ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಟ್ಯಾಲಿ ಕಾರ್ಯಗಾರ

ಶಿರ್ವ: ಆಧುನಿಕ ತಂತ್ರಜ್ಞಾನದಲ್ಲಿ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿದ್ದು, ವಾಣಿಜ್ಯ ಕ್ಷೇತ್ರದಲ್ಲಿ ಅಕೌಂಟ್ಸ್ ಬಗ್ಗೆ ಅಪಾರಜ್ಞಾನ ಹೊಂದಿದರಲ್ಲಿ ಟ್ಯಾಲಿ ಮತ್ತು ಎಸ್ಎಪಿ ಅಂತ ಸಾಫ್ಟ್ವೇರ್ ಕಲಿಕೆ ಸರಳವಾಗುವುದು, ತನ್ಮೂಲಕ ಚಾರ್ಟರ್ಡ್ ಅಕೌಂಟೆನ್ಸಿ ವಿಷಯದ ಬಗ್ಗೆ ಜ್ಞಾನ ಪಡೆದುಕೊಳ್ಳಬಹುದು. ಬಿಸಿಎ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ವಿವಿಧ ಸಂಸ್ಥೆಯಲ್ಲಿ ಲಭ್ಯವಿರುವ ಅಕೌಂಟೆಂಟ್ ಹಾಗೂ ಎಸ್ಎಪಿ ಇಂಜಿನಿಯರ್ ಉದ್ಯೋಗ ಪಡೆಯಲು ಈ ಕಾರ್ಯಗಾರ ಸಹಾಯಕಾರಿ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಟ್ಯಾಲಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಸಂತ ಅಲಾಶಿಯಸ್ ಕಾಲೇಜಿನ ಉಪನ್ಯಾಸಕಿ ಶರ್ಲಿ ವ್ಯಾಲೆಂಟಿನ ಅಂದ್ರದೆ ರವರು ಮಾತನಾಡಿ, ಪ್ರಾಯೋಗಿಕವಾಗಿ ವಿವರಿಸಿದರು.

ಇಂದಿನ ವಾಣಿಜ್ಯ ಕ್ಷೇತ್ರಗಳಲ್ಲಿ ಲೆಕ್ಕಪತ್ರಗಳ ಲೆಕ್ಕಚಾರ ಮಾಡಲು ಅಕೌಂಟಿಂಗ್ ಬಗ್ಗೆ ಎಲ್ಲಾ ಯುವಕರಲ್ಲಿ ಜ್ಞಾನದ ಅರಿವು ಇರಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಕೌಶಲಾಭಿವೃದ್ಧಿ ಕಲಿಕೆಯ ಮೂಲಕ ಸಂಶೋಧನ ಮನಸ್ಥಿತಿ ಬೆಳೆಸಿ ಮತ್ತು ಉತ್ತಮ ಮಾಹಿತಿ ಮತ್ತು ಮಾರ್ಗದರ್ಶನ ಮೂಲಕ ಉದ್ಯೋಗ ಪಡೆಯಲು ಈ ಕಾರ್ಯಗಾರ ಸಹಕಾರಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಶುಭ ಹಾರೈಸಿದರು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಾಹಿತಿ ತಂತ್ರಜ್ಞಾನ ಕ್ಲಬ್ ನ ನಿರ್ದೇಶಕ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ರವರು ಕಾರ್ಯಗಾರದ ಮುಖ್ಯ ಉದ್ದೇಶ ಮತ್ತು ಪ್ರಾಮುಖ್ಯತಾ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಸುಷ್ಮಾ, ದಿವ್ಯಶ್ರೀ,ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಪ್ ನಾಯಕ್, ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದರು. ಕು. ಸುಪ್ರಿಯ ಮತ್ತು ಬಳಗ ಪ್ರಾರ್ಥಿಸಿ, ಪ್ರಜ್ವಲ್ ಸಿ ಮೆಂಡನ್ ವಂದಿಸಿದರು. ಶೆಟ್ಟಿ ತರುಣ ರಮೇಶ್ ಸ್ವಾಗತಿಸಿ, ಗೌರವ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply