“ಪೂರ್ಣ ಪ್ರಜ್ಞ-ರೋಟರಿ ಕ್ಲಬ್ ಮಣಿಪಾಲ ಸಾಮಾಜಿಕ ಸಬಲೀಕರಣ ಕೇಂದ್ರ” ಉದ್ಘಾಟನೆ

ಉಡುಪಿ: ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳು ಹಾಗೂ ರೋಟರೀ ಕ್ಲಬ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಸಂಯೋಜಿಸಲ್ಪಟ್ಟ  ಪೂರ್ಣಪ್ರಜ್ಞ-ರೋಟರಿ ಕ್ಲಬ್ ಮಣಿಪಾಲ ಸಾಮಾಜಿಕ ಸಬಲೀಕರಣ ಕೇಂದ್ರವನ್ನು ಉಡುಪಿ ಪೂರ್ಣಪ್ರಜ್ಞ ಆವರಣದಲ್ಲಿ ರೋಟರಿ ಜಿಲ್ಲಾ ಗವರ್ನರ್ (3182ರೋಟರಿ ಜಿಲ್ಲೆ) ರೋ. ಬಿ. ರಾಜರಾಮ ಭಟ್ ಉದ್ಘಾಟಿಸಿದರು. ಸಮಾಜಕ್ಕೆ ವಿಶೇಷ ಮಾಹಿತಿ ಮಾರ್ಗದರ್ಶನ ಈ ಹೊಸ ಕೇಂದ್ರದಿಂದ ಲಭ್ಯವಾಗಲಿ ಎಂದು ರೋ. ಭಟ್ ಶುಭ ಕೋರಿದರು.

ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ರೋ. ಪ್ರಶಾಂತ ಹೆಗಡೆ ರೋಟರಿ ಧ್ಯೇಯೋದ್ದೇಶಗಳ ಬಗೆಗೆ ತಿಳಿಸಿ, ಮಣಿಪಾಲ ರೋಟರಿ ಕ್ಲಬ್ ಆಶಯ ಅರುಹಿ, ಪ್ರಸಕ್ತ ಸಹಯೋಗಕ್ಕಾಗಿ ಅದಮಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದರು. ಹೊಸ ಕೇಂದ್ರದ ನರ‍್ದೇಶಕ ಎಮಿರಿಟಸ್ ಪ್ರೋಫೆಸರ್ ಡಾ. ಕೃಷ್ಣ ಕೊತಾಯ ಕೇಂದ್ರದ ದೂರದೃಷ್ಟಿ ಯೋಜನೆಗಳು, ಕರ‍್ಯ ವೈಖರಿ ಬಗೆಗೆ ತಿಳಿಯಪಡಿಸಿದರು. ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ರೋ. ಡಾ. ಜಯಗೌರಿ ಹಾಗೂ ರೋಟರಿ ಜಿಲ್ಲಾ ಸಹಾಯಕ ಗರ‍್ನರ್ ರೋ. ಆನಂದ ಉದ್ಯಾವರ ಶುಭಾಶಂಸನೆಗೈದರು.

ಕೇಂದ್ರದ ನೋಡೆಲ್ ಅಧಿಕಾರಿ ರೋ. ರೇಣು ಜಯರಾಮ್, ಕೇಂದ್ರದ ಆಶಿತ ಫಲಶ್ರುತಿಗಳ ಬಗೆಗೆ ತಿಳಿಸಿ, ದಿವಂಗತ ರೋ. ಹೆಚ್. ಎಸ್.ಎನ್ ರಾವ್ ಅವರ ಸೇವೆ ಸ್ಮರಿಸಿದರು. ಹೆಚ್.ಎಸ್.ಎನ್ ರಾಯರ ಸ್ಮರಣೆಯಲ್ಲಿ ಅವರ ಪುತ್ರಿ ರೋ. ಡಾ. ಶುಭಾ ಡಿಜಿಟ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮಾನೇಜ್‌ಮೆಂಟ್‌ನ ಸಲಹಾ ಸಮಿತಿಯ ಕಾರ್ಯದರ್ಶಿ  ಡಾ. ಜಿ.ಎಸ್.ಚಂದ್ರಶೇಖರ್ ತಮ್ಮ ಭಾಷಣದಲ್ಲಿ ಪಿ.ಐ.ಎಂ ಸಂಶೋಧನೆ, ವಿಸ್ತರಣೆಗೆ ವಿಶೇಷ ಒತ್ತು ಕೊಟ್ಟ ಕಾರಣ ‘ನ್ಯಾಕ್ ಸಮಿತಿ’ ಪಿ.ಐ.ಎಂಗೆ ಎ++ ಶ್ರೇಯಾಂಕ ಕೊಟ್ಟಿದೆ ಎಂದರು. ಸಹಯೋಗಕ್ಕಾಗಿ ರೋಟರಿ ಕ್ಲಬ್ ಮಣಿಪಾಲಕ್ಕೆ ಆಭಾರ ಸಲ್ಲಿಸಿದರು.

ರೋಟರಿ ದಾನಿಗಳನ್ನು ರೋ. ಅಮಿತ ಅರವಿಂದ ಗುರುತಿಸಿ,ಜಿಲ್ಲಾ ಗವರ್ನರ್ ಗೌರವಿಸಿದರು. ಪಿ.ಐ.ಎಂ ನ ನರ‍್ದೇಶಕ ಡಾ. ಭರತ್ ವಿ. ಸ್ವಾಗತಿಸಿ, ಡಾ. ನವೀನ್ ವಂದಿಸಿದರು. ವಿದ್ಯಾರ್ಥಿನಿ ಸಮೀಕ್ಷ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಕ್ಲಬ್ ಮಣಿಪಾಲದ ಸದಸ್ಯರು, ಪೂರ್ಣಪ್ರಜ್ಞ ಸಂಸ್ಥೆಗಳ ಸದಸ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply