ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಗಾಯತ್ರಿ ದೇವಿ ಗುಡಿಗೆ ಶಿಲಾನ್ಯಾಸ

ಕ್ಷೆತ್ರದಲ್ಲಿ ಶನಿವಾರ ಜಯಲಕ್ಷ್ಮಿ ಬಾಯರಿ ಹಾಗೂ ದಿ. ನಾರಾಯಣ ಉಪಾಧ್ಯಾಯ ಅವರ ಸೇವಾರ್ಥ ವಾಗಿ ಜೋಡಿ ಚಂಡಿಕಾಯಾಗ ಸಮರ್ಪಿತಗೊಂಡಿತು. ಉಮಾ ಮಹೇಶ್ವರ ಭಜನ ಮಂಡಳಿ ಹಾಗೂ ತರಂಗಣಿ ಭಜನ ಮಂಡಳಿಯವರಿಂದ ಭಜನೆ ಸಂಕೀರ್ತನೆ ನೆರವೇರಿತು.
ಪದ್ಮಿನಿ ರಾಜೇಶ್ ಶೆಟ್ಟಿ ದಂಪತಿಯಿಂದ ರಂಗ ಪೂಜಾ ಸಹಿತ ದುರ್ಗಾ ನಮಸ್ಕಾರ ಪೂಜೆ ನೆರವೇರಿತು. ಯಶಾ ರಾಮಕೃಷ್ಣ ನೇತೃತ್ವದ ಹೆಜ್ಜೆಗೆಜ್ಜೆ ತಂಡದವರಿಂದ ನೃತ್ಯ ವೈವಿಧ್ಯ ಕ್ಷೇತ್ರದ ನವಶಕ್ತಿ ವೇದಿಕೆ ಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೆರವೇರಿತು.
ಮಧ್ಯಾಹ್ನ ಹಾಗೂ ಸಂಜೆ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ, ಸಂಗೀತ ಸೇವೆ ಹಾಗೂ ಗಾನ ನಾದ ಸೇವೆ ವಿವಿಧ ಕಲಾವಿದ ರಿಂದ ಸಮರ್ಪಿಸಲ್ಪಟ್ಟಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
 
 ವೇದಮಾತೆಗೆ ಗುಡಿ ಸಂಕಲ್ಪ: ಗಾಗಲೇ ಗಾಯತ್ರಿ ಧ್ಯಾನಪೀಠದಲ್ಲಿ ಕಪಿಲ ಮಹರ್ಷಿಗಳ ಸಾನಿಧ್ಯ ಪ್ರಬಲಗೊಂಡಿದ್ದು ಮುನಿಶ್ರೇಷ್ಠರನ್ನು ಅನುಗ್ರಹಿಸಿದ ವೇದ ಮಾತೆ ಗಾಯತ್ರಿ ದೇವಿಗೂ ಸ್ಥಾನ  ಸಂಕಲ್ಪಿ ಸಲಾಗಿದೆ.
ರಮಾನಂದ ಗುರೂಜಿಯವರು ದುರ್ಗಾ ಆದಿಶಕ್ತಿಯ ಪ್ರೇರೇಪಿಸಿದಂತೆ ಕಾರ್ಯ ಪ್ರವೃತ್ತ ರಾಗಿದ್ದು  ಈ ರಮೋತ್ಸವ  ಕಾಲದಲ್ಲಿ ದುರ್ಗಾಷ್ಟಮಿಯ ಪರ್ವಕಾಲದಲ್ಲಿ ಬೆಳಗ್ಗೆ ಒದಗಿ ಬರುವ ಶುಭ ಮುಹೂರ್ತದಲ್ಲಿ ಶಿಲಾಮಯ ಗುಡಿಗೆ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಗುರೂಜಿ ಯವರು ಭಕ್ತ ಸಮೂಹದ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಿದರು. 
 ಶಕ್ತಿ ಚೈತನ್ಯಗಳ ಇಚ್ಛೆಯಂತೆ ಇಲ್ಲಿ ನೆರವೇರುವ ಎಲ್ಲ ಕಾರ್ಯಗಳು ನಿರ್ವಿಘ್ನತೆಯಿಂದ ನೆರವೇರುತ್ತಿದೆ. ಗತಕಾಲದ ಕ್ಷೇತ್ರ ವ್ಯೆಭವ ಮರುಕಳಿಸುವ ಕಾಲ ಸನ್ನಿ ಹಿತವಾಗಿದೆ.
 
 
 
 
 
 
 
 
 
 
 

Leave a Reply