಸ್ಸಿನ ಆಟಗಾರ ಎಲ್ದೋಸ್ ಪಾಲ್ ಅವರು ಕ್ರೀಡಾಕೂಟದಲ್ಲಿ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ಬರೆದಿದ್ದಾರೆ.

ಟ್ರಿಪಲ್ ಜಂಪ್ ಫೈನಲ್‌ನಲ್ಲಿ ಭಾರತ 1-2 ರಿಂದ ಐತಿಹಾಸಿಕ ಜಯ ಸಾಧಿಸಿದೆ. ಈವೆಂಟ್‌ನಲ್ಲಿ ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಇಬ್ಬರು ಭಾರತೀಯರು ತಮ್ಮ ಭುಜದ ಮೇಲೆ ಭಾರತೀಯ ಧ್ವಜವನ್ನು ಸುತ್ತಿಕೊಂಡು ಕ್ರೀಡಾಂಗಣದ ಸುತ್ತಲೂ ಸುತ್ತುವ ಮೂಲಕ ವಿಜಯವನ್ನು ಆಚರಿಸಿದರು.

 
 
 
 
 
 
 
 
 
 
 

Leave a Reply