ಪತ್ರಕರ್ತ ಶೇಖರ್ ಅಜೆಕಾರು ಅವರ ಶ್ರದ್ಧಾಂಜಲಿ ಸಭೆ

ಕಾರ್ಕಳ: ಗ್ರಾಮೀಣಭಾಗದಿಂದ ರಾಜ್ಯ ಮಟ್ಟದವರೆಗೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಗಾಗಿ ಸರಕಾರವು ಅನುದಾನ ಒದಗಿಸಬೇಕು ಎಂದು ಫೆಡರೇಷನ್ ಆಫ್ ಕ್ವಾರಿ ಮತ್ತು ಕ್ರಷರ್ ಮಾಲಕರ ಸಂಘದ ರಾಜ್ಯಧ್ಯಕ್ಷರಾದ ಡಾ. ರವೀಂದ್ರ  ಶೆಟ್ಟಿ ಬಜಗೋಳಿ ಹೇಳಿದರು.   ಸೋಮವಾರ ಕಾರ್ಕಳ ಹೋಟೆಲ್ ಪ್ರಕಾಶ್ ಸಬಾಂಗಣದಲ್ಲಿ  ನಡೆದ ಅಗಲಿದ ಪತ್ರಕರ್ತ ಶೇಖರ್ ಅಜೆಕಾರು  ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಶೇಖರ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು. ಬದುಕಿಗೆ ಸಾಹಿತ್ಯವೆ ಆಧಾರವಾಗಿತ್ತು. ಆದರೆ ಪತ್ರಕರ್ತರ ನೆಲೆಯಲ್ಲಿ ಸರಕಾರವು ಮೂಲಸೌಕರ್ಯ ಒದಗಿಸಬೇಕು ಎಂದರು. 

ಹಿರಿಯ ಮುಖಂಡ ಬಿಪಿನ್ ಚಂದ್ರ ಪಾಲ್ ಮಾತನಾಡಿ , ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮೂಲಕ ಶೇಖರ ಅಜೆಕಾರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹಾನ್ ಚೇತನವಾಗಿದ್ದಾರೆ.ಸಾಹಿತ್ಯ ಧರ್ಮವೆ ಅವರ ಉಸಿರಾಗಿತ್ತು ಎಂದರು. 

ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ  ಮೊಹಮ್ಮದ್ ಷರೀಫ್ ಮಾತನಾಡಿ ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದ ಸೇವೆ ಶೇಖರ ಅಜೆಕಾರು ಅವರ ಅನನ್ಯವಾದದ್ದು ಶೇಖರ್ ಅಜೆಕಾರ್ ಸಾವಿರಕ್ಕೂ ಅಧಿಕ ಸಾಧಕರಿಗೆ ಪ್ರಶಸ್ತಿ ನೀಡಿದ್ದರು. ಈ ವರ್ಷದಿಂದ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶೇಖರ್ ಅಜೆಕಾರ್ ಹೆಸರಿನಲ್ಲಿ ಸಾಹಿತ್ಯ ಹಾಗೂ ಪತ್ರಕರ್ತರ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದರು. 

ಸಭೆಯಲ್ಲಿ , ಕಸಾಪ ಅದ್ಯಕ್ಷ ಪ್ರಭಾಕರ್ ಕೊಂಡಳ್ಳಿ,  , ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ,  ಜ್ಞಾನ ಸುಧಾ ಕಾಲೇಜುನ ಪಿ ಆರ್ ಒ  ಜ್ಯೋತಿ ಪದ್ಮನಾಭ ಬಂಡಿ , ಮಾಧ್ಯಮ ಬಿಂಬಸಂಪಾದಕ ವಸಂತ ಕುಮಾರ್,ಗಂಗಾಧರ ಪಣಿಯೂರು ಸೇರಿದಂತೆ  ಪತ್ರಕರ್ತರು‌ ಶೇಖರ್ ಅಜೆಕಾರು ಭಾವಚಿತ್ರ ಕ್ಕೆ  ಪುಷ್ಪ ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶೇಖರ ಅಜೆಕಾರು ಕುಟುಂಬಕ್ಕೆ ಅರ್ಥಿಕ ಬಲತುಂಬುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

 
 
 
 
 
 
 
 
 
 
 

Leave a Reply