ಮಂಗಳೂರು ವಿವಿ ಬಿಬಿಎ ಪರೀಕ್ಷೆ: ತೃತೀಯ ರಾಂಕ್ ಗಳಿಸಿದ ಯು.ಪಿ.ಎಂ.ಸಿಯ ಸಫಾ

ಮಂಗಳೂರು: ವಿಶ್ವವಿದ್ಯಾನಿಲಯ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ ಬಿಬಿಎ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿನಿ ಶೇಖ್ ಸಫಾ ಅಂಜುಮ್ ಅಬ್ದುಲ್ ರಫೀಕ್ ಇವರು ತೃತೀಯ ರಾಂಕ್ ( 90.72%) ನ್ನು ಪಡೆದಿರುತ್ತಾರೆ.

ಕಾಲೇಜಿನಲ್ಲಿರುವ ಬಿಬಿಎ ಕೋರ್ಸ್ನಲ್ಲಿ ಇದುವರೆಗೆ ಹನ್ನೊಂದು ವಿದ್ಯಾರ್ಥಿಗಳು ರಾಂಕ್ ಪಡೆದಿದ್ದು ಪಿಯು ತರಗತಿಗಳಲ್ಲಿ ವಿಜ್ಞಾನ ಮೂಲದಿಂದ ಬಂದ ವಿದ್ಯಾರ್ಥಿಗಳು ಹಾಗೂ ವಾಣಿಜ್ಯದಲ್ಲಿ ಸಾಧಾರಣ ಅಂಕಗಳನ್ನು ಪಡೆದ ವಿದ್ಯಾರ್ಥಿಗಳೂ ಬಿಬಿಎ ಪದವಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ರಾಂಕ್ ಪಡೆಯುತ್ತಿರುವುದು ಕಾಲೇಜು ನೀಡುತ್ತಿರುವ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಕೊರೋನಾ ವರ್ಷದಲ್ಲಿಯೂ ವಿಶ್ವವಿದ್ಯಾಲಯ ನಡೆಸಿದ ಬಿಬಿಎ ಪದವಿ ಪರೀಕ್ಷೆಯಲ್ಲಿ ಸಫಾ ಗೈದಿರುವ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

 
 
 
 
 
 
 
 
 
 
 

Leave a Reply