ಆಧುನಿಕ ಮನು ಎಂದು ಹೇಳುವುದು ಅಂಬೇಡ್ಕರ್ ಗೆ ಅವಮಾನಮಾಡಿದಂತೆ- ಡಾ ಮಹಾಬಲೇಶ್ವರ ರಾವ್

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡಿ ವರ್ಣಾಶ್ರಮ ಧರ್ಮ,ಜಾತೀಯ ತಾರತಮ್ಯ ಹಾಗೂ ಮಾನವರಲ್ಲಿ ಮೇಲು ಕೀಳು ಎಣಿಸುವ ಮನುಸ್ಮೃತಿಯನ್ನು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಾವಿರಾರು ಅನುಯಾಯಿಗಳ ಸಮಕ್ಷದಲ್ಲಿ ಬೆಂಕಿಗೆ ಹಾಕಿ ಸುಟ್ಟಿರುವಾಗ ಅವರನ್ನು ‘ಆಧುನಿಕ ಮನು’ ಎಂದು ಸಂಬೋಧಿಸುವುದು ಅವಮಾನಕರ .ಅಂಬೇಡ್ಕರ್ ದಲಿತ ಸೂರ್ಯನಷ್ಟೇ ಅಲ್ಲ ಜಗತ್ತಿನ ಎಲ್ಲ ಶೋಷಿತರ ಸೂರ್ಯ ಎಂದು ನುಡಿದರು.

ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಶ್ರೀ ಪ್ರಶಾಂತ ನೀಲಾವರ ಭಾರತದ ಸಂವಿಧಾನದಲ್ಲಿ ಗಾಂಧಿಯವರ ರಾಮರಾಜ್ಯದ ಕಲ್ಪನೆ, ಪಟೇಲರ ರಾಷ್ಟ್ರದ ಅಖಂಡತೆಯ ಕಲ್ಪನೆ, ನೆಹ್ರೂರವರ ಮತನಿರಪೇಕ್ಷತೆ ಹಾಗೂ ಸಮಾಜವಾದಿ ದೃಷ್ಟಿ ಮತ್ತು ಅಂಬೇಡ್ಕರ್ ಅವರ ಸಾಮಜಿಕ ನ್ಯಾಯ ಹಾಗೂ ಸರ್ವಸಮಾನತೆಯ ಕಲ್ಪನೆ ಹಾಳತವಾಗಿ ಎರಕಗೊಂಡಿವೆ.ಭಾರತದ ಸುದೀರ್ಘವಾದ ಪ್ರಜಾಪ್ರಭುತ್ವವಾದಿ ಚರಿತ್ರೆಗೆ ಅಂಬೇಡ್ಕರ್ ರೂಪಿಸಿದ ಸಂವಿಧಾನವೇ ಕಾರಣ ಎಂದರು.ಶ್ರೀ ಸಾಗರ್ ಅತಿಥಿಗಳನ್ನು ಪರಿಚಯಿಸಿದರೆ ಶೀಮತಿ ಲತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply